ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 2ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 2ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 2ರ ದಿನಭವಿಷ್ಯ

ಹಸಿರು ಮೇವನ್ನು ಹಸುವಿಗೆ ನೀಡುವುದರಿಂದ ಸಕಲ ದೇವತೆಗಳ ಆಶೀರ್ವಾದ ದೊರೆತಿದೆ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಿದೆ. ದಾಂಪತ್ಯದಲ್ಲಿನ ವಿರಸ, ಭಿನ್ನಾಭಿಪ್ರಾಯಗಳು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಎಟ್ ಹೇಳಿದ್ದಾರೆ, ಹಣ ಇದೆ ಅಂತಲೋ ಅಥವಾ ಯಾವುದೋ ನಿರ್ದಿಷ್ಟ ಕೆಲಸದಲ್ಲಿ ಸಹಾಯ ಮಾಡಿ ಎಂದು ನೆಚ್ಚಿಕೊಂಡು ಗಂಭೀರವಾದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳ ಉದ್ಯೋಗ ಸ್ಥಳದಲ್ಲಿ ಯಾವ ಕೆಲಸವನ್ನು ಒಪ್ಪಿಸಬಾರದು ಶ್ರದ್ಧಾ- ಭಕ್ತಿಯಿಂದ ಮಾಡಿದ್ದರೆ ಅದರ ಒಳ್ಳೆಯ ಫಲಿತ ದೊರೆಯುವ ಸೂಚನೆಯನ್ನು ಈ ದಿನ ಕಾಣಬಹುದಾಗಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಮಾತಿಗೆ ಕುಟುಂಬದಲ್ಲಿ ಒಂದು ಗೌರವ ದೊರೆಯಲಿದೆ. ಎಲ್ಲರೂ ಒಪ್ಪುವಂಥ ಹಾಗೂ ಆಕರ್ಷಣೀಯ ರೀತಿಯಲ್ಲಿ ಮಾತುಗಳನ್ನು ಆಡುತ್ತೀರಿ. ಸೈಟು ಖರೀದಿಸೋ ಮನೆ ಕಟ್ಟುವುದಕ್ಕೋ ಸಾಲಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದಾದಲ್ಲಿ ಈ ದಿನ ಬಹಳ ಒಳ್ಳೆಯ ಬೆಳವಣಿಗೆಗಳು ಆಗಲಿವೆ. ಮುಖ್ಯವಾಗಿ ಹಣಕಾಸಿನ ಅಡ್ಡಿ, ಆತಂಕಗಳು ದೂರ ಆಗಲಿವೆ. ಇಷ್ಟು ಸಮಯ ನಿಮ್ಮಲ್ಲಿ ಇದ್ದ ಆತ್ಮವಿಶ್ವಾಸದ ಕೊರತೆ ದೂರ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸ್ವಂತ ವ್ಯಾಪಾರ, ವ್ಯವಹಾರ ಆರಂಭ ಅಂದುಕೊಳ್ಳುತ್ತಾ ಇರುವವರಿಗೆ ಸ್ನೇಹಿತರಿಂದ, ಸಂಬಂಧಿಗಳಿಂದ ದೊಡ್ಡ ಮಟ್ಟದಲ್ಲಿ ನೆರವು ಒದಗಿ ಬರಲಿದೆ. ನಿಮ್ಮನ್ನು ಹೇಗಾದರೂ ಮಾಡಿ ದಿಕ್ಕು ತಪ್ಪಿಸಬೇಕು ಎಂದು ಪ್ರಯತ್ನ ಮಾಡುತ್ತಿರುವವರು ತಾವೇ ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದ್ದಾರೆ. ನಿಮ್ಮ ಸ್ನೇಹಿತರ ವಲಯದಲ್ಲಿ ಯಾರಿಗೆ ಬಹಳ ಎಚ್ಚರಿಕೆಯಿಂದ ಇರಿ ಎಂದು ನೀವು ಹೇಳುತ್ತೀರೋ ಅವರಿಗೆ ನಿಮ್ಮ ಮಾತಿನಂತೆ ಬೆಳವಣಿಗೆಯಾಗಿ, ನಿಮ್ಮ ಕಡೆಗೆ ಬೆರಗಿನಿಂದ ನೋಡಲಿದ್ದಾರೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *