Headlines

ಹೈದ್ರಾಬಾದ್​​ನಲ್ಲಿ ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಸೈಬರ್​ ವಂಚಕರ ಹೆಡೆಮುರಿ ಕಟ್ಟಿದ್ರು

ಹೈದ್ರಾಬಾದ್​​ನಲ್ಲಿ ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಸೈಬರ್​ ವಂಚಕರ ಹೆಡೆಮುರಿ ಕಟ್ಟಿದ್ರು


ಪೋಲಿಸ್ ಜಪ್ತಿ ಮಾಡಿರುವ ವಸ್ತುಗಳು

ಮಂಗಳೂರು, ಫೆಬ್ರವರಿ 27: ವಿದೇಶದಲ್ಲಿದ್ದವರ ಜೊತೆ ಕೈಜೋಡಿಸಿ ಸೈಬರ್ ಕ್ರೈಂ (ಸೈಬರ್ ಕ್ರೈಮ್) ಆರು ಜನರನ್ನು ಹೈದರಾಬಾದ್ ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ (ಬಂಧನ). ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಬಂಧಿತರು. ದುರುಳರು ನಿನ್ನೆ ಒಂದೇ ದಿನ 2 ಕೋಟಿ ರೂ ವಹಿವಾಟು ಮಾಡಿದ್ದಾರೆ.

ಕಮಿಷನ್ ಆಸೆ ತೋರಿಸುವ ಖದೀಮರು

ಬ್ಯಾಂಕ್ ಖಾತೆದಾರರಿಗೆ 4 ರಿಂದ 6% ಕಮಿಷನ್ ನೀಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜಾಹಿರಾತು ನೀಡಲಾಯಿತು. ಅದನ್ನು ನಂಬಿ ಬಂದವರಿಂದ ಒಟಿಪಿ ಪಡೆದು ವಿದೇಶಕ್ಕೆ ರವಾನಿಸಲಾಗಿದೆ. ಇರುವ ಸೈಬರ್ ಕ್ರೈಂ ಖದೀಮರು ಹಣ ಎಗರಿಸುವ ಅಲ್ಲ.

ಇದನ್ನೂ ಓದಿ: ಸಾಲ ತೀರಿಸಲು ಕೆನರಾ, ಎಚ್‌ಡಿಎಫ್‌ಸಿ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ: ಸೈರನ್ ಸದ್ದಿಗೆ ಬೆದರಿ ಓಡಿದ್ದ ಕಳ್ಳ ಈಗ ಪೊಲೀಸ್ ವಶಕ್ಕೆ!

ಸದ್ಯ ಮಂಗಳೂರು ಮೊಹಮ್ಮದ್ ಇಕ್ಬಾಲ್ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಮಂಗಳೂರು ಆರೋಪಿಗಳು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ 18 ಮೊಬೈಲ್, 12 ಸಿಮ್ ಕಾರ್ಡ್, 1 ಲ್ಯಾಪ್ ಟಾಪ್, 15 ಚೆಕ್‌ಬುಕ್, 18 ಡೆಬಿಟ್ ಕಾರ್ಡ್ ಮತ್ತು 12 ಬ್ಯಾಂಕ್ ಪಾಸ್ ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿ ದಾಟಿ, ಹಂತಕರ ಬಂಧಿಸಿದ ಮಂಗಳೂರು ಪೊಲೀಸರು

ಇನ್ನು ಇತ್ತೀಚೆಗೆ ಮಂಗಳೂರು ಗಡಿ ಮೀರಿ ನಡೆಸಿದ ಕಾರ್ಯಾಚರಣೆಯಲ್ಲಿ ಸೈಬರ್ ವಂಚಕರ ಮೂಲವನ್ನೇ ಭೇದಿಸಿದ್ದರು. ಆ ಮೂಲಕ ದೇಶದಲ್ಲಿ ಇದುವರೆಗೂ ಯಾರೂ ಮಾಡದ ಆಪರೇಷನ್ ಮೂಲಕ ಖದೀಮರ ಹೆಡೆಮುರಿ ಕಟ್ಟಿದ್ದರು. ಮಂಗಳೂರು ಸೆನ್ ಪೊಲೀಸರ ಕಾರ್ಯಾಚರಣೆಗೆ ನೇಪಾಳ ಪೊಲೀಸರು ಸಾಥ್ ನೀಡಿದ್ದರು.

ಇದನ್ನೂ ಓದಿ: ವಾಹನ ಪ್ರಾಣವನ್ನಾದರೂ ಕೊಡಿ, ಬ್ಯಾಂಕ್ ಡೀಟೇಲ್ಸ್ ಕೊಡಬೇಡಿ! ಯಾಕೆ ಗೊತ್ತಾ?

ಮಂಗಳೂರು ಪೊಲೀಸರು11 ಜನರನ್ನು ಬಂಧಿಸಿದ್ದರು. ಬಂಧಿತರಿಂದ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಬಳಿಯಿದ್ದ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ವಿಚಿತ್ರ ಒಂದು ಖಾತೆಯಲ್ಲಿ 167 ಕೋಟಿ ರೂ ಹಣ ವರ್ಗಾವಣೆ ಆಗಿರುವುದು ಕೂಡ ಪತ್ತೆ ಆಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *