ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 14ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 14ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6 ರ ಮಾರ್ಚ್ 14 ರ ದಿನಭವಿಷ್ಯ
ಈ ದಿನ ಧರ್ಮ ಗ್ರಂಥಗಳನ್ನು ಓದಿ. ರಾಮಾಯಣ ಅಥವಾ ಭಗವದ್ಗೀತೆ ಯಾವುದಾದರೂ ಒಂದು ಅಧ್ಯಾಯವನ್ನು ಓದುವುದು ಮನಸ್ಸಿಗೆ ಸ್ಥಿರವಾಗಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಹಪ್ಪಳ, ಸಂಡಿಗೆ, ಚಟ್ನಿಪುಡಿ, ಹುಳಿಪುಡಿ- ಸಾರಿನಪುಡಿ ಇಂಥದ್ದನ್ನು ಮಾರಾಟ ಮಾಡುವವರಿಗೆ ಆದಾಯದಲ್ಲಿ ಹಾಗೂ ಲಾಭದಲ್ಲಿ ದೊಡ್ಡ ಏರಿಕೆ ಆಗುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯಲಿದೆ. ರಾಜಕಾರಣದಲ್ಲಿ ಇರುವಂಥವರಿಗೆ ಪದೋನ್ನತಿ ದೊರೆಯಲಿದೆ. ಅದರ ಬಗ್ಗೆ ಸುಳಿವು ಸಿಗಬಹುದು. ಮನೆಗೆ ನವೀಕರಣ, ಹೊಸದಾಗಿ ಕೋಣೆ ನಿರ್ಮಾಣಕ್ಕೆ, ವಾರ್ಡ್ ರೋಬ್ ಇಂತಹದ್ದನ್ನು ಮಾಡಲು ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ತಮ್ಮಿಂದ ಆದ ತಪ್ಪನ್ನು ಹೇಳಿಕೊಂಡು, ಅದರಿಂದ ಆಗಬಹುದಾದ ಸಮಸ್ಯೆಗಳಿಂದ ಕಾಪಾಡುವಂತೆ ನಿಮ್ಮನ್ನು ಕೇಳಿಸಿಕೊಳ್ಳಬಹುದು. ತಾಯಿಯ ಕಡೆಯಿಂದ ಹಣಕಾಸಿನ ನೆರವನ್ನು ಕೇಳಬಹುದು. ಒಟ್ಟಿನಲ್ಲಿ ನಿಮ್ಮ ಕೈ ಅಳತೆಯ ಇತರರಿಗೆ ಸಹಾಯ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಲಿದೆ. ನಿಮ್ಮ ಪದ ಬಳಕೆಯಿಂದ ಎದುರಿಗೆ ಇರುವ ವ್ಯಕ್ತಿಯ ಮನಸ್ಸಿನಲ್ಲಿ ಉದ್ಭವಿಸಬಹುದಾದ ಭಾವನೆ ಏನು ಎಂದು ಭಾವಿಸಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಈ ದಿನ ಸಾಧ್ಯವಾದಷ್ಟೂ ಬೇಕರಿ ಪದಾರ್ಥಗಳಿಂದ ದೂರ ಇದ್ದುಬಿಡಿ. ಮೈದಾ ಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವಿಸಿದರೂ ಅದರಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮಲ್ಲಿ ಯಾರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅಂಥವರಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಇನ್ನು ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳ ವರ್ತನೆಯಿಂದ ಅವಮಾನಕ್ಕೆ ಗುರಿಯಾಗಿದೆ.
ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *