Headlines

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 7ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 7ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6 ರ ಮಾರ್ಚ್ 7 ರ ದಿನಭವಿಷ್ಯ

ಮಕ್ಕಳೊಂದಿಗೆ ವಾಗ್ವಾದ ತಪ್ಪಿಸಲು ಮತ್ತು ಶಾಂತಿ ಕಾಪಾಡಲು ಮಹಾಲಕ್ಷ್ಮಿಯ ಮುಂದೆ ತುಪ್ಪದ ದೀಪ ಹಚ್ಚಿ. ಬಿಳಿ ಬಣ್ಣದ ಸಿಹಿತಿಂಡಿಯನ್ನು ನೈವೇದ್ಯ ಮಾಡಿ ಹಂಚಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಉತ್ತಮವಾದ ಮಾರ್ಗದರ್ಶನ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅದೇ ರೀತಿ ಸರ್ಕಾರದಿಂದ ಸಿಗಬೇಕಾದ ಕಾಗದ- ಪತ್ರಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ಅದನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿದುಬರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗೀ ಆಗುವುದರಿಂದ ನಿಮ್ಮ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಪರಿಚಿತರು ದಿಢೀರನೇ ನಿಮಗೆ ಕೆಲವು ವಸ್ತುಗಳನ್ನು ನೀಡಬಹುದು ಅಥವಾ ನಾವು ಕೆಲವು ಕಾಲ ದೂರದವರೆಗೆ ಹೋಗುತ್ತೇವೆ, ನಮ್ಮ ಕಾರು ಅಥವಾ ಬೈಕ್/ ಸ್ಕೂಟರ್ ಅನ್ನು ನೀವು ಬಳಸುತ್ತೀರಿ ಎಂದು ಹೇಳಬಹುದು. ಸಂಗಾತಿಯು ನಿಮ್ಮ ಬಳಿ ಕೆಲವು ಬೇಡಿಕೆಗಳನ್ನು ಇಡುವ ಸಾಧ್ಯತೆಗಳಿವೆ. ತವರು ಮನೆಯಿಂದ ಹೆಣ್ಣುಮಕ್ಕಳಿಗೆ ಬರಬೇಕಾದ ಆಸ್ತಿಯ ಪಾಲು ಏನಾದರೂ ಇದ್ದಲ್ಲಿ ಅದರ ಬಗ್ಗೆ ಒಂದು ತೀರ್ಮಾನ ಆಗುವಂಥ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಮೂವತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸು ಮಕ್ಕಳು ಯಾರಿಗೆ ಇದ್ದಾರೋ ಅಂಥವರು ಮಕ್ಕಳೊಂದಿಗೆ ಮಾತನಾಡುವಾಗ ಕೋಪ ಮಾಡಿಕೊಳ್ಳದೇ ಇರುವುದು ತುಂಬ ಮುಖ್ಯ. ಮನೆ- ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವೇ ಇರಬಹುದು ಅಥವಾ ಮದುವೆ ಮತ್ಯಾವುದೇ ವಿಷಯ ಇರಬಹುದು, ಅದರ ಬಗ್ಗೆ ನಿಮಗೆ ಸಮ್ಮತಿ ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ, ಬದಲಾಗಿ- ವಾಗ್ವಾದಗಳನ್ನು ಮಾಡಿಕೊಳ್ಳಬೇಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *