Headlines

ಮಂಗಳೂರು ಯುವಕನ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ?

ಮಂಗಳೂರು ಯುವಕನ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ?


ಮಂಗಳೂರು ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಪ್ರೀತಿಸಿದ ಯುವತಿಯಿಂದ ಅವಮಾನಕ್ಕೆ ನೊಂದು ಆತ್ಮಹತ್ಯೆ?

ಮಂಗಳೂರು, ಏಪ್ರಿಲ್ 12: ಮೂಡುಶೆಡ್ಡೆಯ ಎದುರು ನಿವಾಸಿ ಮಹಮ್ಮದ್ ಆಶಿಕ್(22) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ ಸಿಕ್ಕಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ, ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರು (ಮಂಗಳೂರು) ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 21 ರಂದು ಈದ್ ಹಬ್ಬದ ದಿನವೇ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಯಾವುದೋ ಕಾರಣಕ್ಕೆ ಮನನೊಂದು ಆಶಿಕ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಭಾವಿಸಿದ್ದರೂ, ಮೊಬೈಲ್ ಪರಿಶೀಲನೆ ವೇಳೆ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗ್ತಿದೆ.

ಕಾಲೇಜು ಸಹಪಾಠಿಯಾದ ಉಳ್ಳಾಲ ಮೂಲದ ಯುವತಿಯನ್ನು ಆಶಿಕ್ ಪ್ರೀತಿಸುತ್ತಿದ್ದರು. ಸಾಲದ್ದಕ್ಕೆ ಇವರಿಬ್ಬರೂ ಕ್ಲೋಸ್ ಆಗಿರುವ ವಿಚಾರ ಇಬ್ಬರ ಕುಟುಂಬಕ್ಕೂ ಗೊತ್ತಿತ್ತು. ಈ ನಡುವೆ ಸಮಯದಿಂದ ಆಶಿಕ್‌ನಿಂದ ಯುವತಿ ದೂರವಾಗತೊಡಗಿದಳು. ಹೀಗಾಗಿ ಸಾವಿಗೂ ಮುನ್ನ ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂಬ ಆಶಿಕ್ ಆಕೆಯನ್ನು ಕೇಳಿದ್ದು, ಈ ವೇಗೆ ನೀನು ಎಲ್ಲಿಯಾದರೂ ಸತ್ತು ಹೋಗು. ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹವನ್ನು ತೆಗೆಯಲು ಬರುತ್ತೇವೆ ಎಂದು ಯುವತಿ ಹೇಳಿದ್ದಳು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸವಿಗೂ ಮುನ್ನ ನಡೆದಿರುವ ಮಾತುಕತೆಗಳು ವಾಟ್ಸ್ಯಾಪ್ ಚಾಟ್‌ನಲ್ಲಿ ಬಹಿರಂಗವಾಗಿದೆ ಎನ್ನಲಾಗಿದ್ದು, ಸಾವಿಗೂ ಮುನ್ನ ವಿಡಿಯೋ ಕಾಲ್‌ನಲ್ಲಿ ಇಬ್ಬರು ಮಾತನಾಡಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: ಸುದೀಪ್ ಆತ್ಮಹತ್ಯೆ ಪ್ರಕರಣ; ಪತಿ ಸಾವಿಗೆ ಕಾರಣ ಬಿಚ್ಚಿಟ್ಟ ಉದ್ಯಮಿ ಪತ್ನಿ ಸೌಮ್ಯ

ಆಶಿಕ್ ಜೊತೆ ಮಾತನಾಡುವ ವೇಳೆ ಅವಾಚ್ಯ ಶಬ್ದಗಳಿಂದ ಯುವತಿ ನಿಂದಿಸಿದ್ದು, ಇದರಿಂದ ಆಶಿಕ್ ಮಾನಸಿಕವಾಗಿ ನೊಂದು ಅದೇ ದಿನ ರಾತ್ರಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಪ್ರೀತಿಯ ನಾಟಕವಾಡಿ ಹಲವಾರು ಉಡುಗೊರೆ ಪಡೆದು ಖರ್ಚು ಮಾಡದೆ, ಮಾನಸಿಕವಾಗಿಯೂ ಆಶಿಕ್‌ಗೆ ಹಿಂಸೆ ನೀಡಿದ ಆರೋಪವೀಗ ಕೇಳಿಬಂದಿದೆ. ಹೀಗಾಗಿ ಯುವತಿ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕನ ತಂದೆ ನೀಡಿದ ದೂರಿನ ಮೇರೆಗೆ ಕಾವೂರು ಠಾಣೆ ಪೊಲೀಸರು BNS 108, 352,351(3),3(5) ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *