Headlines

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 19ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 19ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3 ರ ಮಾರ್ಚ್ 19 ರ ದಿನಭವಿಷ್ಯ

ನಿಮ್ಮ ಮನೆಯಲ್ಲಿ ಇರುವಂಥಶ್ವರ ವಿಗ್ರಹ ಅಥವಾ ಚಿತ್ರಪಟಕ್ಕೆ ಸಕ್ಕರೆ ಅಥವಾ ಹಣ್ಣನ್ನು ನೈವೇದ್ಯ ಮಾಡಿ ಪ್ರಸಾದವಾಗಿ ಸ್ವೀಕರಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮುಂದೆ ನಡೆಯುವ ಸಂಗತಿಗಳ ಬಗ್ಗೆ ಸುಳಿವು ದೊರೆಯಲಿದೆ. ನಿಮ್ಮ ಮಾತು ಬಹಳ ಪ್ರಭಾವಿ ಆಗಿರುತ್ತದೆ. ಅದರಿಂದ ಸಹಾಯ ಪಡೆಯುವ ಅವಕಾಶಗಳಿವೆ. ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಾದರೆ ನಿಮ್ಮ ಬೆಂಬಲಿಗರು, ಅನುಯಾಯಿಗಳು ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಾರೆ. ಅದು ಉತ್ತಮ ಹುದ್ದೆಗಳನ್ನು ಕೊಡಿಸಲು ಇರಬಹುದು ಅಥವಾ ಯಾವುದಾದರೂ ಕಾಂಟ್ರಾಕ್ಟ್ ಗಳನ್ನು ಕೊಡಿಸುವುದೇ ಇರಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ದೊಡ್ಡ ಮಟ್ಟದಲ್ಲಿ ಅನಿರೀಕ್ಷಿತವಾಗಿ ಸಹಾಯ ದೊರೆಯಲಿದೆ. ನಿಮ್ಮ ಒಳಿತಿಗಾಗಿ ಸ್ನೇಹಿತರು, ಸಂಬಂಧಿಗಳು ಬಹಳ ಸಹಾಯ ಮಾಡಲಿದ್ದಾರೆ. ಭವಿಷ್ಯದಲ್ಲಿ ಅತಿ ದೊಡ್ಡ ಬದಲಾವಣೆ ತರುವಂಥ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮ ಭರವಸೆ ಮೂಡಲಿದೆ. ಗುರು ಸಮಾನರಾದವರು ನಿಮಗೆ ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಈ ಹಿಂದೆ ನೀವು ಕೆಲಸ ಮಾಡಿದ ಸ್ಥಳದಿಂದ ಮತ್ತೆ ಕರೆ ಬರುವಂಥ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಇತರರಿಗೆ ನೀವು ಶಿಫಾರಸು ಮಾಡುವ ಮೂಲಕ ಸಹಾಯ ಮಾಡಬೇಕಾಗಿದೆ. ನಿಮ್ಮಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಕೃಷಿ ಜಮೀನನ್ನು ಗುತ್ತಿಗೆಗೆ ಪಡೆಯುವ ಅಥವಾ ಖರೀದಿಸುವ ಯೋಗ ಇದೆ. ಶಿಸ್ತನ್ನು ಅನುಸರಿಸುವುದರಿಂದ ಆಗುವ ಪ್ರಯೋಜನಗಳು ಹಲವು. ಆದ್ದರಿಂದ ಯಾವುದೇ ಕೆಲಸವನ್ನು ಆಮೇಲೆ ಮಾಡಿದರಾಯಿತು ಎಂದು ಆಲೋಚನೆ ಮಾಡದೆ, ತಕ್ಷಣವೇ ಮಾಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *