ನಾಗಮಂಗಲದಲ್ಲಿ ಭಾರೀ ಅಕ್ರಮ: ಲೋಕಾಯುಕ್ತ ದಾಳಿ ವೇಳೆ ಬಯಲು; 11 ಅಧಿಕಾರಿಗಳ ಪೈಕಿ ಐವರು ಜೈಲಿಗೆ

ನಾಗಮಂಗಲದಲ್ಲಿ ಭಾರೀ ಅಕ್ರಮ: ಲೋಕಾಯುಕ್ತ ದಾಳಿ ವೇಳೆ ಬಯಲು; 11 ಅಧಿಕಾರಿಗಳ ಪೈಕಿ ಐವರು ಜೈಲಿಗೆ


ಮಂಡ್ಯ, ಜನವರಿ 14: ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಬಗರ್‌ಹುಕುಂ (ಬಗರ್ ಹುಕುಂ) ಅಡಿಯಲ್ಲಿ 320 ಜಮೀನು ಹಂಚಿಕೆಯಲ್ಲಿ (ಭೂ ಹಗರಣ) ಭಾರೀ ಅಕ್ರಮ ನಡೆದಿದೆ. ನಾಗಮಂಗಲ ತಾಲೂಕು ಕಚೇರಿ ಮೇಲೆ ಅಧಿಕಾರಿಗಳ ದಾಳಿ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಒಟ್ಟು 11 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸ್ವೀಕರಿಸಿದ ಐವರನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು ಉಳಿದವರಿಗಾಗಿ ಶೋಧ.

ಬಂಧಿತರು

ನಾಗಮಂಗಲ ತಾಲೂಕು ಕಚೇರಿಯ ಎಲ್&ಡಿ ಶಾಖೆಯ ಎಸ್‌ಡಿಎ ಸತೀಶ್, ಶಿರಸ್ತೇದಾರ್‌ಗಳಾದ ರವಿಶಂಕರ್, ಉಮೇಶ್, ಯೋಗೇಶ್, ರೆಕಾರ್ಡ್ ರೂಂನ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಬಂಧಿತರು. ಸದ್ಯ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಮತ್ತೆ ಬಂಧನದ ಭೀತಿಯಲ್ಲಿದ್ದ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬಿಗ್ ರಿಲೀಫ್

ಸಾರ್ವಜನಿಕರ ದೂರಿನ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಾಗಮಂಗಲ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ನಿನ್ನೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಇಂದು ಸಂಜೆವರೆಗೂ ತಾಲೂಕು ಕಚೇರಿಯಲ್ಲಿ ಕಡತಗಳು ಹಾಗೂ ದಾಖಲೆಗಳನ್ನು ಸುದೀರ್ಘವಾಗಿ ಪರಿಶೀಲಿಸಲಾಗಿದೆ. ಈ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲಂಚ ನೀಡಿದವರಿಗೆ ಜಮೀನು ಹಂಚಿಕೆ ಮಾಡಿರುವುದು ಇದೆ. ಅರ್ಹರಿಗೆ ನೀಡದೇ ಹಣ ಕೊಟ್ಟವರಿಗೆ ಜಮೀನು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಜಮೀನು ಕಬಳಿಕೆ ಆರೋಪ: ಬಿಜೆಪಿಯಿಂದ ದಾಖಲೆ ಬಿಡುಗಡೆ

ಸದ್ಯ 11 ಜನರ ಮೇಲಿಂದ ಐವರ ಬಂಧನವಾಗಿದ್ದು, ಅಧಿಕಾರಿಗಳು ಲೋಕಾಯುಕ್ತ ಶೋಧ ಕಾರ್ಯ ಮುಂದುವರಿಸಿದ್ದಾರೆ. 320 ಹಿನ್ನೆಲೆ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿರುವುದು ದೃಢಪಟ್ಟ ಪ್ರಕರಣ ಮತ್ತಷ್ಟು ತೀವ್ರತೆಯನ್ನು ಹೊಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:27 pm, ಬುಧವಾರ, 14 ಜನವರಿ 26



Source link

Leave a Reply

Your email address will not be published. Required fields are marked *