ಮುಂಬೈ, ಜನವರಿ 2: ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್ ಸೆಲಬ್ರೇಷನ್‌ಗೆ (ಹೊಸ ವರ್ಷದ ಆಚರಣೆ) ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆ ಗುಪ್ತಾಂಗಗಳನ್ನು ಕತ್ತರಿಸಿದ್ದಾಳೆ. ಕೊಲೆಯ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ಆಕೆ ಆತನ ಗುಪ್ತಾಂಗವನ್ನು ಕಟ್ ಮಾಡಿದ್ದಾಳೆ.
ಸಾಂತಾಕ್ರೂಜ್ ಪೂರ್ವದ ಜಂಬ್ಲಿಪಾದದಲ್ಲಿರುವ ಆರೋಪಿಯ ನಿವಾಸದಲ್ಲಿ ನಿನ್ನೆ ಬೆಳಗಿನ ಜಾವ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಜೋಗಿಂದರ್ ಲಖನ್ ಮಹಾತೋ ಎಂಬ ವ್ಯಕ್ತಿ ಕಾಂಚನ್ ರಾಕೇಶ್ ಮಹಾತೋ ಎಂಬಾ ವಿವಾಹಿತ ಮಹಿಳೆಯ ಜೊತೆ ಸುಮಾರು 7 ವರ್ಷಗಳಿಂದ ಸಂಬಂಧದಲ್ಲಿದ್ದ. ಆಕೆ ಪದೇ ಪದೇ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರೂ ಜೋಗಿಂದರು ಅದಕ್ಕೆ ಒಪ್ಪಲಿಲ್ಲ. ಆತನಿಗೂ ಮದುವೆಯಾಗಿ ಮಕ್ಕಳಿದ್ದರು. ಅವರಿಬ್ಬರಿಗೂ ಮಕ್ಕಳಿದ್ದರು. ಕಾಂಚನ್ ಜೋಗಿಂದರ್ ಗೆ ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು.
ಇದನ್ನೂ ಓದಿ: ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!
ಇದೇ ವಿಚಾರಕ್ಕೆ ಜಗಳವಾಗಿ ನವೆಂಬರ್ 2025ರಿಂದ ಆತ ಅವಳೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದ. ಆಕೆಯಿಂದ ದೂರವಾಗಲು ಆತ ತನ್ನ ಸ್ವಂತಕ್ಕೆ ಹೋಗಿದ್ದ. ಆದರೆ ಕಾಂಚನ್ ಅವನಿಗೆ ನಿರಂತರವಾಗಿ ಕರೆ ಮಾಡಿ ಮುಂಬೈಗೆ ವಾಪಾಸ್ ಬಂದು ತನ್ನನ್ನು ಮದುವೆಯಾಗುವಂತೆ ಬೆದರಿಕೆ ಹಾಕಿದಳು. ಇದರಿಂದ ಆತ ಡಿಸೆಂಬರ್ 19ರಂದು ಮುಂಬೈಗೆ ಹಿಂತಿರುಗಿದ್ದ. ಕೊನೆಗೆ ಆಕೆಯನ್ನು ಭೇಟಿಯೂ ಆಗಿದ್ದ.
ಇದನ್ನೂ ಓದಿ: ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!
ಜನವರಿ 1 ರಂದು ಬೆಳಗಿನ ಜಾವ 1.30ರ ಸುಮಾರಿಗೆ ಕಾಂಚನ್ ಆತನಿಗೆ ಫೋನ್ ಮಾಡಿ ಹೊಸ ವರ್ಷಕ್ಕೆ ಕೇಕ್, ಸ್ವೀಟ್ ತಂದಿದ್ದಳು. ಅವನು ಬಂದಾಗ ಅವನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿ ಕೋಪದಿಂದ ಅವನ ಖಾಸಗಿ ಅಂಗವನ್ನು ಕತ್ತರಿಸುತ್ತಾಳೆ. ಈ 25 ವರ್ಷದ ಮಹಿಳೆಯನ್ನು ಜನವರಿ 1 ರಂದು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿ. ಹಲ್ಲೆಗೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ