
ವ್ಯಾಪಾರ- ವ್ಯವಹಾರ ಮಾಡುವಂಥವರು ಈ ದಿನ ಬಿಳಿ ಬಣ್ಣದ ಹೂವುಗಳನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ವ್ಯಾಪಾರವನ್ನು ಆರಂಭಿಸಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಕೆಮ್ಮು, ಕಫ, ಗಂಟಲು ನೋವು ಇಂತಹ ಆರೋಗ್ಯ ಸಮಸ್ಯೆಗಳು ನಿಮ್ಮಲ್ಲಿ ಕೆಲವರನ್ನು ಕಾಡಬಹುದು. ದಿಢೀರ್ ಅಂತ ದೂರ ಪ್ರಯಾಣ ಮಾಡುವ ಅನಿವಾರ್ಯ ಸೃಷ್ಟಿ ಆಗಲಿದೆ. ದೈಹಿಕ ಆಯಾಸ, ದಣಿವು ಕಾಡುವುದರಿಂದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರಿಗೆ ಅಗತ್ಯ ಇರುವ ಪುಸ್ತಕಗಳು, ಲ್ಯಾಪ್ ಟಾಪ್ ಅಥವಾ ಇಂತಹವುಗಳ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಸರ್ಕಾರದಿಂದ ಬರಬೇಕಾದ ಟ್ಯಾಕ್ಸ್ ರೀಫಂಡ್ ಸೇರಿದಂತೆ ಇತರೆ ಯಾವುದೇ ಬಾಕಿ ಇದ್ದರೆ ಅದು ಯಾವಾಗ ಬರಬಹುದು ಎಂಬ ಸುಳಿವು ದೊರೆಯಲಿದೆ. ಗಾಜಿನ ವಸ್ತುಗಳು ಅಥವಾ ಚೂಪಾದ ವಸ್ತುಗಳನ್ನು ಬಳಸುವಾಗ ಸಾಮಾನ್ಯ ದಿನ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು. ಹೋಟೆಲ್ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಒತ್ತಡ ಕಾಣಿಸಿಕೊಳ್ಳಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಸ್ವಂತ ವ್ಯವಹಾರ- ವ್ಯಾಪಾರ ಆರಂಭ ಮಾಡಬೇಕು ಎಂದು ಹಣಕಾಸು ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದಲ್ಲಿ ಅದು ಸಾಧ್ಯವಾಗಲಿದೆ. ವಾಹನ ಖರೀದಿಗಾಗಿ ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದರೆ ಅದು ಸಿಗುವ ಬಗ್ಗೆ ಖಾತ್ರಿ ದೊರೆಯಲಿದೆ. ಈ ಬಗ್ಗೆ ನಿಮಗೆ ಕಾಡುತ್ತಿರುವ ಆತಂಕ ದೂರ.
ಲೇಖನ- ಸ್ವಾತಿ ಎನ್.ಕೆ.