
ಈ ದಿನ ಶಮಿ ವೃಕ್ಷದ ಆರಾಧನೆಯನ್ನು ಮಾಡಿ. ಸಂಜೆ ಶಮಿ (ಬನ್ನಿ) ಮರದ ಬುಡದಲ್ಲಿ ದೀಪ ಹಚ್ಚುವುದು ವೃತ್ತಿಜೀವನದ ಅಡೆತಡೆಗಳನ್ನು ನಿವಾರಿಸುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಭೂಮಿ ಅಥವಾ ಮನೆಗೆ ಸಂಬಂಧಿಸಿದ ದಾಖಲೆ- ಕಾಗದ- ಪತ್ರಗಳನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಇಷ್ಟು ಸಮಯ ಕಾಡುತ್ತಿದ್ದ ಹಿನ್ನಡೆ ಅಥವಾ ವಿಳಂಬ ಗತಿ ಇದ್ದಲ್ಲಿ ಅದು ನಿವಾರಣೆ ಆಗುವಂಥ ಯೋಗವಿದೆ. ಅಯ್ಯೋ, ಬೇರೆಯವರಿಂದ ಸಹಾಯ ಕೇಳಬೇಕಾದ ಸನ್ನಿವೇಶ ಬರುತ್ತದೆಯೇ ಎಂದು ಆತಂಕಗೊಂಡಿದ್ದರೆ ಇತರರ ಸಹಾಯವಿಲ್ಲದೆ ಕೆಲಸ- ಕಾರ್ಯಗಳು ಆಗುವುದಕ್ಕೆ ಬೇಕಾದದ್ದು ದೊರೆಯುವ ಅವಕಾಶವಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಒಂದು ಬಗೆಯ ಸಮಾಧಾನ, ನೆಮ್ಮದಿ ದೊರೆಯಲಿದೆ. ಮನೆಯಿಂದ ದೂರದಲ್ಲಿ ನಿಮ್ಮ ಹಿರಿಯರು ಇದ್ದಲ್ಲಿ ಅಥವಾ ವೃದ್ಧಾಶ್ರಮ ಅಥವಾ ಇನ್ಯಾವುದಾದರೂ ಕಡೆ ಮನೆಯ ಹಿರಿಯರನ್ನು ಬಿಟ್ಟಿದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣವಾಗುತ್ತವೆ. ಇದೇ ಕಾರಣಕ್ಕೆ ತುರ್ತಾಗಿ ಹಣದ ಅವಶ್ಯಕತೆ ಇದೆ. ನಿಮ್ಮದು ಬೇಜವಾಬ್ದಾರಿ ಎಂಬ ಆಕ್ಷೇಪಗಳನ್ನು ಕೇಳಿಸಿಕೊಳ್ಳುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಇತರರ ಹಣದ ನಿಗಾ ಮಾಡುವ ಅಥವಾ ಆ ಹಣದ ಲೆಕ್ಕಾಚಾರದ ವ್ಯವಹಾರವನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತಾ ಇತರ ದಿನದಿಂದ ಹೆಚ್ಚು ಎಚ್ಚರಿಕೆಯಿಂದ ಇರಿಸಿಕೊಳ್ಳಲಾಗುತ್ತದೆ. ಮದುವೆ ನಿಶ್ಚಯ ಆಗಿರುವಂಥವರಿಗೆ ಅಂದುಕೊಂಡಿದ್ದಕ್ಕಿಂತ ಖರ್ಚು ಹೆಚ್ಚಾಗುವ ಸುಳಿವು ದೊರೆಯಲಿದೆ. ಈಗ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
ಲೇಖನ- ಸ್ವಾತಿ ಎನ್.ಕೆ.