Headlines

19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​: ಬಲಿಯಾಗಿದ್ದು 2 ಜೀವ

19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​:  ಬಲಿಯಾಗಿದ್ದು 2 ಜೀವ


ಮೃತ ಮಗಳು ಮತ್ತು ತಾಯಿಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಮಂಡ್ಯ, ಫೆಬ್ರವರಿ 09: 19 ವರ್ಷದ ಯುವತಿ ಮತ್ತು ಎರಡು ಮಕ್ಕಳ ತಂದೆಯ ಪ್ರೇಮ ಪ್ರಕರಣದ ಹಿನ್ನೆಲೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ(46) ಮತ್ತು ಪ್ರಿಯಾಂಕಾ(19) ಮೃತರು. ಪ್ರಿಯಾಂಕಾಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು ಎನ್ನಲಾಗಿತ್ತು, ವಿವಾಹಿತ ಪುರುಷನ ಜೊತೆಗಿನ ಆಕೆಯ ಪ್ರೇಮವೇ ಘಟನೆಗೆ ಕಾರಣ.

ಹೌದು, ಕೋಡಿಹಳ್ಳಿ ಗ್ರಾಮದನೇ ಆದ 34 ವರ್ಷದ ಮುತ್ತುರಾಜ್ ಎಂಬವನ ಜೊತೆ ಪ್ರಿಯಾಂಕಾಗೆ ಲವ್. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಈತ ಕೂಡ ಪ್ರಿಯಾಂಕಾಳ ಬಿದ್ದಿದ್ದ. ಮುತ್ತುರಾಜ್ ಪ್ರತಿದಿನವೂ ಪ್ರಿಯಾಂಕಾ ಮನೆಗೆ ಬರುತ್ತಿದ್ದ. ಅವರ ಪ್ರೀತಿಯ ವಿಷಯ ತಿಳಿಯದ ಮನೆಯವರು ಇದು ಸಾಮಾನ್ಯ ಎಂದುಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಪ್ರೀತಿಸುತ್ತಿರುವ ವಿಚಾರ ಪ್ರಿಯಾಂಕಾ ಪೋಷಕರಿಗೆ ಗೊತ್ತಾಗಿತ್ತು. ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು. ಹೀಗಿದ್ದರೂ ಸಹ ವಿವಾಹಿತ ಮುತ್ತುರಾಜ್ ಪ್ರಿಯಾಂಕಾಳನ್ನು ಪೀಡಿಸುತ್ತಿದ್ದ. ಇಲ್ಲ ಮರ್ಯಾದೆಗೆ ಹೆದರಿ ತಾಯಿ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಸಂಬಂಧದಲ್ಲೇ ಮದುವೆಗೆ ನಡೆದಿತ್ತು ತಯಾರಿ

ಇನ್ನು ಪ್ರಿಯಾಂಕಾ ಮತ್ತು ಮುತ್ತುರಾಜ್ ಪ್ರೇಮದ ವಿಷಯ ಮೊದಲು ಶಕುಂತಲಾದೇವಿ ಅವರಿಗೆ ಗೊತ್ತಾಗಿತ್ತು. ಬಳಿಕ ಅವರು ಈ ಬಗ್ಗೆ ತಮ್ಮ ಪತಿಗೆ ತಿಳಿಸಿದ್ದರು. ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಸಂಬಂಧದಲ್ಲೇ ಹುಡುಗನನ್ನು ಹುಡುಕಿ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಈ ವಿಷಯ ತಿಳಿದುಕೊಂಡಿದೆ. ಮಗಳು ತನ್ನ ಪ್ರೀತಿಯ ವಿಚಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಲಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಇಷ್ಟೆಲ್ಲ ನಡೆದು ಹೋಗಿದೆ ಎಂದು ಯುವತಿಯ ತಂದೆ ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆಯ ಬಗ್ಗೆ ಹಲಗೂರು ಠಾಣೆಗೆ ಶಕುಂತಲಾದೇವಿ ಪತಿ ಮಹೇಶ್ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *