ನವದೆಹಲಿ, ಫೆಬ್ರವರಿ 11: ವ್ಯಕ್ತಿಯೊಬ್ಬರು ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ರೋಹಿಣಿ ಸೆಕ್ಟರ್ 32 ರ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿಯಲ್ಲಿ ಕಾರ್ಮಿಕ ಬಿರ್ಜು ಕುಮಾರ್ ಮತ್ತು ಅವರ ಸ್ನೇಹಿತ ಮನೆಗೆ ಹೋಗುತ್ತಿದ್ದಾಗ ಕುಮಾರ್ಕ್ತಿ ಮ್ಯಾನ್ಹೋಲ್ಗೆ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಕುಮಾರ್ ಮತ್ತು ಅವರ ಸ್ನೇಹಿತ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು, ಸ್ನೇಹಿತನಿಗೆ ಕುಮಾರ್ ಬಿದ್ದಿರುವ ಪರಿವೇ ಇರಲಿಲ್ಲ.
ಸ್ನೇಹಿತ ಮರುದಿನ ಕುಮಾರ್‌ಗೆ ಕರೆ ಮಾಡಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಮರುದಿನವೂ ಕುಮಾರ್‌ನ ಸುಳಿವು ಯಾವುದಾದರೂ ಸಿಗದಿದ್ದಾಗ, ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಮ್ಯಾನ್‌ಹೋಲ್ ಪಕ್ಕದಲ್ಲಿ ಅವನ ಚಪ್ಪಲಿಗಳು ಕಂಡುಬಂದವು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಕುಮಾರ್ ಅವರ ಮೃತದೇಹದಿಂದ ಹೊರ ತೆಗೆಯಲಾಯಿತು.
ಫೆಬ್ರವರಿ 5 ರಂದು ದೆಹಲಿಯ ಜನಕಪುರಿಯಲ್ಲಿ 25 ವರ್ಷದ ಕಮಲ್ ಧಯಾನಿ ಬೈಕ್‌ನಲ್ಲಿ ದೆಹಲಿ ಜಲ ಮಂಡಳಿಯು ಸುಮಾರು 15 ಅಡಿ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ, ಅದಾದ ಐದು ದಿನಕ್ಕೆ ಈ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ