Headlines

Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ

Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ


ಬೆಂಗಳೂರು, ಫೆಬ್ರವರಿ 11: ನನ್ನ ಆಸೆಯಿಸು ಎಂದು ಸೊಸೆಗೆ ಮಾವನೇ ಇತರರು ಕಿರುಕುಳ ನೀಡಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಥಣಿಸಂಧ್ರದ ಪ್ರತಿಷ್ಟಿತ ಸ್ಕೂಲ್ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ ಆಕೆಯ ಗಂಡನ ತಂದೆ, ಕಾವಲ್ ಬೈರಸಂಧ್ರದ ಶಾಲೆಯೊಂದರ ಫೌಂಡರ್ ಆಗಿರುವ ವ್ಯಕ್ತಿ ಕಿರುಕುಳ ನೀಡಿದ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲೋದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲೆಂದರಲ್ಲಿ ಕಿರುಕುಳ ಆರೋಪ

2007ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಜೀವನ ಚೆನ್ನಾಗಿಯೇ ಇತ್ತು. ಆದರೆ ಬರ ಬರುತ್ತಾ ಮಾವನ ಕಾಟ ಶುರುವಾಗಿದೆ. 2005ರಲ್ಲಿ ಪತ್ನಿಯ ಸಾವಿನ ಬಳಿಕ ಆರೋಪಿ 2006ರಲ್ಲಿ ಎರಡನೇ ಮದುವೆಯಾಗಿದ್ದ. ಹೀಗಿದ್ದರೂ ಸೊಸೆಯ ಮೇಲೆ ಕಣ್ಣು ಹಾಕಿದ್ದ ಈತ, ಆಕೆಯ ಜೊತೆ ಅನುಚಿತ ವರ್ತನೆ ತೋರಲು ಶುರುಮಾಡಿದ್ದಾನೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿಯೇ ವಾಸವಿದ್ದ, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇರುವ ಸಮಯ ನೋಡಿಕೊಂಡು ಬಂದು ಆಕೆಗೆ ದೌರ್ಜನ್ಯ ನೀಡಿದ್ದಾಳೆ. ಅಸಭ್ಯ ಪದಗಳನ್ನು ಮಾತನಾಡುವ ಜೊತೆಗೆ ಬಲವಂತಾಗಿ ಬಟ್ಟೆ ಬಿಚ್ಚಲು ಯತ್ನಿಸುತ್ತಿದ್ದ. 2020ರಿಂದಲೇ ಮಾವನ ಈ ರೀತಿಯ ವರ್ತನೆಗಳು ಪ್ರಾರಂಭವಾಗಿತ್ತು. ಆದರೆ ಭಯಭೀತಳಾಗಿದ್ದ ಸಂತ್ರಸ್ತೆ ಎಲ್ಲವೂ ಸರಿಹೋಗಬಹುದೆಂದು ಸುಮ್ಮನಿದ್ದಳು. ಆದರೆ ಆಕೆ ಮತ್ಮತು ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಹಿಳೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಬಳಿಕ ಅಪಾರ್ಟ್‌ಮೆಂಟ್ ಲಿಫ್ಟ್, ಸ್ಕೂಲ್ ಕ್ಯಾಬಿನ್ ಸಂತ್ರಸ್ತೆ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ; ತನಿಖೆ ವೇಳೆ ಸ್ಫೋಟಕ ಬಯಲಿಗೆ

ಮಾವನ ಕಾಟಕ್ಕೆ ಬೇಸತ್ತು ಈ ವಿಷಯವನ್ನು ಪತಿಗೆ ತಿಳಿಸಿದ್ದು, ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಅವರು ಪ್ರಶ್ನಿಸಿದ್ದರು. ಹಿರಿಯ ಬಳಿಕ ಈ ಬಗ್ಗೆ ಬುದ್ಧಿಯನ್ನೂ ಹೇಳಲಾಗಿದೆ. ಕೆಲ ದಿನ ಸುಮ್ಮನಿದ್ದ ಆರೋಪಿ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ಆಕೆ ಮುಂದೆಯೇ ಓದುತ್ತಿದ್ದಳು, ಕಿರುಕುಳ ನೀಡಿ ನಂತರ ಆ ಪತ್ರವನ್ನ ತಾನೇ ಇಟ್ಟುಕೊಳ್ಳುತ್ತಿದ್ದ. ಇತ್ತೀಚೆಗ ಸಂತ್ರಸ್ತೆಯ ಮೈಕೈ ಮುಟ್ಟಿ ಆರೋಪಿ ಕಿರುಕುಳ ನೀಡಿದ್ದು, ಈ ಆಕೆ ವಿರೋಧ ವ್ಯಕ್ತಪಡಿಸಿದ ಕಾರಣ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಮಾವನ ವಿರುದ್ಧ ಕೊನೆಗೂ ಸೊಸೆ ಪೊಲೀಸರಿಗೆ ದೂರು ನೀಡಿದ್ದಾಳೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *