ರಾಯರ ಜಪದ ಕಟ್ಟೆ ವಿವಾದಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ರಾಯಚೂರು, ಏಪ್ರಿಲ್ 14: ಮಂತ್ರಾಲಯ ರಾಯರು (ಮಂತ್ರಾಲಯ ರಾಯರು) ತಪಸ್ಸು ಮಾಡಿದ್ದ ಜಪದ ಕಟ್ಟೆ ಬಳಿಯ ಜಮೀನು ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಕ ವಿರೋಧದ ಮಧ್ಯೆಯೂ ಸರ್ವೆ ಕಾರ್ಯ ಮುಗಿದಿದೆ. ತಳ್ಳಾಟ, ನೂಕಾಟದ ಮಧ್ಯೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾದ ವಿವಾದದ ಆದೇಶವನ್ನು ಪ್ರಶ್ನಿಸಿ, ಅರ್ಚಕರ ಕುಟುಂಬ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿರುವ ಜಪದ ಕಟ್ಟೆ ಸಮೀಪದ ಜಮೀನು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ವಿವಾದ ಯಾವಾಗ ಬೇಕಾದರೂ ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ರಾಯರ ಜಪದ ಕಟ್ಟೆ ಇದೆ. ಇದೇ ಜಪದ ಕಟ್ಟೆ ಪಕ್ಕದಲ್ಲೇ ತುಂಗಭದ್ರಾ ನದಿ ಕೂಡ ಹರಿಯುತ್ತೆ. ಬಿಚ್ಚಾಲಿ ಮೂಲದ ರಾಯರ ಶಿಷ್ಯ ಅಪ್ಪಣ್ಣರ ಜೊತೆ ರಾಯರು ಇದೇ ಜಪದ ಕಟ್ಟೆ ಸ್ಥಳದಲ್ಲಿ 13 ವರ್ಷ ತಪಸ್ಸು ಮಾಡಿದ್ರಂತೆ.
ಇದನ್ನೂ ಓದಿ: ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ
ಆ ಬಳಿಕ ನದಿ ದಾಟಿ ರಾಯರು ಮಂತ್ರಾಲಯಕ್ಕೆ ಹೋಗಿ ವೃಂದಾವನಸ್ಥರಾದರು. ಆ ಬಳಿಕ ರಾಯರು ಜ್ಯೋತಿ ರೂಪದಲ್ಲಿ ಅಪ್ಪಣ್ಣಾಚಾರ್ಯರಿಗೆ ದರ್ಶನ ನೀಡಿ, ನೀನು ನಿತ್ಯ ಮಂತ್ರಾಲಯಕ್ಕೆ ಬರಬೇಡ. ನಾನು ತಪಸ್ಸು ಮಾಡಿದ ಸ್ಥಳದಲ್ಲೇ ಬೃಂದಾವನ ನಿರ್ಮಿಸಿ ಅಲ್ಲೇ ಪೂಜೆ ಮಾಡು ಅಂತ ಹೇಳಿದ್ರಂತೆ. ಅದೇ ಸ್ಥಳದಲ್ಲಿ ರಾಯರ ಏಕಶಿಲಾ ಬೃಂದಾವನವನ್ನ ಅಪ್ಪಣ್ಣಾಚಾರ್ಯರು ನಿರ್ಮಿಸಿದ್ದರು. ಅದೇ ಅಪ್ಪಣ್ಣಾಚಾರ್ಯರ ವಂಶಸ್ಥರೇ ಇಲ್ಲಿ ಈಗ ಅರ್ಚಕರಾಗಿದ್ದಾರೆ.
ಜಪದ ಕಟ್ಟೆ ಪಕ್ಕದಲ್ಲಿರುವ ಸರ್ವೆ ನಂಬರ್ 35ರಲ್ಲಿ 1.2 ಹಾಗೂ ಸರ್ವೆ ನಂಬರ್ 37ರಲ್ಲಿ 1.31 ಬೆಲೆ ಸೇರಿ ಒಟ್ಟು 2 ಖರಾಕ್ 33 ಗುಂಟೆ ಜಮೀನಿನ ರಾಜ್ಯ ಸರ್ಕಾರ, ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿ ಎಂದು ಸೂಚಿಸಲಾಗಿದೆ. ರಾವೇಂದ್ರ ಸ್ವಾಮಿ ಚಾರಿತ್ರಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆ. ಆದರೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕುಟುಂಬದಲ್ಲಿ ಅರ್ಚಕರ ಪಾದದ ರಾಘವೇಂದ್ರ ಆಚಾರ್ಯ ಹಾಗೂ ಎಟ್ ರಿಟ್ ಅರ್ಜಿ ಹಾಕಿದ್ದರು.
ವಿರೋಧದ ಮಧ್ಯೇ ಸರ್ವೇ ಕಾರ್ಯ ಅಂತ್ಯ
ಕಳೆದ ವಾರ ರಿಟ್ ಅರ್ಜಿ ವಜಾ ಆದ ಹಿನ್ನೆಲೆ ನಿನ್ನೆ ಅಧಿಕಾರಿಗಳ ತಂಡ ಸೂಕ್ತ ಬಿಗಿ ಭದ್ರತೆಯಲ್ಲಿ ಜಮೀನಿನ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಿದ್ದರು. ಆಗಲೇ ದೊಡ್ಡ ಹೈಡ್ರಾಮಾ ಕೂಡ ನಡೆದಿತ್ತು. ಸರ್ವೆ ಮಾಡಲು ಬಿಡಲ್ಲ ಅಂತ ಕೆಲ ಸಾಗುವಳಿದಾರರು ಕಿಡಿಕಾರಿದ್ದರು. ಆಗ ತಳ್ಳಾಟ, ನೂಕಾಟವಾಗಿ ರಂಪಾಟ ನಡೆದುಹೋಗಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರನ್ನ ವಶಕ್ಕೂ ಪಡೆದಿದ್ದರು. ಸದ್ಯ ವಿರೋಧದ ಮಧ್ಯೆಯೂ ಸರ್ವ ಕಾರ್ಯ ಮುಗಿದಿದೆ.
ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!
ಸರ್ವೆ ಕಾರ್ಯ ಮುಗಿಸಿ, ಪಂಚನಾಮ ಮಾಡಿದ. ಆದರೆ ಪಂಚನಾಮೆಯ ವೇಳೆ ಅರ್ಚಕರ ಕುಟುಂಬ ಸಹಿ ಹಾಕಲು ನಿರಾಕರಿಸಿ, ವಾಗ್ವಾದಕ್ಕೆ ಕಾರಣವಾಯಿತು. ಕೂಡಲೇ ಸರ್ವೆಗೆ ಒಳಪಟ್ಟ ಕಟ್ಟಡಗಳನ್ನು ಖಾಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನೋಟಿಸ್ ನೀಡಿ ಅತಿಕ್ರಮಣ ಸ್ಥಳ ತೆರೆಯಲು ಅಧಿಕಾರಿಗಳ ತಂಡ ಸಿದ್ಧತೆ ನಡೆಸಿದೆ.
ಮಂತ್ರಾಲಯ ಮಠದ ವಿರುದ್ಧ ಅರ್ಚಕರ ಕುಟುಂಬ ಕಿಡಿ: ಕಾನೂನು ಹೋರಾಟಕ್ಕೆ ಸಜ್ಜ
ಇತ್ತ ಇಷ್ಟಕ್ಕೆ ಸುಮ್ಮನಾಗದ ಜ ಕಟ್ಟೆ ಅರ್ಚಕರ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಾವು ಮಂತ್ರಾಲಯ ರಾಯರ ಭಕ್ತರು. ಆದರೆ ಮಠದ ಆಡಳಿತದವರು ಹೀಗೆ ಮಾಡೋದು ಎಷ್ಟು ಸರಿ ಅಂತ ಮಂತ್ರಾಲಯ ಮಠದ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಮಂತ್ರಾಲಯದಲ್ಲಿ ಮೂಲ ರಾಮದೇವರ ವಿಗ್ರಹ ಕಳೆದು ಹೋದಾಗ, ನಮ್ಮ ಹಿರಿಯರು ಅದನ್ನು ಹುಡುಕಿ ಕೊಟ್ಟಿದ್ದರು. ಆಗ ಇದೆ ಶ್ರೀಮಠದವರು ನಮ್ಮ ಕುಟುಂಬ ಬಾಡಿ ಹೋಗಬಾರ್ದು ಅಂತ ಬಾಡದ ಕುಟುಂಬ ಅಂತ ತಾಮ್ರದ ಪತ್ರದ ಮೂಲಕ ಬಿರುದು ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಇದೆ. ಆದರೆ ಈ ರೀತಿ ನಮ್ಮ ಕುಟುಂಬಕ್ಕೆ ಮಾಡೋದು ಸರಿಯಲ್ಲ ಅಂತ ಅರ್ಚಕರಾದ ಪವನ್ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಜಪದ ಕಟ್ಟೆ ಅರ್ಚಕರ ಕಡೆ ಸಜ್ಜಾಗಿದ್ದಾರೆ.
ಸದ್ಯ ಭೂ ವಿವಾದ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದು ಯಾವಾಗ ಬೇಕಾದ್ರೂ ಮತ್ತೆ ಕಿಡಿಹೊತ್ತುವ ಸಾಧ್ಯತೆ ಇದೆ. ಇತ್ತ ತಡ, ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿದ್ದು ತೀವ್ರ ನಿಗಾವಹಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.