ಸಿನಿಮಾದಲ್ಲಿ ಹೀರೋಯಿನ್‌ಗೂ ಹೀಗೆ ಮಾಡಿದ್ರಾ? ತಮಿಳುನಾಡಿನಲ್ಲಿ ಯುಟ್ಯೂಬರ್‌ ಪ್ರಶ್ನೆ; Kiccha Sudeep ಉತ್ತರ | Mark Movie Release Event At Chennai Actor Kiccha Sudeep Controversy Question

ಸಿನಿಮಾದಲ್ಲಿ ಹೀರೋಯಿನ್‌ಗೂ ಹೀಗೆ ಮಾಡಿದ್ರಾ? ತಮಿಳುನಾಡಿನಲ್ಲಿ ಯುಟ್ಯೂಬರ್‌ ಪ್ರಶ್ನೆ; Kiccha Sudeep ಉತ್ತರ | Mark Movie Release Event At Chennai Actor Kiccha Sudeep Controversy Question


15

ಯುಟ್ಯೂಬರ್‌ ಕೇಳಿದ ಪ್ರಶ್ನೆ ಏನು?

Image Credit : instagram

ಯುಟ್ಯೂಬರ್‌ ಕೇಳಿದ ಪ್ರಶ್ನೆ ಏನು?

ಸಿನಿಮಾದಲ್ಲಿ ಮಾಸ್‌ ಡೈಲಾಗ್‌ಗಳಿವೆ. ಇಲ್ಲಿ ನೀವು ಹೀರೋಯಿನ್‌ಗಳನ್ನು ಸೈಡ್‌ನಲ್ಲಿ ಕೂರಿಸಿದ ಹಾಗೆ ಮಾರ್ಕ್‌ ಸಿನಿಮಾದಲ್ಲಿಯೂ ಹೀರೋಯಿನ್‌ಗಳಿಗೆ ಇದೇ ರೀತಿ ಡೈಲಾಗ್‌ಗಳನ್ನು ಕಡಿಮೆ ಮಾಡಿದ್ದೀರಾ? ಎಂದು ಪ್ರಶ್ನೆ ಕೇಳಲಾಗಿತ್ತು.

25

ಸೆಟ್‌ನಲ್ಲಿ ಈ ರೀತಿ ಪ್ರಶ್ನೆ ಕೇಳಲಿಲ್ಲ

Image Credit : instagram

ಸೆಟ್‌ನಲ್ಲಿ ಈ ರೀತಿ ಪ್ರಶ್ನೆ ಕೇಳಲಿಲ್ಲ

ಕಿಚ್ಚ ಸುದೀಪ್‌ ಅವರು, “ನೀವು ಕೇಳಿದಂತೆ ಯಾರೂ ಕೂಡ ನಮ್ಮ ಸೆಟ್‌ನಲ್ಲಿ ಈ ರೀತಿ ಒಂದೂ ಪ್ರಶ್ನೆಗಳನ್ನು ಕೇಳಲಿಲ್ಲ. ಅವರನ್ನು ಯಾಕೆ ಕೊನೆಯದಾಗಿ ಕರೆಯುತ್ತಾರೆ ಎಂದು ಕೇಳಲಿಲ್ಲ. ಹೀಗಾಗಿ ನಮ್ಮ ಸಿನಿಮಾ ಚೆನ್ನಾಗಿ ಬಂದಿದೆ” ಎಂದು ಹೇಳಿದ್ದಾರೆ.

35

ಕಿಚ್ಚ ಸುದೀಪ್‌ ಏನು ಮಾಡಿದ್ರು?

Image Credit : instagram

ಕಿಚ್ಚ ಸುದೀಪ್‌ ಏನು ಮಾಡಿದ್ರು?

ಅದಾದ ಬಳಿಕ ಕಿಚ್ಚ ಸುದೀಪ್‌ ಅವರು ವೇದಿಕೆಯಲ್ಲಿ ಕೊನೆಯ ಕುರ್ಚಿಯಲ್ಲಿ ಅಥವಾ ಸೈಡ್‌ನಲ್ಲಿ ಕೂತಿದ್ದ ಇಬ್ಬರು ನಟಿಯರನ್ನು ಎಬ್ಬಿಸಿ, ವೇದಿಕೆಯ ಕೇಂದ್ರದಲ್ಲಿ ಕೂರಿಸಿದ್ದಾರೆ. ಕಿಚ್ಚ ಸುದೀಪ್‌ ನಡೆಗೆ ಅಲ್ಲಿದ್ದವರು ಚಪ್ಪಾಳೆ ತಟ್ಟಿದ್ದಾರೆ.

45

ಸುದೀಪ್‌ ನೀಡಿದ ಸ್ಪಷ್ಟನೆ ಏನು?

Image Credit : Asianet News

ಸುದೀಪ್‌ ನೀಡಿದ ಸ್ಪಷ್ಟನೆ ಏನು?

“ಉದ್ದೇಶಪೂರ್ವಕವಾಗಿ ನಾವು ನಟಿಯರನ್ನು ಕೊನೆಯಲ್ಲಿ ಕೂರಿಸಿಲ್ಲ, ಇದು ಆಗಿದೆ ಅಷ್ಟೇ. ನಾವು ಸೆಲೆಬ್ರೇಶನ್‌ಗೆ ಬಂದಿದ್ದೇವೆ ಎಂದರೆ ಸೆಲೆಬ್ರೇಶನ್‌ ಮಾಡಬೇಕು, ಲವ್‌ ಅಂದಾಗ ಲವ್‌ ಮಾಡಬೇಕು, ಪರಿಶ್ರಮ ಎಂದಾಗ ಪರಿಶ್ರಮ ಹಾಕಬೇಕು” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

55

ಹೀಗೆಲ್ಲ ಮಾಡಬಾರದು

Image Credit : Asianet News

ಹೀಗೆಲ್ಲ ಮಾಡಬಾರದು

“ಯಾರ ಮೈಂಡ್‌ನಲ್ಲಿ ಅನ್‌ಕಂಫರ್ಟೇಬಲ್‌ ಫೀಲ್‌ ಇಲ್ಲ. ನಮ್ಮ ಸೆಟ್‌ನಲ್ಲಿ 1% ಯಾರೂ ಕೂಡ ಏನಾಯ್ತು ಗೊತ್ತಾ ಅಂತ ಮಾತನಾಡಲಿಲ್ಲ. ಈ ಥರ ಮಾಡಲೂಬಾರದು” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *