March 2026 Horoscope: ಈ ನಾಲ್ಕು ರಾಶಿಯವರಿಗೆ ಮಾರ್ಚ್​​ ತಿಂಗಳಿನಲ್ಲಿ ಲಕ್ಕೋ ಲಕ್ಕು

March 2026 Horoscope: ಈ ನಾಲ್ಕು ರಾಶಿಯವರಿಗೆ ಮಾರ್ಚ್​​ ತಿಂಗಳಿನಲ್ಲಿ ಲಕ್ಕೋ ಲಕ್ಕು


ಮಾರ್ಚ್- 2026 ರಲ್ಲಿ ಶುಕ್ರನು ತನ್ನ ಉಚ್ಚಸ್ಥಾನಕ್ಕೆ ಹೋಗಿ ತಿಂಗಳ ಕೊನೆಯಲ್ಲಿ ಸ್ಥಾನವನ್ನು ಬದಲಿಸುವನು. ಶುಕ್ರ ದಶೆಯವರಿಗೆ ಇದು ಅತ್ಯಂತ ಶುಭ ಕಾಲ. ಹಣಕಾಸು ಕೈಸೇರುವುದಲ್ಲದೆ ಅನೇಕ ಭೋಗಗಳು, ಭೋಜನ, ಸಂಚಾರ, ವಿಶ್ರಾಂತಿ, ಸಂಗಾತಿಯ ಜೊತೆ ಆಪ್ತತೆ ಎಲ್ಲವೂ ಇರಲಿದೆ.

ಮೇಷ ರಾಶಿ

ಈ ತಿಂಗಳು ನಿಮಗೆ ಮಿಶ್ರಫಲ ದೊರೆಯಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಆರ್ಥಿಕವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯ ನಿರೀಕ್ಷೆಯಲ್ಲಿ ಎಚ್ಚರವಿರಲಿ. ಕುಟುಂಬದವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ​
ವೃಷಭ ರಾಶಿ

ಆರ್ಥಿಕ ಪ್ರಗತಿಗೆ ಈ ತಿಂಗಳ ಪೂರಕವಾಗಿದೆ. ಸ್ಥಗಿತಗೊಂಡಿರುವ ಕೆಲಸಗಳು ಪುನರಾರಂಭಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ಗೌರವ ಸಿಗುವ ಯೋಗವಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ, ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಸಂತೋಷ ನೀಡಲಿದೆ. ಆರೋಗ್ಯ ಉತ್ತಮವಾಗಿದೆ. ​
ಮಿಥುನ ರಾಶಿ

ನಿಮ್ಮ ಮಾತು ಮತ್ತು ಸಂಯಮ ಈ ತಿಂಗಳು ಬಹಳ ಮುಖ್ಯ. ವೃತ್ತಿಯಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು, ಆದರೆ ಧೃತಿಗೆಡಬೇಡಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ದೂರದ ಪ್ರಯಾಣವು ಲಾಭದಾಯಕವಾಗಿರುತ್ತದೆ. ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಕರ್ಕಾಟಕ ರಾಶಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸಮಯವಿದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬಬೇಡಿ. ವ್ಯಾಪಾರಸ್ಥರಿಗೆ ಮಧ್ಯಮ ಲಾಭ ದೊರೆಯಲಿದೆ. ಮನೆ ಬದಲಾವಣೆ ಅಥವಾ ನವೀಕರಣದ ವೇಳೆ ಈ ತಿಂಗಳು ಶುಭವಾಗಿದೆ. ಆಧ್ಯಾತ್ಮದ ಕಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ. ​
ಸಿಂಹ ರಾಶಿ

ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಯಶಸ್ಸು ಖಚಿತ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಸಂಗಾತಿಯ ಬೆಂಬಲ ನಿಮ್ಮ ಆತ್ಮಬಲವನ್ನು ಹೊಂದಿದೆ. ಹೂಡಿಕೆಯಿಂದ ಲಾಭ ನಿರೀಕ್ಷಿಸಬಹುದು. ಆಹಾರ ಕ್ರಮದ ಬಗ್ಗೆ ಎಚ್ಚರವಿರಲಿ.

ಕನ್ಯಾ ರಾಶಿ

ಒತ್ತಡ ಹೆಚ್ಚಾಗಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆಯಿದೆ. ವಿನಾಕಾರಣ ವಾದವಿವಾದಗಳಲ್ಲಿ ಭಾಗವಹಿಸಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

ತುಲಾ ರಾಶಿ

ಸೃಜನಶೀಲ ಕೆಲಸಗಳಿಗೆ ಈ ತಿಂಗಳು ಹೇಳಿಮಾಡಿಸಿದಂತಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದೆ. ವಿದೇಶಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಮನಸ್ಸು ಪ್ರಸನ್ನವಾಗಿರಲಿದೆ.

ವೃಶ್ಚಿಕ ರಾಶಿ

ಶತ್ರುಗಳ ಕಾಟವಿದ್ದರೂ ನಿಮ್ಮ ಬುದ್ಧಿವಂತಿಕೆಯಿಂದ ಜಯಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭವಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಕ್ಕಳ ಶಿಕ್ಷಣದ ಬಗ್ಗೆ ಶುಭ ಸುದ್ದಿ ಕೇಳುವಿರಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಗೆಳೆಯರೊಂದಿಗೆ ಸಣ್ಣಪುಟ್ಟ ಮನಸ್ತಾಪವಾಗುವ ಸಾಧ್ಯತೆಯಿದೆ. ​
ಧನು ರಾಶಿ

ಭಾಗ್ಯೋದಯದ ಕಾಲವಿದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವಿರಿ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳು ಇವೆ. ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ತಿಂಗಳು.

ಮಕರ ರಾಶಿ

ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ದೂರವಿರಿ. ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣ. ಸಾಲದ ಹೊರೆ ಇಳಿಸಲು ಯೋಜನೆ ರೂಪಿಸುವಿರಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಯೋಗ ಮತ್ತು ಧ್ಯಾನದಿಂದ ಮಾನಸಿಕ ಶಾಂತಿ ಪಡೆಯಬಹುದು. ತಾಳ್ಮೆಯೇ ಈ ತಿಂಗಳ ಮಂತ್ರ.

ಕುಂಭ ರಾಶಿ

ಹೊಸ ಯೋಜನೆಗಳನ್ನು ಪ್ರಾರಂಭಿಸಲು ಈ ತಿಂಗಳು ಪ್ರಶಸ್ತವಾಗಿದೆ. ಸಮಾಜದಲ್ಲಿ ಹೊಸ ಪರಿಚಯಗಳು ಉಂಟಾಗಲಿವೆ. ಪ್ರೇಮಿಗಳಿಗೆ ವಿವಾಹ ಯೋಗವಿದೆ. ಕಲಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಆದಾಯದ ಹರಿವು ಉತ್ತಮವಾಗಿದ್ದರೂ ಉಳಿತಾಯದ ಕಡೆಗೆ ಗಮನ ನೀಡಿ.

ಮೀನ ರಾಶಿ

ಧನ ಲಾಭದ ಜೊತೆಗೆ ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ. ನಿಮ್ಮ ಎಲ್ಲಾ ಮೆಚ್ಚುಗೆಗೆ ಪಾತ್ರ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಹಳೆಯ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ​

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *