ಕೃತಕ ಬುದ್ಧಿಮತ್ತೆ (AI)ಯಲ್ಲಿ ವಿಭಿನ್ನ ಅಪ್‌ಡೇಟ್‌ಗಳು ಬಂದಿದೆ. ಮನುಷ್ಯರು ಈ ಕೃತಕ ಬುದ್ಧಿಮತ್ತೆಯನ್ನು ಆಳವಾಗಿ ಅವಲಂಬಿಸಿಕೊಂಡಿದ್ದಾರೆ. ಇಂದಿನ ಯುವಕರು ಐ ಮೂಲಕ ಹಲವು ಹೊಸ ವಿಚಾರಗಳನ್ನು ಸಂಶೋಧನೆ ಮಾಡಿದ್ದಾರೆ. ಇದೀಗ ಮಂಗಳೂರಿನ ಯುವಕ ಮಾಡಿದ ಈ ಐ ಆವಿಷ್ಕರ ಭಾರೀ ಸುದ್ದಿ. ಮಂಗಳೂರಿನ ಸೋಹನ್ ಎಂ ರೈ ಎಂಬ ಯುವಕ ಕೃತಕ ಬುದ್ಧಿಮತ್ತೆ (AI) ಚಾಲಿತ ಸಾಧನದ ಬಗ್ಗೆ ವಿಡಿಯೋವೊಂದು ಹಂಚಿಕೊಂಡಿದ್ದಾರೆ. ಹೊಟ್ಟೆ ಹಸಿವಿನಿಂದ ಘರ್ಜಿಸಿದ್ರೆ ಈ ಕೃತಕ ಬುದ್ಧಿಮತ್ತೆ ಚಾಲಿತ ಸಾಧನ ಸ್ವಯಂಚಾಲಿತವಾಗಿ ಫುಡ್ ಆರ್ಡರ್ ಮಾಡುತ್ತದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.
ಈ ವಿಡಿಯೋದಲ್ಲಿ ಅವರು ಆವಿಷ್ಕರಿಸಿದ ಸಾಧನದ ಬಗ್ಗೆ ಸೋಹನ್ ಎಂ ರೈ ಹೀಗೆ ವಿವರಿಸಿದ್ದಾರೆ. ” ನಾನು ಹಸಿವಾಗುತ್ತಿರುವಾಗ ಮತ್ತು ಜೊಮಾಟೊದಲ್ಲಿ ಸ್ವಯಂಚಾಲಿತವಾಗಿ ಆಹಾರ ಆರ್ಡರ್ ಮಾಡುವ ಸಾಧನವನ್ನು ಕಂಡುಹಿಡಿದಿದ್ದೇನೆ. ಇದನ್ನು ಸೊಂಟಕ್ಕೆ ಬೆಲ್ಟ್ನಲ್ಲಿ ಫಿಕ್ಸ್ ಮಾಡಬಹುದಾದ ಸಾಧನ. ಬಳಸಿದ್ದೇನೆ” ಎಂದು ಹೇಳಿದರು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು?
ಸೋಹನ್ ಎಂ ರೈ ಆವಿಷ್ಕಾರ ಮಾಡಿದ ಹೊಸ ಸಾಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಊಟವಿಲ್ಲದೆ ಇಡೀ ದಿನ ಕುಳಿತುಕೊಳ್ಳಬೇಕು ಎಂದು ತಮಾಷೆಯಾಗಿ ಕೆಲವು ನೆಟ್ಟಿಗರು ಹೇಳಿದ್ದಾರೆ. ಹೊಟ್ಟೆ ಗೊಣಗುವುದು ಎಂದರೆ ಹಸಿವು ಎಂದರ್ಥವಲ್ಲ, ಆದರೆ ನಿಮ್ಮ ಹೊಸ ಸಾಧನೆಗೆ ಮೆಚ್ಚಲೇಬೇಕು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೋಹನ್ ಎಂ ರೈ, ನನಗೆ ಹಸಿದಾಗ ಅದಕ್ಕೆ ಅರ್ಥವಾಗುತ್ತದೆ. ಆಗ ತನ್ನ ಕೆಲಸ ಮಾಡುತ್ತಿದೆ. ಈ ಸಾಧನವು ಚಿಕ್ಕದಾಗಿದ್ದರೆ ಮತ್ತು ಅದು ಸಾಧ್ಯವಾಗದ ಕಾರಣ ನಾನು ಅದನ್ನು ನನ್ನ ಬೆಕ್ಕಿಗೆ ಜೋಡಿಸಬೇಕು ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಪದೇ ಪದೇ ಬಿಸಿನೀರು ಕೇಳಿದ್ದಕ್ಕೆ ವರನನ್ನು ಹುಚ್ಚ ಎಂದ ವಧು: ರಣರಂಗವಾಯಿತು ಮದುವೆ ಮಂಟಪ
ಸೋಹನ್ ಎಂ ರೈ ಯಾರು?
ಮಂಗಳೂರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನು ಪಡೆದರು, ಬೇರೆ ಬೇರೆ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಿದ ನಂತರ, ಅದನ್ನು ಆದ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದರು. ಸೋಹನ್ ಎಂ ರೈ ಅವರು “zikiguy” ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಟೆಕ್ ಅಪ್ಡೇಟ್ಗಳು ಮತ್ತು ಹೊಸ ಹೊಸ ತಂತ್ರಜ್ಞಾನದ ಬಗ್ಗೆ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. 2023ರಲ್ಲಿ ಜೊಮಾಟೊದಲ್ಲಿ ಡೆಲಿವರಿ ಬಾಯ್ ಆಗಿದ್ದು, ಅಲ್ಲಿ ಡ್ರೋನ್ ಬಳಸಿ ಆಹಾರವನ್ನು ಹೇಗೆ ಸಾಗಿಸಬಹುದು ಎಂಬ ಬಗ್ಗೆ ವಿಡಿಯೋ ಹಂಚಿಕೊಂಡರು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ