ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ ‘ಪುಷ್ಪ’. ಈ ಸಿನಿಮಾ ಸೂಪರ್ ಹಿಟ್ ಆಗಲು ಹಲವು ಕಾರಣಗಳಿವೆ. ಆದರೆ, ‘ಪುಷ್ಪ’ ಇಷ್ಟೊಂದು ಫೇಮಸ್ ಆಗಲು ತಾನೂ ಒಂದು ಕಾರಣ ಅಂತ ನಟಿಯೊಬ್ಬರು ಹೇಳಿಕೊಂಡಿದ್ದಾರೆ. ಯಾರವರು ಗೊತ್ತಾ?

ಭಾರತೀಯ ಚಿತ್ರರಂಗದ ದಾಖಲೆಗಳನ್ನು ಪುಡಿಗಟ್ಟಿದ ಸಿನಿಮಾ ‘ಪುಷ್ಪ’. ಟಾಲಿವುಡ್ಗೆ ಸೀಮಿತವಾಗಿದ್ದ ಅಲ್ಲು ಅರ್ಜುನ್ರನ್ನು ಪ್ಯಾನ್ ಇಂಡಿಯಾ ಹೀರೋ ಆಗಿ ಬದಲಿಸಿತು. ಅಲ್ಲು ಅರ್ಜುನ್ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಈ ಚಿತ್ರ, ಬಾಲಿವುಡ್ನಲ್ಲೇ 800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಯಶಸ್ಸಿಗೆ ತಾನೂ ಒಂದು ಕಾರಣ ಎನ್ನುತ್ತಿದ್ದಾರೆ ನಟಿ ಹಾಗೂ ನಿರ್ಮಾಪಕಿ ಮಂಚು ಲಕ್ಷ್ಮಿ.

ಟಾಲಿವುಡ್ನಲ್ಲಿ ನಟಿ, ನಿರ್ಮಾಪಕಿ ಮತ್ತು ನಿರೂಪಕಿಯಾಗಿ ಮಂಚು ಲಕ್ಷ್ಮಿ ಗುರುತಿಸಿಕೊಂಡಿದ್ದಾರೆ. ಅವರು ಏನೇ ಮಾತನಾಡಿದರೂ, ಅದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುತ್ತದೆ. ಅವರ ವಿಶಿಷ್ಟ ತೆಲುಗು-ಇಂಗ್ಲಿಷ್ ಮಿಶ್ರಿತ ಮಾತಿನ ಶೈಲಿಯಿಂದಾಗಿ, ಅವರ ಮಾತುಗಳು ಮೀಮ್ಸ್ ರೂಪದಲ್ಲಿ ವೈರಲ್ ಆಗುವುದು ಸಾಮಾನ್ಯ.

’ಪುಷ್ಪ’ ಸಿನಿಮಾ ಇಷ್ಟೊಂದು ಫೇಮಸ್ ಆಗಲು ಮಂಚು ಲಕ್ಷ್ಮಿ ಕೂಡ ಒಂದು ಕಾರಣ ಅನ್ನೋದು ನಿಮಗೆ ಗೊತ್ತಾ? ಇತ್ತೀಚೆಗೆ ‘ಲೇಚೆಂದಿ ಮಹಿಳಾ ಲೋಕಂ’ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಚು ಲಕ್ಷ್ಮಿ, ‘ಪುಷ್ಪ’ ಚಿತ್ರದ ಒಂದು ಫೇಮಸ್ ಡೈಲಾಗ್ ಬಗ್ಗೆ ಮಾತನಾಡಿದ್ದು, ಇದೀಗ ಮತ್ತೆ ವೈರಲ್ ಆಗಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಚು ಲಕ್ಷ್ಮಿ, ‘ಫ್ಲವರ್ ಅನ್ಕೊಂಡ್ಯಾ… ಫೈರ್’ ಅನ್ನೋ ಡೈಲಾಗ್ ಅನ್ನು ಮೊದಲು ಬಳಸಿದ್ದು ತಾನೇ ಎಂದು ಹೇಳಿದ್ದಾರೆ. ‘ಈ ಡೈಲಾಗ್ ಮೂಲತಃ ನನ್ನದು, ಬೇಕಿದ್ದರೆ ಹಳೆಯ ವಿಡಿಯೋಗಳನ್ನು ಪರಿಶೀಲಿಸಬಹುದು’ ಎಂದೂ ಅವರು ಹೇಳಿದ್ದಾರೆ. ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿವೆ.

ನಿಜ ಹೇಳಬೇಕೆಂದರೆ, ಬಹಳ ವರ್ಷಗಳ ಹಿಂದೆ ಒಂದು ಸಂದರ್ಶನದಲ್ಲಿ ಮಂಚು ಲಕ್ಷ್ಮಿ ತಮ್ಮ ವ್ಯಕ್ತಿತ್ವದ ಬಗ್ಗೆ ವಿವರಿಸುವಾಗ ಈ ಡೈಲಾಗ್ ಬಳಸಿದ್ದರು. ‘ನನ್ನನ್ನು ತುಂಬಾ ಜನ ಫ್ಲವರ್ ಅನ್ಕೋತಾರೆ, ಆದರೆ ನಾನು ಫೈರ್’ ಎಂದು ಹೇಳಿದ್ದರು. ಈಗ ನೆಟ್ಟಿಗರು ಆ ಹಳೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ.

Source link
'ಪುಷ್ಪ' ಹಿಟ್ ಆಗೋಕೆ ಈ ನಟಿಯೇ ಕಾರಣ? ಫ್ಲವರ್ ಅಲ್ಲ ಫೈರ್ ಡೈಲಾಗ್ ಮೊದಲು ಹೇಳಿದ್ದು ಇವರೇ!