ಸುದೀಪ್ ನಟನೆಯ (ಕಿಚ್ಚ ಸುದೀಪ್)’ಮಾರ್ಕ್’ ಸಿನಿಮಾ ಹೊಸ ವರ್ಷದಂದು ಒಳ್ಳೆಯ ರೀತಿಯ ಆರಂಭ ಕಂಡಿದೆ. ಮೊದಲ ನಾಲ್ಕು ದಿನ ಅಬ್ಬರಿಸಿದ್ದ ಈ ಚಿತ್ರ ನಂತರವೂ ಉತ್ತಮ ಕಲೆಕ್ಷನ್ ಮಾಡಿತ್ತು. ಹೊಸ ವರ್ಷದ ರಜೆ ಚಿತ್ರಕ್ಕೆ ಸಹಕಾರಿ ಆಗಿದೆ. ಜನವರಿ 1ರಂದು ಸಿನಿಮಾ ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ.ಇದು ಕಿಚ್ಚನ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಈ ವೀಕೆಂಡ್ ಕೂಡ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
‘ಮಾರ್ಕ್’ ಸಿನಿಮಾ ರಿಲೀಸ್ ಆಗಿದ್ದು ಡಿಸೆಂಬರ್ 25ರಂದು. ಈ ಚಿತ್ರ ತೆರೆಗೆ ಬಂದು 9 ದಿನ ಕಳೆದಿದೆ. ಈ ಸಿನಿಮಾ ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ತಂಡ ಹೇಳಿಕೊಂಡಿದೆ. ನಂತರದ ಕಲೆಕ್ಷನ್ ಕೂಡ ಸೇರಿದರೆ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ದಾಟಬಹುದೆಂದು ಹೇಳಲಾಗುತ್ತಾ ಇದೆ.
ಜನವರಿ ಒಂದರಂದು ಮಾರ್ಕ್ ಸಿನಿಮಾ ಸುಮಾರು 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಈ ಮೂಲಕ ಹೊಸ ವರ್ಷವನ್ನು ದೊಡ್ಡ ಗಳಿಕೆಯೊಂದಿಗೆ ಆರಂಭಿಸಿದಂತೆ ಆಗಿದೆ. ಸಿನಿಮಾ ಇಂದು ಸಾಧಾರಣ ಕಲೆಕ್ಷನ್ ಮಾಡಿದರೂ ವೀಕೆಂಡ್‌ನಲ್ಲಿ (ಜನವರಿ 3 ಮತ್ತು ಜನವರಿ 4) ಸಿನಿಮಾ ಅಬ್ಬರದ ಗಳಿಕೆ ಮಾಡುವ ನಿರೀಕ್ಷೆ ಇದೆ.
ಬ್ಲಾಕ್‌ಬಸ್ಟರ್ ಮೊದಲ ವಾರದ ನಂತರ, ಮಾರ್ಕ್ ತನ್ನ ತಡೆಯಲಾಗದ ಓಟವನ್ನು ಮುಂದುವರೆಸುತ್ತಾನೆ🔥 ಅಭಿಮಾನಿಗಳು, ಸಮೂಹ ಪ್ರೇಕ್ಷಕರು, ಯುವಕರು ಮತ್ತು ಕುಟುಂಬಗಳಿಂದ ಭಾರೀ ಪ್ರಶಂಸೆ ಗಳಿಸಿದರು, ಮಾರ್ಕ್ ಎರಡನೇ ವಾರದಲ್ಲಿ ವಿದ್ಯುನ್ಮಾನವಾಗಲು ಪ್ರಾರಂಭಿಸಿದರು
🎬 ಚಿತ್ರಮಂದಿರಗಳಲ್ಲಿ ಗುರುತಿಸಿ ಶೀಘ್ರದಲ್ಲೇ ನಿಮ್ಮ ಟಿಕೆಟ್ಗಳನ್ನು ಪಡೆದುಕೊಳ್ಳಿ 🎟️ ನನ್ನ ಶೋ ಬುಕ್ ಮಾಡಿ: https://t.co/QmRNJkyr03… pic.twitter.com/hIHZACAI89
— ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ (@SupriyanviPicS) ಜನವರಿ 2, 2026
ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬಗ್ಗೆ ‘ಸುಪ್ರಿಯಾ ಪಿಕ್ಚರ್ ಸ್ಟುಡಿಯೋ’ ಘೋಷಣೆ ಮಾಡಿದೆ. ‘ಮೊದಲ ವಾರದ ಬ್ಲಾಕ್‌ಬಸ್ಟರ್ ಗಳಿಕೆ ನಂತರ, ಮಾರ್ಕ್ ತನ್ನ ಓಟವನ್ನು ಮುಂದುವರೆಸಿದೆ. ಅಭಿಮಾನಿಗಳು, ಅಭಿಮಾನಿಗಳು, ಯುವಕರು ಮತ್ತು ಕುಟುಂಬಗಳಿಂದ ಪ್ರಶಂಸೆಯನ್ನು ಗಳಿಸುತ್ತಿದೆ’ ಎಂದು ಸುಪ್ರಿಯಾ ಪಿಕ್ಚರ್ ಸ್ಟುಡಿಯೋ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಅಭಿಮಾನಿಗಳು; ಸುದೀಪ್ ರಿಯಾಕ್ಷನ್ ಏನು?
‘ಮಾರ್ಕ್’ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಜೊತೆ ಯೋಗಿ ಬಾಬು, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ನಾಯಕಿಯರಿಲ್ಲ. ‘ಮ್ಯಾಕ್ಸ್’ ಶೈಲಿಯಲ್ಲೇ ಸಿನಿಮಾ ಮೂಡಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.