ಮಂಗಳೂರು, ಫೆಬ್ರವರಿ 04: ನದಿ, ಕಡಲಿಗೆ ದೋಣಿ ಇಳಿಸಿ, ಅಬ್ಬರದ ತೆರೆಗಳ ನಡುವೆ ಸಾಗಿ ಬಲೆ ಬೀಸಿ ಮೀನು ಹಿಡಿಯುವ ಸಾಹಸ ಪ್ರವೃತ್ತಿ ಮೀನುಗಾರಿಕೆ (ಮೀನುಗಾರಿಕೆ). ತಮ್ಮ ಬದುಕಿಗಾಗಿ ಜೀವವನ್ನೇ ಒತ್ತೆಯಿಟ್ಟು ವೃತ್ತಿ ನಡೆಸುವ ಈ ಮೀನುಗಾರರನ್ನು ತುರ್ತು ಸಂದರ್ಭದಲ್ಲಿ ರಕ್ಷಣೆ ಮಾಡುವುದಕ್ಕೆ ಮೀನುಗಾರರಿಗೆ ಮಾದರಿ ಕಾರ್ಯಗಳನ್ನು ಮಾಡಲಾಗುತ್ತದೆ. ಬೋಟ್ ಆಂಬುಲೆನ್ಸ್ (ದೋಣಿ ಆಂಬ್ಯುಲೆನ್ಸ್) ನಿರ್ಮಾಣ ಮಾಡುವ ಮೂಲಕ ತಮ್ಮ ರಕ್ಷಣೆಗೆ ತಾವೇ ಮುಂದಾಗಿದ್ದಾರೆ.
ರಾಜ್ಯ ಕರಾವಳಿಯ 320 ಕಿ.ಮೀ. 5 ಲಕ್ಷಕ್ಕೂ ಅಧಿಕ ಕುಟುಂಬಗಳು ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿವೆ. ಸಾಕಷ್ಟು ಸವಾಲಿನ ಸನ್ನಿವೇಶವನ್ನು ಎದುರಿಸಬೇಕಾದ ಈ ವೃತ್ತಿಯಲ್ಲಿ ಯಾವಾಗ ಅವಘಡ ಸಂಭವಿಸುತ್ತೆ ಅಂತಾ ಇರಲು ಸಾಧ್ಯವಿಲ್ಲ. ಹವಾಮಾನ ವೈಪರೀತ್ಯ, ಏಕಾಏಕಿ ಸಮುದ್ರದಲ್ಲಿ ಏಳುಪೇರು ಅಥವಾ ತಾಂತ್ರಿಕ ದೋಷಗಳಿಂದ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿ ಈವರೆಗೆ ಸಾಕಷ್ಟು ಜೀವಗಳು ಬಲಿಯಾಗಿವೆ.
ಇದನ್ನೂ ಓದಿ: ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್, ತಮ್ಮ ರಕ್ಷಣೆಗೆ ತಾವೇ ನಿರ್ಮಿಸಿಕೊಂಡ ಮೀನುಗಾರರು
ಈ ರೀತಿಯ ಅವಘಡ ಸಂಭವಿಸಿದಾಗ ಅಥವಾ ಮೀನುಗಾರಿಕೆ ನಡೆಸುವ ವೇಳೆ ಮೀನುಗಾರರಿಗೆ ಅನಾರೋಗ್ಯಕ್ಕೆ ತುತ್ತಾದರೆ, ಕ್ಷಿಪ್ರವಾಗಿ ಅವರ ರಕ್ಷಣೆಗೆ ಸಾಧ್ಯವಾಗುತ್ತದೆ. ಹೀಗಾಗಿ ರಾಜ್ಯ ಕರಾವಳಿಯಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಬೋಟ್ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಗಿದೆ. ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರ ಸಂಘದವರು ಸೇರಿ ಈ ಬೋಟ್ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.
16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ
ಸರ್ಕಾರ ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ನಿರಾಸೆಗೊಂಡ ಮೀನುಗಾರರು ಸರ್ಕಾರಕ್ಕೆ ಸೆಡ್ಡು ಹೊಡೆದು ತಮ್ಮ ಜೀವ ರಕ್ಷಣೆಗೆ ತಾವೇ ಮುಂದಾಗಿದ್ದಾರೆ, ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿದ್ದಾರೆ. ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಈ ಬೋಟ್ ಆಂಬ್ಯುಲೆನ್ಸ್ ದಾನಿಗಳ ಸಹಾಯದಿಂದ ಸಾಕಾರಗೊಂಡಿದೆ.
ತುರ್ತು ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಈ ಬೋಟ್ನಲ್ಲಿ ಅಳವಡಿಸಲಾಗಿದೆ. ಈ ಬೋಟ್ನಲ್ಲಿ 30 ಮಂದಿಗೆ ಅವಕಾಶವಿದ್ದು, ಸಂಪೂರ್ಣವಾಗಿ ಪ್ರಯಾಣಿಸಲು ಮೀನುಗಾರರ ಜೀವ ರಕ್ಷಣೆಗೆ ಅವಕಾಶವಿದೆ.
ಬೋಟ್ ಆಂಬ್ಯುಲೆನ್ಸ್ ಏನೆಲ್ಲಾ ಸೌಲಭ್ಯ
ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿರಿಸಿಕೊಂಡು ಬೋಟ್ ಆಂಬ್ಯುಲೆನ್ಸ್ ಕಾರ್ಯಾಚರಣೆ. ಚಾಲಕರನ್ನು ಒಳಗೊಂಡಂತೆ 15 ಜನರ ನುರಿತ ತಂಡ ಸಜ್ಜಾಗಿದೆ. ಬೋಟ್ನಲ್ಲಿ ಸೈರನ್, ಎಮರ್ಜೆನ್ಸಿ ಕೆಂಪು ದೀಪ, ಸ್ಟ್ರೆಚರ್, ಆಮ್ಲಜನಕ ವ್ಯವಸ್ಥೆ, ವೈದ್ಯಕೀಯ ಉಪಕರಣಗಳು, ಪ್ರಥಮ ಚಿಕಿತ್ಸೆ ಕಿಟ್ ಮತ್ತು ಲೈಫ್ ಜಾಕೆಟ್ಗಳಂತಹ ಸೌಲಭ್ಯಗಳಿವೆ. ಜೊತೆಗೆ ನುರಿತ ಆರೋಗ್ಯ ಸಿಬ್ಬಂದಿ ಇರಲಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕಾರ್ಖಾನೆಗೆ ಒಡಿಶಾ ಕಂಪನಿ ಹೆಸರು: ಸಿಡಿದೆದ್ದ ಮಂಗಳೂರಿಗರು
ಸರ್ಕಾರದ ನೆರವಿಗಾಗಿ ಕಾಯದೆ ಮೀನುಗಾರರೇ ಕೈಗೊಂಡ ಈ ಮಾನವೀಯ ಕಾರ್ಯ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. ಈ ಮೂಲಕ ಕರಾವಳಿಯಲ್ಲಿ ಮೀನುಗಾರರ ಜೀವ ರಕ್ಷಣೆಯ ಭರವಸೆ ಮೂಡಿಸಿದೆ. ಮೀನುಗಾರರ ಈ ಕಾರ್ಯದಿಂದ ಸರ್ಕಾರ ಇನ್ನಾದರೂ ಪ್ರೇರಣೆ ಪಡೆಯಲಿ’ ಎಂಬುದೇ ನಮ್ಮ ಆಶಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.