Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 25ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 25ರ ದಿನಭವಿಷ್ಯ


ಸಂಖ್ಯಾಶಾಸ್ತ್ರದ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9 ರ ಮಾರ್ಚ್ 25 ರ ದಿನಭವಿಷ್ಯ

ಜನ್ಮಸಂಖ್ಯೆ ೭, ೮, ೯ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 25ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ನಿಯಂತ್ರಣದಲ್ಲಿ ಇರುವಂತಹ ವಿಷಯಗಳನ್ನು ಮಾತ್ರ ಕಾಳಜಿ ಮಾಡಿ. ಕೈ ಅಳತೆ ಮೀರಿದ ವಿಚಾರಗಳ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಸಮಸ್ಯೆಗಳು ಅಂತ ಏನನ್ನು ಅಂದುಕೊಂಡಿರುತ್ತೀರೋ ವಾಸ್ತವಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಿಕೊಳ್ಳುತ್ತಿದ್ದೀರಿ ಎಂಬುದು ಗಮನಕ್ಕೆ ಬರಲಿದೆ. ಮದುವೆಗೆ ಪ್ರಯತ್ನಿಸುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ದುಡ್ಡಿನ ಖರ್ಚು ಮಾಡುವಾಗ ಯಾವ ಉದ್ದೇಶಕ್ಕಾಗಿ ಮಾಡುವಿರಿ ಎಂಬ ಸ್ಪಷ್ಟತೆ ಇರಲಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮಗೆ ಎಲ್ಲ ನೀಡುವ ಗೌರವವನ್ನು ಸಾಧಿಸುವ ಮುನ್ನ ನಿಮ್ಮ ಮೇಲೆ ಆಗುವ ಪ್ರಭಾವ ಏನು ಎಂದು ಯೋಚಿಸಿ. ಈ ದಿನ ಸಾಧ್ಯವಾದಷ್ಟೂ ಕೋಪವನ್ನು ಮಾಡಿಕೊಳ್ಳಬೇಡಿ ಹಾಗೂ ಅಹಂಕಾರ ನಿಮ್ಮ ತಲೆಗೆ ಏರದಂತೆ ನೋಡಿಕೊಳ್ಳಿ. ಈ ಎರಡೂ ನೋಡಿಕೊಂಡರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇವತಾ ಕಾರ್ಯಗಳಿಗಾಗಿ ಸ್ನೇಹಿತರು- ಸಂಬಂಧಿಗಳ ಮನೆಗೆ ಆಹ್ವಾನ ಬರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನಿಮ್ಮ ಮಾತು ಮತ್ತು ನಿರ್ಧಾರಗಳು ಉದ್ಯೋಗ ಸ್ಥಳದಲ್ಲಿ ಆಗಬೇಕಾದ ಕೆಲಸದ ಗತಿಯನ್ನೇ ಬದಲಿಸಲಿದೆ. ವ್ಯಾಪಾರ- ವ್ಯವಹಾರ ಅಂತ ಬಂದಲ್ಲಿ ಭವಿಷ್ಯವನ್ನು ಗಮನ ಇಟ್ಟುಕೊಂಡು ಜಾಣ್ಮೆಯಿಂದ ಮಾತನಾಡಿದರು. ಸಹೋದ್ಯೋಗಿಗಳು ಸಹ ನಿಮ್ಮ ಅಭಿಪ್ರಾಯಕ್ಕೆ ಸಮ್ಮತ ನೀಡುವ ಸಾಧ್ಯತೆಯಿದೆ. ಹಣಕಾಸಿನ ನಿರ್ಧಾರಗಳಲ್ಲಿ ಸಂಯಮದಿಂದ ವರ್ತಿಸಿದರೆ ಲಾಭ ತಂದು ಕೊಡಲಿದೆ. ಕುಟುಂಬ ಸದಸ್ಯರಿಗೆ ನೀವು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *