ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 15ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 15ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9 ರ ಮಾರ್ಚ್ 15 ರ ದಿನಭವಿಷ್ಯ

ಈ ದಿನ ಕನಿಷ್ಠ 108 ಬಾರಿ ‘ಓಂ’ ಕಾರ ಜಪ ಮಾಡಿ. ಇದರಿಂದ ನಿಮ್ಮ ಸುಪ್ತ ಪಟ್ಟಿಯ ಕಾರ್ಯ ನಿರ್ವಹಿಸುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಕೈಯಲ್ಲಿ ಹೆಚ್ಚಿನ ಮೊತ್ತವನ್ನು ಇಟ್ಟುಕೊಳ್ಳಬೇಕು ಎಂದು ಆಲೋಚನೆ ಮಾಡಬೇಕಾಗಿದೆ. ಷೇರು ಹೂಡಿಕೆ ಮಾಡಿದವರು ಈ ದಿನ ಸ್ವಲ್ಪ ಮಟ್ಟಿಗೆ ಒತ್ತಡಕ್ಕೆ ಗುರಿಯಾಗುತ್ತಾರೆ. ನೀವು ಬಹಳ ಆತ್ಮವಿಶ್ವಾಸದಿಂದ ನೀಡಿದಂಥ ಹಣಕಾಸಿನ ಸಲಹೆಗಳು ಬೂಮ್ ರಾಂಗ್ ಆಗಬಹುದು. ಆದ್ದರಿಂದ ಇತರರಿಗೆ ಸಲಹೆ ನೀಡುವ ಮುಂಚೆ ಸಾಧಕ- ಬಾಧಕರ ಬಗ್ಗೆ ಯೋಚಿಸಿ, ಹೆಜ್ಜೆ ಇಡುವುದು ಒಳ್ಳೆಯದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಬ್ಯಾಂಕ್ ಲಾಕರ್ ನಲ್ಲಿ ಚಿನ್ನದ ಒಡವೆಗಳನ್ನು ಇಡುವುದಕ್ಕೆ ಆಲೋಚಿಸುತ್ತೀರಿ ಎಂದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ ಹಾಗೂ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಹೆಚ್ಚಿನ ನಿಗಾ ವಹಿಸುತ್ತದೆ. ಒಂದು ವೇಳೆ ನೀವೇನಾದರೂ ಚೂಪಾದ ವಸ್ತುಗಳನ್ನು ಬಳಸುತ್ತೀರಿ ಅಥವಾ ಅಂತಹ ವಸ್ತುಗಳನ್ನು ಬಳಸುವಂತಹ ಕೆಲಸಗಳನ್ನು ತೊಡಗಿಸಿಕೊಳ್ಳುತ್ತೀರಿ ಅಂತಾದಲ್ಲಿ ಸಣ್ಣ-ಪುಟ್ಟ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಏನಾಗುತ್ತಿದೆ ನಿಮ್ಮ ಸುತ್ತ ಎಂಬ ಬಗ್ಗೆ ವಾಸ್ತವ ಸಂಗತಿ ತಿಳಿಯಲಿದೆ. ನಿಮ್ಮನ್ನು ದೂರವಿಟ್ಟು ಕೆಲಸ ಮಾಡುತ್ತಿದ್ದಾರೆ ಎಂಬ ಸಂಗತಿ ತಿಳಿದುಬರಲಿದೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುವವರು ನಿಮಗೆ ಬರಬೇಕಾದ ಹಣದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಏಕೆಂದರೆ ನಿಮ್ಮೊಂದಿಗೆ ಚೆನ್ನಾಗಿರುವಂತೆಯೇ ಕಾಣಿಸುವಂಥವರು ನಿಮಗೆ ಬರಬೇಕಾದ ಆದಾಯವನ್ನು ತಮ್ಮದಾಗಿಸಿಕೊಳ್ಳುವಂಥ ಸಾಧ್ಯತೆಗಳಿವೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *