ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 3ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 3ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 3ರ ದಿನಭವಿಷ್ಯ

ಪ್ರೀತಿಯಲ್ಲಿ ಇದ್ದು, ವಿರಸಗಳು ಪದೇ ಪದೇ ಆಗುತ್ತಾ ಇದ್ದಲ್ಲಿ ಹಾಗೂ ಮದುವೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ನಾನಾ ರೀತಿಯ ಅಡೆತಡೆಗಳು ಎದುರಾಗುತ್ತಾ ಇದ್ದಲ್ಲಿ ‘ರೋಸ್ ಕ್ವಾರ್ಟ್ಜ್’ ಸ್ಟೋನ್ ಉಂಗುರ, ಹಾರ ಅಥವಾ ಬ್ರೇಸ್ ಲೆಟ್ ಹಾಕಿದರೆ ಶುಭ ಬೆಳವಣಿಗೆಗಳು ಆಗುತ್ತವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮ ಬಳಿ ಉಳಿತಾಯ- ಹೂಡಿಕೆ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವುದಕ್ಕೆ ಇದು ಸೂಕ್ತ ದಿನವಾಗಿದೆ. ತಾವೊಬ್ಬರೇ ಹೋಗುವಾಗ ಜತೆಯಲ್ಲಿ ನೀವೂ ಬಂದರೆ ಅನುಕೂಲವಾಗುತ್ತದೆ ಎಂದು ನಿಮ್ಮ ಸ್ನೇಹಿತರು ಹೇಳುವುದರಿಂದ ದಿಢೀರ್ ಪ್ರಯಾಣಕ್ಕೆ ತೆರಳುವಂತೆ ಆಗಲಿದೆ. ಶೀತ- ಜ್ವರದ ಬಾಧೆ ಅಲ್ಪ ಪ್ರಮಾಣದಲ್ಲಿಯಾದರೂ ಕಾಡಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇದರಿಂದ ನಿಮಗೂ ಸಂತೋಷ- ಸಮಾಧಾನ ದೊರೆಯಲಿದೆ. ಉದ್ಯೋಗ ಮೇಲಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ- ವೃತ್ತಿ- ವ್ಯವಹಾರ- ವ್ಯಾಪಾರದಲ್ಲಿ ನಿಮ್ಮ ಮಾತಿಗೆ ತೂಕ ಸಿಗುವ ದಿನ ಇದಾಗಿದೆ. ಕುಟುಂಬದಲ್ಲಿ ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ವಿಷಯಗಳು ಚರ್ಚೆ ಆಗಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಅಲರ್ಜಿ– ಚರ್ಮದ ಸಮಸ್ಯೆಗಳು ಪದೇ ಪದೇ ಕಾಣಿಸುತ್ತಾ ತೊಂದರೆ ನೀಡುತ್ತಾ ಇದ್ದಲ್ಲಿ ಅಂಥವುಗಳಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ದಿನ ಇದು. ಹಣಕಾಸು ವಿಚಾರದಲ್ಲಿ ಹರಿವು ಚೆನ್ನಾಗಿರುತ್ತದೆ. ದೂರದ ಸಂಬಂಧಗಳಿಂದ ಸಂತಸದ ಸುದ್ದಿ ಬರುವ ಸಾಧ್ಯತೆ ಇದೆ. ಪ್ರೀತಿಯಲ್ಲಿ ಇರುವವರು ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಿ, ಮದುವೆಗೆ ಒಪ್ಪಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *