Headlines

Bank Holidays: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ; ಬ್ಯಾಂಕುಗಳಿಗೆ 18 ದಿನ ರಜೆ; ಇಲ್ಲಿದೆ ಪಟ್ಟಿ

Bank Holidays: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ; ಬ್ಯಾಂಕುಗಳಿಗೆ 18 ದಿನ ರಜೆ; ಇಲ್ಲಿದೆ ಪಟ್ಟಿ


ನವದೆಹಲಿ, ಫೆಬ್ರುವರಿ 24: ಮಾರ್ಚ್ ತಿಂಗಳ ಹಬ್ಬಗಳ ಸರಮಾಲೆಯೇ ಇದೆ. ಹೋಳಿ, ಯುಗಾದಿ, ರಂಜಾನ್, ಮಹಾವೀರ್ ಜಯಂತಿ, ಶ್ರೀರಾಮ ನವಮಿ ಇತ್ಯಾದಿ ಹಲವು ಹಬ್ಬ ಹರಿದಿನಗಳು ಮಾರ್ಚ್‌ನಲ್ಲಿ ಇದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ, ಆ ತಿಂಗಳ ಶನಿವಾರ, ಭಾನುವಾರಗಳನ್ನೂ ಒಳಗೊಂಡು ಒಟ್ಟು 18 ರಜಾದಿನಗಳಿವೆ. ಪ್ರದೇಶವಾರು ರಜೆಗಳಲ್ಲಿ ವ್ಯತ್ಯಾಸವಿದೆ. ಹೋಳಿ ಹಬ್ಬಕ್ಕೆ ಕರ್ನಾಟಕಕ್ಕೆ ರಜೆ ಇಲ್ಲ. ಆದರೆ, ಉತ್ತರಪ್ರದೇಶದಲ್ಲಿ ಆ ಹಬ್ಬಕ್ಕೆ ಮೂರು ದಿನ ರಜೆ ಇದೆ. ಕರ್ನಾಟಕದಲ್ಲಿ ಶ್ರೀರಾಮನವಮಿಗೆ ರಜೆ ಇರುವುದಿಲ್ಲ, ಆದರೆ, ಮಹಾವೀರ ಜಯಂತಿಗೆ ರಜೆ (ಬ್ಯಾಂಕ್ ರಜಾದಿನಗಳು) ಇರುತ್ತದೆ. ಕರ್ನಾಟಕದಲ್ಲಿ ಶನಿವಾರ, ಭಾನುವಾರದ ರಜೆಗಳೂ ಸೇರಿ ಒಟ್ಟು 10 ದಿನಗಳು ಮಾರ್ಚ್‌ನಲ್ಲಿ ಬ್ಯಾಂಕುಗಳು ಬಂದ್ ಆಗಲಿವೆ.

2026ರ ಮಾರ್ಚ್‌ನಲ್ಲಿ ಬ್ಯಾಂಕ್ ರಾಜಾದಿಗಳು

  • ಮಾರ್ಚ್ 1: ಭಾನುವಾರದ ರಜೆ
  • ಮಾರ್ಚ್ 2, ಸೋಮವಾರ: ಹೋಳಿ ಹಬ್ಬ (ಉ.ಪ್ರ.ದಲ್ಲಿ ರಜೆ)
  • ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ (ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ಉತ್ತರಪ್ರದೇಶ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
  • ಮಾರ್ಚ್ 4, ಬುಧವಾರ: ಹೋಳಿ ಹಬ್ಬ, ಧುಲೇತಿ, ಯಾವೊಸಾಂಗ್ (ಉತ್ತರ ಪ್ರದೇಶ, ದೆಹಲಿ, ಛತ್ರೀಸ್‌ಗಡ್, ಜಾರ್ಖಂಡ್ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
  • ಮಾರ್ಚ್ 8: ಭಾನುವಾರದ ರಜೆ
  • ಮಾರ್ಚ್ 13, ಶುಕ್ರವಾರ: ಚಾಪಚಾರ್ ಕುತ್ (ಮಿಝೋರಂ, ಆಭರಣದಲ್ಲಿ ರಜೆ)
  • ಮಾರ್ಚ್ 14: ಎರಡನೇ ಶನಿವಾರದ ರಜೆ
  • ಮಾರ್ಚ್ 15: ಭಾನುವಾರದ ರಜೆ
  • ಮಾರ್ಚ್ 17, ಮಂಗಳವಾರ: ಶಬಿ ಖಾದರ್ (ಮಣಿಪುರ, ನೇಮಕಾತಿ ಮತ್ತು ಕಾಶ್ಮೀರದಲ್ಲಿ ರಜೆ)
  • ಮಾರ್ಚ್ 19, ಗುರುವಾರ: ಯುಗಾದಿ, ಗುಧಿ ಪಡವಾ, ಸಜಿಬು ನೋಂಗ್ಮಪಣ್ಬ ​​(ಅನೇಕ ರಾಜ್ಯಗಳಿಗೆ ರಜೆ)
  • ಮಾರ್ಚ್ 20, ಶುಕ್ರವಾರ: ಈದ್ ಉಲ್ ಫಿತರ್, ರಂಜಾನ್, ಜಮಾತ್ ಉಲ್ ವಿದಾ ಹಬ್ಬ (ಹೆಚ್ಚಿನ ರಾಜ್ಯಗಳಿಗೆ ರಜೆ)
  • ಮಾರ್ಚ್ 21, ಶನಿವಾರ: ರಂಜಾನ್ ಈದ್, ಖುದುಬ್ ಇ ರಂಜಾನ್ (ಮೇಘಾಲಯ, ಮಧ್ಯಪ್ರದೇಶ, ಹರಿಯಾಣ, ಉತ್ತರಾಖಂಡ್, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಗೆ ರಜೆ)
  • ಮಾರ್ಚ್ 22: ಭಾನುವಾರದ ರಜೆ
  • ಮಾರ್ಚ್ 26, ಗುರುವಾರ: ಶ್ರೀರಾಮನವಮಿ ಹಬ್ಬ (ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 27, ಶುಕ್ರವಾರ: ಶ್ರೀರಾಮನವಮಿ (ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
  • ಮಾರ್ಚ್ 29: ಭಾನುವಾರದ ರಜೆ
  • ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ (ಅನೇಕ ರಾಜ್ಯಗಳಿಗೆ ರಜೆ)

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಒದಗಿಸಿ; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

ಕರ್ನಾಟಕದಲ್ಲಿ ಮಾರ್ಚ್ ನಲ್ಲಿ ಬ್ಯಾಂಕ್ ರಜಾದಿನಗಳು

  • ಮಾರ್ಚ್ 1: ಭಾನುವಾರದ ರಜೆ
  • ಮಾರ್ಚ್ 8: ಭಾನುವಾರದ ರಜೆ
  • ಮಾರ್ಚ್ 14: ಎರಡನೇ ಶನಿವಾರದ ರಜೆ
  • ಮಾರ್ಚ್ 15: ಭಾನುವಾರದ ರಜೆ
  • ಮಾರ್ಚ್ 19, ಗುರುವಾರ: ಯುಗಾದಿ ಹಬ್ಬ
  • ಮಾರ್ಚ್ 20, ಶುಕ್ರವಾರ: ರಂಜಾನ್ ಹಬ್ಬ
  • ಮಾರ್ಚ್ 22: ಭಾನುವಾರದ ರಜೆ
  • ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
  • ಮಾರ್ಚ್ 29: ಭಾನುವಾರದ ರಜೆ
  • ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ

ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿಯ ಬಾಗಿಲು ಮಾತ್ರ ಬಂದ್ ಆಗಿರುತ್ತದೆ. ಎಟಿಎಂ, ಯುಪಿಐ, ನೆಟ್ ಬ್ಯಾಂಕಿಂಗ್ ಸೇವೆಗಳ ಮೂಲಕ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ನಿರಂತರವಾಗಿ ಅವಕಾಶ ಇರುತ್ತದೆ. ಡಿಮ್ಯಾಂಡ್ ಡ್ರಾಫ್ಟ್ ಇತ್ಯಾದಿ ಕಾರ್ಯಗಳಿಗೆ ಕಚೇರಿಗೆ ಹೋಗಬೇಕಾದವರು ರಜಾದಿನಗಳ ಬಗ್ಗೆ ಗಮನ ಹರಿಸುವುದು ಸರಿ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *