ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 21ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 21ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6 ರ ಮಾರ್ಚ್ 21 ರ ದಿನಭವಿಷ್ಯ

ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲೆ ಪಕ್ಷಿಗಳಿಗೆ ನೀರು ಮತ್ತು ಧಾನ್ಯವನ್ನು ಇಡಿ. ಇದು ವೃತ್ತಿಜೀವನದ ಅಡೆತಡೆಗಳನ್ನು ದೂರ ಮಾಡುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಅಂದುಕೊಂಡಿದ್ದರೂ ಹೋದರೂ ಅದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ನಿಮಗೆ ಸಮಸ್ಯೆ ಮಾಡುತ್ತಿರುವವರು ಯಾರು, ವ್ಯವಹಾರಗಳಲ್ಲಿ ಅಡೆತಡೆಗಳನ್ನು ಒಡ್ಡುವವರು ಯಾರು ಎಂದು ಗುರುತಿಸುವುದು ಹೇಗೆ ಎಂದು ಆಲೋಚಿಸಲು ಬಹಳ ಸಮಯ ಬಿಡುತ್ತದೆ. ನಿಮ್ಮ ಜತೆಗಿರುವವರು ಹಾಗೂ ಆಪ್ತರಿರುವವರು, ಕುಟುಂಬದ ಸದಸ್ಯರ ಬಗ್ಗೆಯೇ ನಾನಾ ರೀತಿಯಲ್ಲಿ ಆಲೋಚನೆಗಳು ಮೂಡಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಬರುವಂಥ ಕೆಲಸಗಳು, ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡುವುದು ಉತ್ತಮ. ಒಮ್ಮೆ ಹೂಂ ಎಂದು ಒಪ್ಪಿಕೊಂಡ ಮೇಲೆ ಹಲವು ಬದಲಾವಣೆಗಳನ್ನು ಹೇಳುವ ಮೂಲಕ ಒತ್ತಡವನ್ನು ಹೇರಬಹುದು. ದಿನಂಪ್ರತಿ ನೋಡುವಂಥ ಹಾಗೂ ವ್ಯವಹರಿಸುವಂಥ ವ್ಯಕ್ತಿಗಳಲ್ಲೇ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಹಣಕಾಸಿನ ವ್ಯವಹಾರ ಎಂದಾದರೆ ಮೈ ತುಂಬ ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಯಾವುದನ್ನಾದರೂ ಹೊಂದಾಣಿಕೆ ಮಾಡಬೇಕಾಗಿರುವುದು ನಿಮಗೆ ತಿಳಿದಿದೆ ಈ ದಿನ ಬಹಳ ಸಮಾಧಾನ ದೊರೆಯುವಂಥ ದಿನ. ಒಂದು ವೇಳೆ ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿ ನಿಮಗೆ ತೃಪ್ತಿ ದೊರೆಯುವಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಬಹುದು. ತುಂಬಾ ಕಷ್ಟಪಟ್ಟು ಮಾಡುತ್ತಿರುವ ಅಥವಾ ಮಾಡುವ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *