ಕರ್ಣ ಜೈಲು ಸೇರಿದ್ದಾನೆ. ಅವನನ್ನು ಪಾರು ಮಾಡಲು ‘ಬ್ರಹ್ಮಗಂಟು’, ‘ಅಮೃತಧಾರೆ’ ಸೇರಿದಂತೆ ವಿವಿಧ ಸೀರಿಯಲ್ಗಳ ನಾಯಕಿಯರು ಒಂದಾಗಿದ್ದಾರೆ. ಅವರು ಸಾಕ್ಷಿದಾರರನ್ನು ರಕ್ಷಿಸಿದ್ದು, ಕರ್ಣನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ.

ಕರ್ಣ ಸೀರಿಯಲ್ನಲ್ಲಿ ಇದೀಗ ಕುತಂತ್ರಿಗಳ ಕುತಂತ್ರದಿಂದ ಕರ್ಣ ಜೈಲುಪಾಲಾಗಿದ್ದಾನೆ. ಅವನನ್ನು ಈ ಕೇಸ್ನಲ್ಲಿ ಫಿಕ್ಸ್ ಮಾಡಿ, ದೊಡ್ಡ ಜೈಲಿಗೆ ಕಳುಹಿಸುವಂತೆ ಆರೋಗ್ಯ ಸಚಿವ ಪೊಲೀಸರಿಗೆ ಆರ್ಡರ್ ಕೊಟ್ಟೂ ಆಗಿದೆ. ಕರ್ಣ ತಪ್ಪು ಮಾಡದಿದ್ರೂ ಅವನನ್ನು ಫಿಕ್ಸ್ ಮಾಡುವಂತೆ ಹೇಳಲಾಗಿದೆ.

ಅದೇ ಇನ್ನೊಂದೆಡೆ, ಆಸ್ಪತ್ರೆಯಲ್ಲಿ ನಕಲಿ ಮಾತ್ರೆಗಳನ್ನು ಇಟ್ಟಿದ್ದು, ನಯನತಾರಾ ಆ್ಯಂಡ್ ಗ್ಯಾಂಗ್ ಎನ್ನುವುದರನ್ನು ಅರಿತಿರುವ ಮಹಿಳೆಯರನ್ನು ಕಿಡ್ನ್ಯಾಪ್ ಮಾಡಿಸಿ ಅವರನ್ನು ಕಟ್ಟಿ ಹಾಕಲಾಗಿದೆ.

ಕರ್ಣನನ್ನು ಜೈಲಿನಿಂದ ಬಿಡಿಸಲು ವಿವಿಧ ಸೀರಿಯಲ್ ನಾಯಕಿಯರು ಒಟ್ಟಿಗೇ ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ, ಅಮೃತಧಾರೆ ಮಲ್ಲಿ, ಅಣ್ಣಯ್ಯ ರಾಣಿ ಎಲ್ಲರೂ ಬಂದಿದ್ದಾರೆ. ಇದು ವೀಕ್ಷಕರನ್ನು ರೋಮಾಂಚನಗೊಳಿಸಿದೆ.

ಇದೇ ವೇಳೆ ರೌಡಿಗಳು ನಿತ್ಯಾಳನ್ನು ಸಾಯಿಸಲು ಹೋಗಿದ್ದಾರೆ. ಆ ಸಮಯದಲ್ಲಿ ಬಂದ ಉಳಿದ ಮಹಿಳಾಮಣಿಗಳು ಸೀರೆಯಲ್ಲಿಯೇ ಭರ್ಜರಿ ಫೈಟಿಂಗ್ ಮಾಡಿದ್ದಾರೆ.

ಅಮೃತಧಾರೆಯ ಮಲ್ಲಿ ಬಿಟ್ಟು ಉಳಿದವರೆಲ್ಲರೂ ಸೀರೆಯಲ್ಲಿಯೇ ಫೈಟಿಂಗ್ ಮಾಡಿರುವುದು ವಿಶೇಷ. ಎಲ್ಲರೂ ರೌಡಿಗಳನ್ನು ಬಗ್ಗು ಬಡಿಸಿದ್ದಾರೆ.

ಕಿಡ್ನ್ಯಾಪ್ ಮಾಡಿ ಇಡಲಾದ ಸಾಕ್ಷಿದಾರ ಮಹಿಳೆಯರನ್ನು ಇದೇ ನಾಯಕಿಯರು ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಇನ್ನೇನಿದ್ದರೂ ಅವರ ಬಾಯಿಯಿಂದ ಸತ್ಯ ಹೇಳಿಸುವುದು, ಕರ್ಣನನ್ನು ನಿರಪರಾಧಿ ಎಂದು ಪ್ರೂವ್ ಮಾಡುವುದು ಬಾಕಿ ಇದೆ.

Source link
Karna Serial ರೋಚಕ ಎಪಿಸೋಡ್: ಸೀರೆಯುಟ್ಟ ನೀರೆಯರ ಭರ್ಜರಿ ಫೈಟಿಂಗ್- ಹಾರಿ ಹಾರಿ ಬಿದ್ದ ರೌಡಿಗಳು!