ಬೆಂಗಳೂರು, ಡಿಸೆಂಬರ್ 08: ಒಂದನೇ ತರಗತಿ (1ನೇ ತರಗತಿ ಪ್ರವೇಶ) ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಕಳೆದ ವರ್ಷ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಶಿಕ್ಷಣ ಇಲಾಖೆ (ಕರ್ನಾಟಕ ಶಿಕ್ಷಣ ಇಲಾಖೆ) ಈ ವರ್ಷಕ್ಕೆ ವಿನಾಯಿತಿಯನ್ನು ನೀಡಿತ್ತು, ಆದರೆ ಈ ವಿನಾಯತಿ ಇದೀಗ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
ಸಂಘರ್ಷಕ್ಕೆ ಕಾರಣವಾಯ್ತು ವಯೋಮಿತಿ ಸದಲಿಕೆ
ಶಾಲಾ ಶಿಕ್ಷಣ ಇಲಾಖೆ 2025-26ನೇ ಸಾಲಿಗೆ ಸಿಮಿತಗೊಳಿಸಿ ಒಂದು ವರ್ಷ ವಯೋಮಿತಿ ಸಡಲಿಕೆ ಮಾಡಿತ್ತು. ಕಳೆದ ವರ್ಷ 1ನೇ ತರಗತಿ ದಾಖಲಾತಿಗೆ 5.5 ವರ್ಷ ತುಂಬಿರಬೇಕು. ಜೊತೆಗೆ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್-2 ಸಂಪೂರ್ಣ ಆಗಿರಬೇಕು ಅಂತಾ ಕಂಡೀಷನ್ ಮೇಲೆ ಅವಕಾಶ ನೀಡಿತ್ತು. ಮುಂದಿನ ವರ್ಷ ಕಡ್ಡಾಯವಾಗಿ ಒಂದನೇ ತರಗತಿ ದಾಖಲಾತಿಗೆ 6 ವರ್ಷ ತುಂಬಿರಬೇಕು ಅಂತಾ ಹೇಳಿದ್ದರು. ಆದರೆ ಈಗ ಮತ್ತೆ ಪ್ರಸಕ್ತ ವರ್ಷ 2026-27ನೇ ಸಾಲಿಗೂ ವಯೋಮಿತಿ ಸಡಲಿಕೆ ನೀಡುತ್ತಿದ್ದಾರೆ. ರಾಜ್ಯ ಶಿಕ್ಷಣ ನೀತಿಯಲ್ಲಿ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಲಿಕೆ ಮಾಡುವಂತೆ ಸರ್ಕಾರಕ್ಕೆ ಹಾಗೂ ಡಿಸಿಎಂ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: TV9 ಇಂಪ್ಯಾಕ್ಟ್: ಮೊದಲನೇ ತರಗತಿ ಪ್ರವೇಶಕ್ಕೆ ಮಗು 6 ವರ್ಷ ಪೂರ್ತಿಗೊಳಿಸಿರಬೇಕೆಂಬ ನಿಯಮ ಸದಲಿಸಿದ ಸರ್ಕಾರ
ಜೂನ್ 1 ರಿಂದ 90 ದಿನಗಳವರೆಗೆ ವಯೋಮಿತಿ ವಿನಾಯಿತಿಗೆ ಅನುಮತಿ ಕೋರಿಕೆ ಬಂದಿದೆ. 2026–27 ಶೈಕ್ಷಣಿಕ ವರ್ಷದ 1ನೇ ತರಗತಿ ಪ್ರವೇಶಕ್ಕೆ 6ವರ್ಷ ವಯೋಮಿತಿ ಕಡ್ಡಾಯ ಬೇಡ. ಕನಿಷ್ಠ 90 ದಿನಗಳ ವಿನಯತಿ ನೀಡಿ, ಇಲ್ಲದಿದ್ದರೆ ತೊಂದರೆಯಾಗುತ್ತದೆ ಎಂದು ಪೋಷಕರಾದ ಧನುಷ್ ಹೇಳಿದ್ದಾರೆ.
90 ದಿನಗಳ ವಯೋಮಿತಿ ಸಡಲಿಕೆಗೆ ಹೆಚ್ಚುವರಿ ಪಟ್ಟು
ಸರ್ಕಾರ ಕಳೆದ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿತ್ತು. ಜೊತೆಗೆ ಯುಕೆಜಿ ಸಂಪೂರ್ಣ ಮಾಡಿರಬೇಕು. ಆದರೆ ಸರ್ಕಾರದ ಆದೇಶ ಪಾಲನೆ ಮಾಡಿಸಿಕೊಂಡು ಎಲ್ಕೆಜಿ ಶಾಲೆಗೆ ದಾಖಲಾದ ಮಕ್ಕಳಿಗೆ ದೊಡ್ಡ ಸಂಕಷ್ಟ ಶುರುವಾಗಿದೆ. ಸದ್ಯ ಯುಕೆಜಿ ಮುಗಿಸಿರುವ ಮಕ್ಕಳು, ಈ ವರ್ಷ ಒಂದನೇ ತರಗತಿಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಕಡ್ಡಾಯ 6 ವರ್ಷ ಕಂಪ್ಲೀಟ್ ಆಗಿಲ್ಲ. 6 ವರ್ಷಕ್ಕೆ ಒಂದು ದಿನ ಹಾಗೂ ಒಂದು ತಿಂಗಳು ಕಡಿಮೆ ಇರುವ ಸಾವಿರಾರು ಮಕ್ಕಳು ಇದ್ದಾರೆ. ಇವರೆಲ್ಲ ಮತ್ತೆ ಯುಕೆಜಿ ಮಾಡಬೇಕಾದ ಸ್ಥಿತಿ ಎದುರಾಗಿದೆ. ಹೆಚ್ಚುವರಿ ರೂ ಶುಲ್ಕ ಕಟ್ಟಿ ಮರಳಿ ಯುಕೆಜಿಗೆ ಸೇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕನಿಷ್ಠ 90 ದಿನಗಳ ವಯೋಮಿತಿ ಸಡಲಿಕೆಗೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ಒಟ್ಟಿನಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕಿದೆ. ಪದೇ ಪದೇ ಮಕ್ಕಳ ವಿಚಾರದಲ್ಲಿ ತಪ್ಪು ನಿರ್ಧಾರಗಳಿಗೆ ಕೈಹಾಕಬಾರದಾಗಿದೆ. ಕಡ್ಡಾಯ ಒಂದು ನಿರ್ಧಾರಕ್ಕೆ ಇಲಾಖೆ ಬರಬೇಕಾಗಿದೆ.
ಹೆಚ್ಚಿನ ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.