ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 13ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 13ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6 ರ ಮಾರ್ಚ್ 13 ರ ದಿನಭವಿಷ್ಯ

ಕೃಷಿ ಅಥವಾ ವ್ಯವಹಾರಕ್ಕೆ ಹಣಕಾಸಿನ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿರುವಾಗ ಮುಖ್ಯವಾದ ಮಾತುಕತೆ ನಡೆಸಲು ತೆರಳುವಾಗ ಹಸಿರು ಬಣ್ಣದ ಕರ್ಚೀಫ್ ಅಥವಾ ವಸ್ತ್ರವನ್ನು ಬಳಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ತಂದೆ ಅಥವಾ ತಂದೆ ಸಮಾನರಾದವರ ಜೊತೆಗೆ ವಿವಿಧ ವಿಚಾರಗಳಿಗೆ ಅಭಿಪ್ರಾಯ ಭೇದಗಳು ಉದ್ಭವವಾಗಲಿವೆ. ಒಂದು ವೇಳೆ ನೀವು ಇದನ್ನು ಕೂತು, ಮಾತನಾಡಿಕೊಳ್ಳದೇ ಹೋದಾಗ ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಲು ಹೋಗಬೇಡಿ. ಬೇರೆಯವರಿಗೆ ಒಪ್ಪಿಸಿ, ಮುಗಿಸಬೇಕು ಎಂದು ಪ್ರಯತ್ನಪಟ್ಟರೂ ಸಾಧ್ಯವಾಗದೆ ಹೋದೀತು.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಕೃಷಿಕರಿದ್ದಲ್ಲಿ ಬೆಳೆ ನಷ್ಟ ಅಥವಾ ಬೇರೆ ಯಾವುದಾದರೂ ಹಣಕಾಸಿನ ವಿಚಾರದಲ್ಲಿ ನಿಮಗೆ ನಷ್ಟ ಆಗುವಂಥ ಯೋಗವಿದೆ. ಯಾರಿಗಾದರೂ ವಸ್ತುವನ್ನು ಕೊಡಬೇಕು ಅಥವಾ ಇಂಥ ಮಾತು ಇಷ್ಟೇ ಸಮಯದಲ್ಲಿ ಮಾಡಿಕೊಡುತ್ತೇನೆ ಎಂದು ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಸಾಧ್ಯಾಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದು ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಡೆಯುವಷ್ಟು ದಿನ ನಾಣ್ಯ ಎಂಬಂತೆ ಕೆಲವು ಕೆಲಸಗಳನ್ನು ಡೆಡ್ ಲೈನ್ ಇಟ್ಟುಕೊಂಡು ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಒಂದು ಕಾರ್ಯಾಚರಣೆಯ ನಂತರ ಆ ಕೆಲಸವನ್ನು ಮಾಡಬಾರದು ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿಮ್ಮ ಈ ದಿನದ ನಡವಳಿಕೆ ಹಾಗೂ ಮಾತುಕತೆ ಆಪ್ತರಾದವರಿಗೆ ಆಶ್ಚರ್ಯ ಹಾಗೂ ಗಾಬರಿ ಉಂಟುಮಾಡುತ್ತದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *