
ರಾಯಚೂರು, ಏಪ್ರಿಲ್ 13: ಮಂತ್ರಾಲಯ ರಾಯರು (ಮಂತ್ರಾಲಯ ರಾಯರು) ತಪಸ್ಸು ಮಾಡಿದ್ದ ಜಪದ ಕಟ್ಟೆ ಸಮೀಪವಿರುವ ಜಮೀನಿನ ವಿವಾದ (ಭೂ ವಿವಾದ) ಇದೀಗ ತಾರಕ್ಕೇರಿದೆ. ಸರ್ಕಾರದ ಆದೇಶದನ್ವಯ ಇಂದು ಸರ್ವೆ ಕಾರ್ಯ ನಡೆಯುತ್ತಿದ್ದರೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿದ್ದು, ದೊಡ್ಡ ಹೈರಾಮಾವೇ ನಡೆದು ಹೋಗಿದೆ.
ಏನಿದು ಪ್ರಕರಣ?
ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಮಂತ್ರಾಲಯ ರಾಯರ 13 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ರಾಯರ ತಪಸ್ಸು ಮಾಡಿದ ಜಪದ ಕಟ್ಟೆಯಲ್ಲಿ ಬಿಚ್ಚಾಲಿ ಗ್ರಾಮದಲ್ಲಿದೆ. ಇದೇ ಬಿಚ್ಚಾಲಿ ಗ್ರಾಮದಲ್ಲಿ ರಾಯರ ಜಪದ ಕಟ್ಟೆ ದರ್ಶನಕ್ಕೆ ಅಪಾರ ಭಕ್ತರು ನಿತ್ಯ ಇಲ್ಲಿಗೆ ಬರ್ತಾರೆ. ಈ ಜಪದ ಕಟ್ಟೆ ಬಿಚ್ಚಾಲಿ ಮೂಲದ ಬಿಚ್ಚಾಲೆ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದೇ ಜಪದ ಕಟ್ಟೆಗೆ ಹೊಂದಿಕೊಂಡಿರುವ ಸ್ಥಳ ಹಾಗೂ ಅದರ ಪಕ್ಕದಲ್ಲಿರುವ ಒಟ್ಟು 2.33 ಜಮೀನಿನ ವಿವಾದ ಈಗ ತಾರಕ್ಕೇರಿದೆ. ಇದೇ ಭೂ ವಿವಾದ ಸಂಬಂಧ ಇಂದು ಸರ್ವೆ ನಡೆಯುವ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದೆ.
ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!
ಬಿಚ್ಚಾಲಿ ಗ್ರಾಮದ ರಾಯರ ಜಪದ ಕಟ್ಟೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ 35 ರಲ್ಲಿ 1.2 ಮತ್ತು ಸರ್ವೆ ನಂಬರ್ 37 ರಲ್ಲಿ 1.31 ಖಜಾನೆ ಸೇರಿ ಒಟ್ಟು 2 ಗಿರಾಕಿ 33 ಗುಂಟೆ ಜಮೀನಿನ ರಾಜ್ಯ ಸರ್ಕಾರ, ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿ. ರಾಘವೇಂದ್ರ ಸ್ವಾಮಿ ಚಾರಿತ್ರಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾಗಿ ಅಭಿವೃದ್ಧಿ ಪಡಿಸುವ ಉದ್ದೇಶಕ್ಕೆ 2021-22ರ ಸಾಲಿನ ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಆದರೆ ಇದೆ ಸರ್ವೆ ನಂಬರ್ನ ಕೆಲವೆಡೆ ಬಿಚ್ಚಾಲಿ ಗ್ರಾಮದ ಕೆಲವರು ಸಾಗುವಳಿ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಪಾದದ ರಾಘವೇಂದ್ರ ಆಚಾರ್ಯ ಹಾಗೂ ಎಟಿಟ್ ರಿಟ್ ಅರ್ಜಿ ಸಲ್ಲಿಸಿದ್ದು, ಕೇಸ್ ನಡೆದಿತ್ತು.
ಸರ್ವೆ ವೇಳೆ ರಂಪಾಟ: ಕೆಲವರು ಪೊಲೀಸ್ ವಶಕ್ಕೆ
ಕಳೆದ ವಾರ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ. ಹೀಗಾಗಿ ಸರ್ಕಾರದ ಮಂಜೂರಾತಿ ಆದೇಶದನ್ವಯ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಹೀಗಾಗಿ ಹೈಕೋರ್ಟ್ ಆದೇಶದನ್ವಯ ಇಂದು ಅಧಿಕಾರಿಗಳ ತಂಡ ಸಮೀಕ್ಷೆಗೆ ಮುಂದಾದರು. ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನಿಯೋಜಿಸಲಾಗಿದೆ. ಆದರೆ ಸರ್ವೆ ವೇಳೆ ನಡೆದದ್ದೇ ಬೇರೆ. ಸರ್ವೆ ವೇಳೆ ಸ್ಥಳೀಯರು, ಸಾಗುವಳಿದಾರರು ಆಕ್ರೋಶ ವ್ಯಕ್ತಪಡಿಸಿದರು. ಸರ್ವೆ ಮಾಡುವುದಕ್ಕೆ ಬಿಡಲ್ಲ ಅಂತ ಅಡ್ಡಿಪಡಿಸಿದರು. ಈ ವೇಳೆ ಎಷ್ಟೇ ಹೇಳಿದರು ಸುಮ್ಮನಾಗದ ಕೆಲವರು ದೊಡ್ಡ ರಂಪಾಟವೇ ಮಾಡಿದ್ದಾರೆ. ಈ ವೇಳೆ ಕೆಲವರು ಪೊಲೀಸರ ಜೊತೆ ವಾಗ್ವಾದ ಉಂಟಾಗಿದೆ. ಆಗ ಪರಿಸ್ಥಿತಿ ನಿಯಂತ್ರಿಸಲು ಕೆಲವರನ್ನ ವಶಕ್ಕೆ ಪಡೆದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ಸರ್ವೆ ಕಾರ್ಯ.
ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹೇಳಿದ್ದಾರೆ
ಇನ್ನು ಈ ಬಗ್ಗೆ ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹೇಳಿಕೆ ನೀಡಿದ್ದು, 2022ರಲ್ಲಿ ಕರ್ನಾಟಕ ಸರ್ಕಾರ ರಾಘವೇಂದ್ರ ಸ್ವಾಮಿ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಕಛೇರಿಯಲ್ಲಿ ಭೂ ಮಂಜೂರು ಮಾಡಿದೆ. ಸರ್ಕಾರದ ಮಂಜೂರಾತಿ ಆದೇಶದನ್ವಯ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಅತಿಕ್ರಮಣ ಸ್ಥಳದಲ್ಲಿ ಕಟ್ಟಡ ಕಟ್ಟಿದ್ದರೆ ಅದು ಕಾನೂನು, ನಿಯಮದಡಿ ತೆರೆವು ಮಾಡಲಾಗತ್ತೆ. ಈ ಸರ್ವೆ ಜಪದ ಕಟ್ಟೆಗೆ ಬರಲ್ಲ.
ಇದನ್ನೂ ಓದಿ: ಮಂತ್ರಾಲಯ ರಾಯರ ಹುಂಡಿಯಲ್ಲಿ ಕೇವಲ 21 ದಿನಗಳಲ್ಲಿ 2.48 ಕೋಟಿ ರೂ. ಸಂಗ್ರಹ
ಸದ್ಯ ಸರ್ವೆ ಕಾರ್ಯ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಈ ವಿವಾದ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಮುಂದೆ ಯಾವ ತಿರುವು ಪಡೆಯುತ್ತೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.