ನ್ಯಾಷನಲ್ ಕ್ರಶ್ ಗಿರಿಜಾ ಓಕ್ ನಂತರ, ಮತ್ತೊಬ್ಬ ಮರಾಠಿ ನಟಿ ಸ್ನೇಹಲತಾ ವಸಾಯಿಕರ್ ತಮ್ಮ ಸೌಂದರ್ಯದಿಂದ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕೆಂಪು ಟಾಪ್‌ನಲ್ಲಿರುವ ಅವರ ಇತ್ತೀಚಿನ ಫೋಟೋಶೂಟ್ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಆಕರ್ಷಕ ನೋಟಕ್ಕೆ ಮನಸೋತಿದ್ದಾರೆ.
ನ್ಯಾಷನಲ್ ಕ್ರಶ್ ಗಿರಿಜಾ ಓಕ್ ನಂತರ, ಈ ಮರಾಠಿ ನಟಿಯ ನೋಟ ಮತ್ತು ಸೌಂದರ್ಯ ಅಭಿಮಾನಿಗಳನ್ನು ಆಕರ್ಷಿತರನ್ನಾಗಿ ಮಾಡಿದೆ. ಐತಿಹಾಸಿಕ ಸೀರೀಸ್‌ನಲ್ಲಿ ಪಾತ್ರ ನಿವರ್ಹಿಸಿದ್ದ ನಟಿ ಈಗ ಇಂಟರ್ನೆಟ್‌ನ ಕೇಂದ್ರಬಿಂದು ಆಗಿದ್ದಾರೆ.

ಮರಾಠಿ ಟಿವಿ ಮತ್ತು ಚಲನಚಿತ್ರೋದ್ಯಮದಲ್ಲಿ ತಮ್ಮ ನಟನೆಯಿಂದ ಮಾತ್ರವಲ್ಲದೆ ತಮ್ಮ ಸೌಂದರ್ಯದಿಂದಲೂ ಅಭಿಮಾನಿಗಳ ಹೃದಯವನ್ನು ಗೆದ್ದ ಅನೇಕ ನಟಿಯರು ಇದ್ದಾರೆ.

ಕೆಲವು ದಿನಗಳ ಹಿಂದೆ, ಮರಾಠಿ ನಟಿ ಗಿರಿಜಾ ಓಕ್ ತಮ್ಮ ಸೌಂದರ್ಯ ಮತ್ತು ಆಕರ್ಷಕ ಲುಕ್‌ಗಾಗಿ ಸುದ್ದಿಯಲ್ಲಿದ್ದರು. ರಾತ್ರೋರಾತ್ರಿ ಅವರು ನ್ಯಾಷನಲ್ ಕ್ರಶ್ ಆಗಿ ಮಿಂಚಿದರು.

ಆದರೆ, ಈಗ ಇದಕ್ಕೆ ಮತ್ತೊಬ್ಬ ಮರಾಠಿ ನಟಿಯ ಸೌಂದರ್ಯ ಕೂಡ ಇದಕ್ಕೆ ಸೇರ್ಪಡೆಯಾಗಿದೆ. ಈ ನಟಿ ಬೇರೆ ಯಾರೂ ಅಲ್ಲ, ಸ್ನೇಹಲತಾ ವಸಾಯಿಕರ್.

ಈಕೆ ಕೆಂಪು ಬಣ್ಣದ ಟಾಪ್ ಹಾಗೂ ಕ್ರೀಮ್ ಬಣ್ಣದ ಪ್ಯಾಟ್ ಧರಿಸಿ ಫೋಟೋಗೆ ಪೋಸ್‌ಗೆ ನೀಡಿದ್ದು, ಆಕರ್ಷಕ ಲುಕ್‌ನಿಂದಾಗಿ ಗಮನಸೆಳೆದಿದ್ದಾರೆ.

ಈ ಫೋಟೋಶೂಟ್‌ನಲ್ಲಿ ಆಕೆ ಕೇವಲ ಕಿವಿಯೋಲೆ ಹಾಗೂ ಬಳೆ ಧರಿಸಿದ್ದು, ಇದನ್ನು ನೋಡಿರುವ ಅಭಿಮಾನಿಗಳು ಆಕೆಯ ಸೌಂದರ್ಯಕ್ಕೆ ಮನಸೂರೆಗೊಂಡಿದ್ದಾರೆ.

Source link
ಗಿರಿಜಾ ಓಕ್ ಬಳಿಕ ಇಂಟರ್ನೆಟ್‌ನಲ್ಲಿ ಹಲ್‌ಚಲ್ ಎಬ್ಬಿಸಿದ ನಟಿಯ ಫೋಟೋ..!