Headlines

ಆಸ್ತಿ ತೆರಿಗೆ ಬಾಕಿ: ಬೆಂಗಳೂರಿನ ಮಂತ್ರಿಮಾಲ್​​ಗೆ ಮತ್ತೆ ಬೀಗ

ಆಸ್ತಿ ತೆರಿಗೆ ಬಾಕಿ: ಬೆಂಗಳೂರಿನ ಮಂತ್ರಿಮಾಲ್​​ಗೆ ಮತ್ತೆ ಬೀಗ


ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್‌ಗೆ ಮತ್ತೆ ಬೀಗ

ಬೆಂಗಳೂರು, ನವೆಂಬರ್ 19: ಆಸ್ತಿ ತೆರಿಗೆ ಪಾವತಿಸಿದ ಹಿನ್ನೆಲೆ ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಬಿದ್ದಿದೆ (ಮತ್ತೆ ಮುಚ್ಚಿದ ಮಂತ್ರಿ ಮಾಲ್). ಈ ಹಿಂದೆಯೂ ಕೋಟ್ಯಂತರ ತೆರಿಗೆ ಪಾವತಿಸಲು ಹಲವು ಬಾರಿ ಸೀಜ್ ಮಾಡಲಾಗಿದೆ. ಈ ಬಾರಿಯೂ 30 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಬಾಕಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಮಂತ್ರಿ ಮಾಲ್ ಗ ಬಿದ್ದಿತ್ತು. ಈ ಬಾರಿಯೂ ಬರೋಬ್ಬರಿ 30,81,45,600 ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಅಧಿಕಾರಿಗಳು ಇಂದು ಬೆಳಗ್ಗೆ ಮಾಲ್ ಗೆ ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆ. ಬೀಗ ಹಾಕಿದ್ದಾರೆ ಮಾಲ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಇತ್ತ ಮಾರ್ಷಲ್ಸ್ ಮತ್ತು ಪೊಲೀಸರು ಮಾಲ್ ಬಳಿಯೇ ಬೀಡುಬಿಟ್ಟಿದ್ದಾರೆ.

ಇದನ್ನೂ ಓದಿ 51 ಕೋಟಿ ರೂ. ತೆರಿಗೆ ಬಾಕಿ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಮತ್ತೆ ಬೀಗ

ಹಲವು ಬಾರಿ ಮಾಲ್ಗೆ ಬೀಗ

2020 ರಲ್ಲಿ ಬರೋಬ್ಬರಿ 42,63,40,874 ರೂ ಆಸ್ತಿ ತೆರಿಗೆ ಕಟ್ಟದೇ ಇದ್ದಿದ್ದಕ್ಕೆ ಮತ್ತು BBMP ಗೆ ಕೊಟ್ಟ 10 ಕೋಟಿ ರೂ. ಚೆಕ್ ಬೌನ್ಸ್ ಆಗಿದ್ದಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಕಲಾಯಿತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ತೆರಿಗೆ ಪಾವತಿಸಲು ಕ್ರಮ ತೆಗೆದುಕೊಳ್ಳಲಿಲ್ಲ. ಅದೇ ರೀತಿ 2021 ರಲ್ಲಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಇದ್ದ ಕಾರಣ ಮುಟ್ಟುಗೋಲು ಹಾಕುವ ಎಚ್ಚರಿಕೆಯ ಆಸ್ತಿಯನ್ನು ನೀಡಲಾಗಿದೆ.

ಇದನ್ನೂ ಓದಿ 32 ಕೋಟಿ ತೆರಿಗೆ ಬಾಕಿ; ಮಂತ್ರಿ ಮಾಲ್ಗೆ ಬೀಗ ಜಡಿದು ಲೈಸೆನ್ಸ್ ಕ್ಯಾನ್ಸಲ್ ಮಾಡಿದ ಬಿಬಿಎಂಪಿ

2023ರಲ್ಲಿ 32 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ಗೆ ಪಾಲಿಕೆ ಒನ್ ಟೈಂ ಪೇಮೆಂಟ್ ಗೆ ಅವಕಾಶ ಕೊಟ್ಟಿತ್ತು. ಆದರೆ ಸೆಟಲ್ ಆಗದಿರುವ ಕಾರಣ ಮಾಲ್ಗೆ ಬೀಗ ಜಡಿದಿತ್ತು. ಮತ್ತೊಮ್ಮೆ 2024ರಲ್ಲಿಯೂ ಇದೇ ತಪ್ಪು ಮಾಡಿದೆ ಮಂತ್ರಿ ಮಾಲ್, ಸುಮಾರು 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಮಂತ್ರಿ ಮಾಲ್ನ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಬೋರ್ಡ್ ಹಾಕಿ, ಪಾಲಿಕೆ ಅಧಿಕಾರಿಗಳು ಸೀಜ್ ಮಾಡಿದರು. ಇದೀಗ ಮತ್ತೊಮ್ಮೆ ತೆಗಿ ವಿಷಯದಲ್ಲಿಯೇ ಮಾಲ್ ಗೆ ಬೀಗ ಬಿದ್ದಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *