ಭೋಪಾಲ್, ಜನವರಿ 27: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯು ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಭೋಪಾಲ್ಭೋಪಾಲ್) ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಲಿಫ್ಟ್‌ನಿಂದ ಇಳಿಯುತ್ತಿದ್ದಾಗ, ಮಾಸ್ಕ್ ಧರಿಸಿದ್ದ ಕಳ್ಳನೊಬ್ಬ ಆಕೆಯ ಕುತ್ತಿಗೆಯಿಂದ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಆಸ್ಪತ್ರೆಯೊಳಗಿನ ಲಿಫ್ಟ್ನ ಒಳಗೆ ನಡೆದಿರುವುದು ಆತಂಕಕಾರಿ ಸಂಗತಿ. ಸಿಸಿಟಿವಿಗಳ ಪ್ರಕಾರ, ಆರೋಪಿ ಮಹಿಳೆಯ ಲಿಫ್ಟ್‌ನಲ್ಲಿಯೇ ಬಂದಿದ್ದಾನೆ. ಅವಳು ಹೊರಗೆ ಹೋಗಲು ಲಿಫ್ಟ್ ಬಾಗಿಲು ತೆರೆದ ತಕ್ಷಣ ಅವನು ಅವಳ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡು ಓಡಿಹೋದನು. ಆಕೆ ಕಿರುಚುತ್ತಾ ಓಡಿದರೂ ಆತ ಪರಾರಿಯಾಗಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ