
ಅಂದುಕೊಂಡ ಕೆಲಸಗಳು ಸ್ವಲ್ಪ ವಿಳಂಬವಾದರೂ ಅಥವಾ ಯಾರಾದರೂ ನಿಮ್ಮನ್ನು ಟೀಕಿಸಿದರೂ ತಕ್ಷಣ ಪ್ರತಿಕ್ರಿಯಿಸಬೇಡಿ. ಅನಗತ್ಯ ವಾದಗಳಿಂದ ದೂರವಿದ್ದರೆ ದಾಂಪತ್ಯ ಮತ್ತು ವೃತ್ತಿ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸಂಜೆ ವೇಳೆ ಮನೆಯಲ್ಲಿ ಕರ್ಪೂರಿ ಆರತಿ ಮಾಡುವುದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಈ ಉದ್ಯೋಗ ವೃತ್ತಿ ಅಥವಾ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುಖ್ಯವಾದ ತೀರ್ಮಾನವನ್ನು ಒಂದನ್ನು ಮಾಡುವ ಸಲುವಾಗಿ ನೀವು ಯಾವ ವ್ಯಕ್ತಿಗಳನ್ನು ತುಂಬ ಗೌರವದಿಂದ ಭೇಟಿ ಮಾಡಿ, ಸಲಹೆ-ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಸರ್ಕಾರಿ ಕೆಲಸದಲ್ಲಿ ಇರುವವರು ಐವತ್ತು ವರ್ಷ ಮೇಲ್ಪಟ್ಟವರು ಆಗಿದ್ದಲ್ಲಿ ವಿಆರ್ಎಸ್ ಆರಂಭಿಸಲು, ಸ್ವಂತ ವ್ಯವಹಾರವನ್ನು ಮಾಡಲು ಅಥವಾ ಕೃಷಿಯನ್ನು ಆದಾಯಕ್ಕಾಗಿ ಮಾಡುವುದಕ್ಕೋ ತೀರ್ಮಾನ ಮಾಡುವ ಸಾಧ್ಯತೆಯಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಪ್ರಶಾಂತವಾದ ಸ್ಥಳದಲ್ಲಿ ಸಮಯ ಕಳೆಯಬೇಕೆಂದು ನಿಮ್ಮಲ್ಲಿ ಒಬ್ಬರೇ ವಾಹನ ಚಲಾಯಿಸಿಕೊಂಡು ಲಾಂಗ್ ಡ್ರೈವ್ ಹೋಗಿದ್ದಾರೆ. ಮಾಸ್ಟರ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಾ ಇದ್ದವರು ಈ ದಿನ ಮಾಡಿಸಿಕೊಳ್ಳುವ ಯೋಗ ಇದೆ. ಹೋರಾಟ- ಚಳವಳಿಗಳಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ, ಗೌರವ ದೊರೆಯುವಂಥ ಯೋಗ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ವರ್ಕ್-ಲೈಫ್ ಸಮತೋಲನ ಕಾಯ್ದುಕೊಳ್ಳುವುದಕ್ಕೆ ನಿಮಗೆ ಬರುವುದಿಲ್ಲ ಎಂಬ ಮಾತನ್ನು ಕುಟುಂಬ ಸದಸ್ಯರಿಂದ ಕೇಳಿಸಿಕೊಳ್ಳುವಂತೆ ಆಗಲಿದೆ. ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ, ಯಾವ ಶಿಫ್ಟ್ ನಲ್ಲಿ ಬೇಕಾದರೂ ಕೆಲಸ ಮಾಡುತ್ತೇನೆ ಎಂದಿದ್ದ ವ್ಯಕ್ತಿ, ನೀವು ಅವರ ಪರವಾಗಿ ಮಾತನಾಡಿ ಉದ್ಯೋಗ ಕೊಡಿಸಿದ ನಂತರ, ಅದು ಸಾಧ್ಯವಿಲ್ಲ- ಇದು ಸಾಧ್ಯವಿಲ್ಲ ಎಂದು ಹೇಳಲು ಪ್ರಾರಂಭಿಸಲಾಗುವುದು.
ಲೇಖನ- ಸ್ವಾತಿ ಎನ್.ಕೆ.