Adi Lakshmi Purana Kannada Serial Episode Update: ಆದಿಲಕ್ಷ್ಮೀ ಪುರಾಣ ಧಾರಾವಾಹಿಯಲ್ಲಿ ಅಮೃತಾ ಪಾತ್ರದಲ್ಲಿ ರಕ್ಷಿತಾ ಅವರು ನಟಿಸುತ್ತಿದ್ದರು. ಈ ಸೀರಿಯಲ್ ಶುರುವಾಗಿ ಮೂರು ತಿಂಗಳು ಆಗಿತ್ತು. ಈಗ ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಏನು?

ಮಧುಮಗಳು ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ರಕ್ಷಿತಾ ಅವರು ಇಂಜಿನಿಯರಿಂಗ್ ಕೂಡ ಓದುತ್ತಿದ್ದರು. “ಇವಳು ಓದೋದಿಲ್ಲ, ಸೀರಿಯಲ್ ಮಾಡ್ಕೊಂಡು ಇರ್ತಾಳೆ ಎಂದರು. ನಾನು ಎರಡನ್ನೂ ಬ್ಯಾಲೆನ್ಸ್ ಮಾಡ್ತಿದ್ದೆ. ಆಮೇಲೆ ನನಗೋಸ್ಕರ ಜಾಬ್ ಬಿಟ್ಟು ಫ್ಯಾಷನ್‌ನತ್ತ ಮುಖ ಮಾಡಿದೆ” ಎಂದು ರಕ್ಷಿತಾ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸೀರಿಯಲ್ ಮಾಡಬೇಕು, ಕಾರ್ಪೋರೇಟ್ ಜಾಬ್ ಮಾಡಬೇಕು ಎಂದು ರಕ್ಷಿತಾ ಅವರು ಅಂದುಕೊಂಡಿದ್ದರು. ನಾಲ್ಕು ಕಂಪೆನಿಯ ಜಾಬ್ ಆಫರ್ ಲೆಟರ್ ಇದ್ದರೂ ಕೂಡ ಅವರು ಕೆಲಸ ಬಿಟ್ಟು ಸೀರಿಯಲ್ ಲೋಕಕ್ಕೆ ಬಂದಿದ್ದರು.

ಆದಿಲಕ್ಷ್ಮೀ ಪುರಾಣ ಧಾರಾವಾಹಿಯಲ್ಲಿ ಅಮೃತಾ ಪಾತ್ರಕ್ಕೆ ರಕ್ಷಿತಾ ಗುಡ್‌ಬೈ ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂದು ರಿವೀಲ್ ಆಗಿಲ್ಲ. ಅಮೃತಾ ಪಾತ್ರಧಾರಿ ಹೊರಬಂದಿರೋ ಬಗ್ಗೆ ರಕ್ಷಿತಾ ಆಗಲೀ, ಸೀರಿಯಲ್ ತಂಡವಾಗಲೀ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ರಕ್ಷಿತಾ ಅವರ ಜಾಗಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ. ಮಾನಸಿ ಜೋಶಿ ಅವರು ಇನ್ಮುಂದೆ ಅಮೃತಾ ಆಗಿ ಮುಂದುವರೆಯಲಿದ್ದಾರಂತೆ. ಈ ಹಿಂದೆ ಪಾರು ಧಾರಾವಾಹಿಯಲ್ಲಿ ಮಾನಸಾ ನಟಿಸಿದ್ದರು.

ಮಾನಸಿ ಅವರ ಬದಲು ರಕ್ಷಿತಾ ಅವರೇ ಇರಲಿ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ರಕ್ಷಿತಾರನ್ನು ಅನೇಕರು ಮಿಸ್ ಮಾಡಿಕೊಳ್ತಿದ್ದಾರೆ.

Source link
4 ಜಾಬ್ ಆಫರ್ ಬಿಟ್ಟು ಆದಿ ಲಕ್ಷ್ಮೀ ಪುರಾಣ ಸೀರಿಯಲ್‌ಗೆ ಬಂದಿದ್ದ ನಟಿ; 3 ತಿಂಗಳಿಗೇ ಧಾರಾವಾಹಿಯಿಂದ ಔಟ್