ಮಂಡ್ಯ, ನವೆಂಬರ್ 26: ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದ್ದ ಮನೆಯಲ್ಲಿದ್ದ ಪ್ರಕರಣ ಸಂಬಂದ ಮದ್ದೂರು ಪುರಸಭೆ ಅಧ್ಯಕ್ಷ ಎಂಕೆ ಮರೀಗೌಡ ಅವರನ್ನು ಬಂಧಿಸಿದ್ದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಆಗಸ್ಟ್ 26ರಂದು ಮದ್ದೂರಿನ ದೊಡ್ಡಿ ಬೀದಿಯಲ್ಲಿ ‘ಗ್ಯಾಸ್ ಚಂದ್ರು’ ಎಂಬವರ ಮನೆಗೆ ಮುಸುಕುಧಾರಿಯಾಗಿ ನುಗ್ಗಿ ಮರೀಗೌಡ ದರೋಡೆ ನಡೆಸಿದ್ದು ತನಿಖೆಯಿಂದ ಬಹಿರಂಗವಾಗಿದೆ. ಮನೆಯಲ್ಲಿದ್ದ ಚಂದ್ರು ಅವರ ಪತ್ನಿ ಸುಶೀಲಮ್ಮ ಅವರನ್ನು ಬೆದರಿಸಿ ಸುಮಾರು 50 ಗ್ರಾಂ ಚಿನ್ನಾಭರಣ ಮತ್ತು ವಜ್ರದ ಅರಳಿನ ಓಲೆ ಕಳವು ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಹಿನ್ನೆಲೆಯಲ್ಲಿ ಮದ್ದೂರು ಠಾಣೆಯ ಪೊಲೀಸರು ಮರೀಗೌಡನನ್ನು ಬಂಧಿಸಿದ್ದಾರೆ. ಕಳವು ಮಾಡಿದ ಆಭರಣಗಳನ್ನು ಆರೋಪಿ ಗಿರವಿಗೆ ಇಟ್ಟಿರುವುದೂ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರುದರೋಡೆ ಮಾಡಿದ ಒಡವೆಗಳನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ