
ಇಂದು ಲಕ್ಷ್ಮಿ ನಾರಾಯಣ ಪೂಜೆ ಮಾಡಿ. ಹಳದಿ ಬಣ್ಣದ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಿ. ಬಾಕಿ ಹಣ ವಾಪಸ್ ಬರಲು ಇದು ಸಹಕಾರಿಯಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಇನ್ನು ಸಾಕು ಎಂದು ನಿರ್ಧಾರ ಮಾಡಿ ನೀವಾಗಿಯೇ ಕೆಲವು ಸಂಬಂಧ, ಸ್ನೇಹದಿಂದ ದೂರವಾಗುವುದಕ್ಕೆ ಪ್ರಯತ್ನ ಮಾಡಲೇಬೇಕು. ಅದರಲ್ಲೂ ನಿಮ್ಮಲ್ಲಿ ಸಂಬಂಧಪಟ್ಟವರಿಗೆ ನೇರವಾಗಿ ಈ ಬಗ್ಗೆ ಹೇಳಿಯೇ ದೂರವಾಗಿದ್ದಾರೆ. ನಿಮಗೆ ಮುಖ್ಯವಾಗಿ ಹಳೇ ಸಂಗತಿಗಳು ವಿಪರೀತ ಕಾಡಲಿವೆ. ಎಷ್ಟು ಪ್ರೀತಿ- ವಿಶ್ವಾಸ ತೋರಿದರೂ ಯಾಕೆ ಕೆಲವರಲ್ಲಿ ನಂಬಿಕೆ ಮೂಡಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಹೊಸದಾಗಿ ಹಣ ಹೂಡಿಕೆ ಮಾಡಿ, ಷೇರು- ಮ್ಯೂಚುವಲ್ ಫಂಡ್ ಗಳ ಮೂಲಕ ಅಥವಾ ಕಮಾಡಿಟಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಎಂದುಕೊಂಡಿರುವವರಿಗೆ ತುಂಬ ಸಹಾಯ ಆಗುವಂಥ ವ್ಯಕ್ತಿಯೊಬ್ಬರ ಪರಿಚಯವಾಗುತ್ತದೆ. ಅವರ ಸಲಹೆ-ಸೂಚನೆಗಳಿಂದ ನಿಮಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ನಿಮಗೆ ಇಷ್ಟವಾದ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಆಗಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಸಂಗಾತಿ ಜತೆಗಿನ ಬಾಂಧವ್ಯ ಗಟ್ಟಿಯಾಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ತುಂಬ ಸಂತೋಷವಾಗಿ ದಿನ ಕಳೆಯುವಂಥ ಯೋಗ ಇದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಮಟ್ಟದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ತನಕ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯಲಿದೆ, ಮನಸ್ಸಿಗೆ ಸಮಾಧಾನ ದೊರೆಯಲಿದೆ.
ಲೇಖನ- ಸ್ವಾತಿ ಎನ್.ಕೆ.