Mangal Uday effects on zodiac signs: ನವೆಂಬರ್ 1, 2025 ರಿಂದ ಅಸ್ತನಾಗಿರುವ ಮಂಗಳ ಗ್ರಹವು 2026 ರಲ್ಲಿ ಉದಯಿಸಲಿದ್ದಾನೆ. ಇದು ಕೆಲವು ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ನೀಡಲಿದೆ. ಅದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಜ್ಯೋತಿಷ್ಯದಲ್ಲಿ ಮಂಗಳನನ್ನು ಗ್ರಹಗಳ ಸೇನಾಪತಿ ಎಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಶಕ್ತಿ, ಸಾಮರ್ಥ್ಯ, ಧೈರ್ಯ ಮತ್ತು ಸಹೋದರರೊಂದಿಗಿನ ಸಂಬಂಧವನ್ನು ಸೂಚಿಸುವ ಗ್ರಹವಾಗಿದೆ. ಮಂಗಳನು ರಕ್ತ ಸಂಬಂಧಿ ಕಾಯಿಲೆಗಳಿಗೂ ಕಾರಣಕರ್ತ. ಈತನ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ನವೆಂಬರ್ 1, 2025 ರಂದು ಸಂಜೆ 6:36 ಕ್ಕೆ ಅಸ್ತನಾಗಿದ್ದ. ಅಸ್ತನಾದಾಗ ಅದರ ಪರಿಣಾಮಗಳು ಹೆಚ್ಚಾಗಿ ಗೋಚರಿಸುವುದಿಲ್ಲ. ಇದೀಗ ಮೇ 2, 2026 ರಂದು ಬೆಳಗ್ಗೆ 04:30 ಕ್ಕೆ ಮತ್ತೆ ಉದಯಿಸಲಿದ್ದಾನೆ. ಮಂಗಳನ ಉದಯದಿಂದ ಯಾವ ರಾಶಿಗಳ ಅದೃಷ್ಟ ಹೊಳೆಯಲಿದೆ ಎಂದು ನೋಡೋಣ.

ಮಂಗಳನ ಉದಯ ವೃಷಭ ರಾಶಿಯವರಿಗೆ ವಿಶೇಷ ಲಾಭ ನೀಡಲಿದೆ. ಧೈರ್ಯ, ಉತ್ಸಾಹ ಹೆಚ್ಚುತ್ತದೆ. ಆದಾಯ, ಸಂಪತ್ತು ವೃದ್ಧಿಯಾಗಲಿದೆ. ಸ್ನೇಹಿತರೊಂದಿಗೆ ವ್ಯಾಪಾರ ಆರಂಭಿಸುವಿರಿ. ಮೇ ನಂತರ ಅವಿವಾಹಿತರಿಗೆ ಮದುವೆ ಯೋಗವಿದೆ. ವಿವಾಹಿತರ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

ಮಂಗಳನ ಉದಯ ಸಿಂಹ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭ ತರಲಿದೆ. ಮೇ ನಂತರ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ. ಆದಾಯ ಮತ್ತು ಉಳಿತಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿನ ಕಲಹಗಳು ಬಗೆಹರಿಯಲಿವೆ. ಉತ್ತಮ ಹೂಡಿಕೆ ಯೋಜನೆ ಆರಂಭಿಸುವಿರಿ. ಕುಟುಂಬದವರ ಆರೋಗ್ಯ ಸುಧಾರಿಸುತ್ತದೆ.

ವೃಶ್ಚಿಕ ರಾಶಿಗೆ ಮಂಗಳನ ಉದಯ ಲಾಭ ತರಲಿದೆ. ಮೇನಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ. ಸ್ಥಿರ ಉದ್ಯೋಗ, ಆಸ್ತಿ ಲಾಭ. ಅವಿವಾಹಿತರಿಗೆ ಸಂಗಾತಿ ಸಿಗುತ್ತಾರೆ.

(Disclaimer: ಇದು ಜ್ಯೋತಿಷ್ಯ ನಂಬಿಕೆ ಆಧಾರಿತ ಮಾಹಿತಿ. ಏಷ್ಯಾನೆಟ್ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)

Source link
Mangal Uday 2026: ಅಸ್ತನಾದ ಮಂಗಳ 2026ರಲ್ಲಿ ಉದಯ, ಈ ರಾಶಿಯವ್ರಿಗೆ ಬಂಪರ್ ಜಾಕ್‌ಪಾಟ್!