ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಹೊಲ, ದನದ ಕೊಟ್ಟಿಗೆ ಮತ್ತು ಮರಗಳಿಗೆ ಹಾನಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದಿಗೆ ಹಳಿಯಾಳದ ಜನ ಬೆಚ್ಚಿ ಬಿದ್ದಿದ್ದಾರೆ. ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಹೊಲಗಳು ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ

ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಸ್ಫೋಟ ನಡೆಸುವ ಮುನ್ನ ಕೆಂಪು ಫ್ಲಾಗ್‌ಗಳನ್ನು ಬಳಸದೇ ಭಾರೀ ಪ್ರಮಾಣದ ಸ್ಫೋಟ ನಡೆಸಿದ ಆರೋಪ ಕೇಳಿ ಬಂದಿದೆ. ಖಾಸಗಿ ವ್ಯಕ್ತಿಗಳಿಂದ ಭೂಮಿ ಲೀಸ್ ಪಡೆದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸ್ಫೋಟಕ ಬಳಸಿ ಕಲ್ಲು ಒಡೆಯುವ ಕೆಲಸ ನಡೆಸಲಾಗಿದೆ.

ಭಾರಿ ಪ್ರಮಾಣದ ಸ್ಫೋಟಕ ಬಳಕೆಯಿಂದ ಕಲ್ಲಿನ ಕ್ವಾರಿ ಇರುವ ಸ್ಥಳದ ಅಕ್ಕಪಕ್ಕದಲ್ಲಿರುವ ಹೊಲ, ದನದ ಕೊಟ್ಟಿಗೆಗಳು ಮತ್ತು ಮರಗಳ ಮೇಲೆ ಕಲ್ಲುಗಳು ಬಿದ್ದು ಹಾನಿಯಾಗಿದೆ.

ರಾಜು ಲೊಂಡಿ ಎಂಬುವವರ ಹೊಲದಲ್ಲಿದ್ದ ದನದ ಕೊಟ್ಟಿಗೆ ಹಾಗೂ ಮಾವಿನ ಮರಗಳ ಮೇಲೆ ಕಲ್ಲುಗಳು ಹಾರಿ ಬಂದು ಬಿದ್ದಿದ್ದು, ಅವರಿಗೆ ಇದರಿಂದ ಅಪಾರ ಪ್ರಮಾಣದ ಆರ್ಥಿಕ ಹಾನಿಯಾಗಿದೆ. ಅಕ್ಕ ಪಕ್ಕದ ಮನೆ ಹಾಗೂ ಹೊಲಗಳಲ್ಲೂ ಕಲ್ಲುಗಳು ಬಿದ್ದು ಹಾನಿಯಾಗಿವೆ.

ವಿಚಾರ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದು, ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಕ್ಕೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಜಗತ್ತಿನ ಬೇರೆ ದೇಶಗಳು ಅನುಭವಿಸುತ್ತಿರುವ ಹಾನಿ ಎಷ್ಟು?

ಭಾರೀ ಸ್ಫೋಟದಿಂದ ಆತಂಕದಲ್ಲಿರುವ ಜನರು ಕೂಡಲೇ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಅಮೆರಿಕಾ ರಾಯಭಾರಿಗಳ ವಜಾ ಮಾಡಿದರೆ ಮಾತ್ರ ಹರ್ಮುಜ್‌ನಲ್ಲಿ ಸಾಗಲು ಅವಕಾಶ: ಹಲವು ದೇಶಗಳಿಗೆ ಇರಾನ್ ಆಗ್ರಹ

Source link

Leave a Reply

Your email address will not be published. Required fields are marked *