
ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯನ್ನು ಬರೆಯಿರಿ. ಇದರಿಂದ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಕುಟುಂಬ ಸದಸ್ಯರ ಮಧ್ಯೆ ಸಾಮರಸ್ಯ ಮೂಡಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನೀವೇ ನಂಬುವುದಕ್ಕೆ ಸಾಧ್ಯವಿಲ್ಲದ ಗಾಸಿಪ್ ನಿಮ್ಮ ಬಗ್ಗೆ ಹರಿದಾಡಲಿದೆ. ಹಿಂದೆ ಈ ಹಿಂದೆ ನೀವು ಮಾಡಿದಂಥ ಸಾಲವೋ ಅಥವಾ ಆಸ್ತಿ ವ್ಯವಹಾರವೋ ವಿಪರೀತ ಒತ್ತಡವನ್ನು ಸೃಷ್ಟಿ ಮಾಡಲಿದೆ. ನಕ್ಕು ಸುಮ್ಮನಾಗ ಬೇಕಾದ ಆಕ್ಷೇಪ, ಆಪಾದನೆಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುತ್ತದೆ. ಮುಖ್ಯವಾದ ವಸ್ತು ಒಂದು ಕಡೆ ಇಟ್ಟು, ಮತ್ತೊಂದು ಕಡೆ ಹುಡುಕಾಟ ನಡೆಸುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಂತವಾಗಿ ವ್ಯವಹಾರ ಮಾಡಲು ಸ್ನೇಹಿತರು ಹಾಗೂ ಉತ್ತರ ನೀಡುವ ಸಹ ಉತ್ತೇಜನ ನೀಡುವ ಸಾಧ್ಯತೆಯಿದೆ. ಇನ್ನು ನಿಮ್ಮಲ್ಲಿ ಯಾರು ಸ್ವ ಉದ್ಯೋಗ ಮಾಡಬೇಕು ಎಂದು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವರೋ ಅಂಥವರಿಗೆ ಸಲೀಸಾಗಿ ಹಣ ಸಿಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಉದ್ಯೋಗ ಬದಲಾವಣೆ ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಸದ್ಯಕ್ಕೆ ಬದಲಾವಣೆ ಮಾಡುವುದು ಬೇಡ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಪ್ರಕೃತಿ ಮಧ್ಯದಲ್ಲಿ ಸಮಯ ಕಳೆಯಬೇಕು, ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ನಿಶ್ಚಯ ಮಾಡಲಿದ್ದೇನೆ. ಜಿಮ್, ಯೋಗ ಅಥವಾ ಪ್ರಾಣಾಯಾಮಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಲೇಖನ- ಸ್ವಾತಿ ಎನ್.ಕೆ.