Headlines

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು, ಉತ್ತಮ ಮೈಲೇಜ್ ಜೊತೆಗೆ ಪೆಟ್ರೋಲ್‌ ನಿರ್ವಹಣೆಗಿಂತ ಕಡಿಮೆ ಖರ್ಚು. ಈ ಕಾರಿನ ಬೆಲೆ ಹಾಗೂ ಫೀಚರ್ಸ್ ಇಲ್ಲಿದೆ.

ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ‘ಇವಿಟಾರಾ’ವನ್ನು 10.99 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಕಾರು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಪ್ಲಾನ್‌ನೊಂದಿಗೆ ಬರುತ್ತದೆ. ಇದು ಗ್ರಾಹಕರಿಗೆ ಕಾರು ಖರೀದಿಯನ್ನು ಸುಲಭವಾಗಿಸುತ್ತದೆ. ಇದರ ಬೆನ್ನಲ್ಲೇ ಇದೀಗ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯಲ್ ಅಂದರೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಚಾಲಿತ ಕಾರು ಬಿಡುಗಡೆ ಮಾಡುತ್ತಿದೆ

ಕಂಪನಿಯು ಈಗ ಬ್ರೆಝಾದ ಫೇಸ್‌ಲಿಫ್ಟ್ ಮತ್ತು ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಅಪ್‌ಡೇಟ್ ಆದ ಬ್ರೆಝಾ ಹಲವು ಬಾರಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಹೊಸ ಮಾರುತಿ ಬ್ರೆಝಾ 2026ರ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್ ಈ ವರ್ಷದ ದ್ವಿತೀಯಾರ್ಧದಲ್ಲಿ ಶೋರೂಂಗಳಿಗೆ ಬರುವ ಸಾಧ್ಯತೆಯಿದೆ. ಬನ್ನಿ, ಇದರ ವಿವರಗಳನ್ನು ನೋಡೋಣ.
2026ರ ಮಾರುತಿ ಬ್ರೆಝಾ ಸ್ವಲ್ಪ ಬದಲಾದ ವಿನ್ಯಾಸ, ಕೆಲವು ಹೊಸ ಫೀಚರ್‌ಗಳು ಮತ್ತು ಹೊಸ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ. ರೆನಾಲ್ಟ್‌ನಿಂದ ಪಡೆದ ಈ ಟರ್ಬೊ-ಪೆಟ್ರೋಲ್ ಎಂಜಿನ್, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಡುತ್ತದೆ.ಈ ಕಾರಿನಲ್ಲಿ ಈಗಿರುವ 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳೂ ಲಭ್ಯವಿರುತ್ತವೆ. ಒಳಭಾಗದಲ್ಲಿ, ಅಪ್‌ಡೇಟ್ ಆದ ಬ್ರೆಝಾವು ವಿಕ್ಟೋರಿಯಾದಿಂದ ಎರವಲು ಪಡೆದ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರಬಹುದು. ಹೊಸ ಟ್ರಿಮ್‌ಗಳು, ಅಪ್‌ಹೋಲ್‌ಸ್ಟರಿ ಮತ್ತು ಫೀಚರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ. ಹೊರಭಾಗದಲ್ಲಿ, ಫೇಸ್‌ಲಿಫ್ಟ್ ಆವೃತ್ತಿಯು ಪರಿಷ್ಕೃತ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು ಮತ್ತು ಕನೆಕ್ಟೆಡ್ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರಬಹುದು.ಮಾರುತಿ ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್ (FFV) ಕಾರಿನ ಎಂಜಿನ್ ವಿವರಗಳು ಇನ್ನೂ ಲಭ್ಯವಾಗಿಲ್ಲ. ಆದರೆ, ಈ ಮಾಡೆಲ್ ಶೇ. 28 ರಿಂದ ಶೇ. 85 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಲ್ಲಿ ಓಡಲಿದೆ. ಫ್ಲೆಕ್ಸ್ ಫ್ಯೂಯಲ್ ಅನ್ನೋದನ್ನು ಬಿಟ್ಟರೆ, ಫ್ರಾಂಕ್ಸ್ FFV ತನ್ನ ಸಾಮಾನ್ಯ ICE ಆವೃತ್ತಿಯಂತೆಯೇ ಕಾಣಿಸುತ್ತದೆ. ಈ ಕಾಂಪ್ಯಾಕ್ಟ್ ಕ್ರಾಸ್ಒವರ್ 3,995 ಎಂಎಂ ಉದ್ದ, 1,765 ಎಂಎಂ ಅಗಲ ಮತ್ತು 1,550 ಎಂಎಂ ಎತ್ತರವನ್ನು ಹೊಂದಿದೆ.
ಮಾರುತಿ ಕಂಪನಿಯು 2027ರಲ್ಲಿ ಫ್ರಾಂಕ್ಸ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಅಪ್‌ಡೇಟೆಡ್ ಆವೃತ್ತಿಯಲ್ಲಿ ಸಣ್ಣ ವಿನ್ಯಾಸ ಬದಲಾವಣೆಗಳು ಮತ್ತು ಕೆಲವು ಹೊಸ ಫೀಚರ್‌ಗಳು ಇರಬಹುದು. ಆದರೆ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು ಕಂಪನಿಯು ಅಭಿವೃದ್ಧಿಪಡಿಸಿದ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಇದರ ಅತಿದೊಡ್ಡ ಅಪ್‌ಗ್ರೇಡ್‌ಗಳಾಗಿರಲಿವೆ.

ಫ್ರಾಂಕ್ಸ್‌ನ ಫೇಸ್‌ಲಿಫ್ಟ್ ಆವೃತ್ತಿ

Source link

Leave a Reply

Your email address will not be published. Required fields are marked *