Headlines

ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರದ ತ್ಯಾಜ್ಯ ಘಟಕದಲ್ಲಿ ಅಗ್ನಿ ಅವಘಡ: ಶಿರವಾಡದ ಡಂಪಿಂಗ್ ಯಾರ್ಡ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡವನ್ನು ಕಾರವಾರ, ಅಂಕೋಲಾ ಮತ್ತು ಬಿಣಗಾದ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹತೋಟಿಗೆ ತಂದಿದ್ದಾರೆ.ಘಟನೆ ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರದ ಹೊರವಲಯದ ಶಿರವಾಡದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಂದು ಮುಂಜಾನೆ ದಿಗಿಲು ಹುಟ್ಟಿಸುವ ಘಟನೆಯೊಂದು ಸಂಭವಿಸಿದೆ. ಇಡೀ ಊರು ನಿದ್ರೆಯ ಮಂಪರಿನಲ್ಲಿದ್ದಾಗ, ಡಂಪಿಂಗ್ ಯಾರ್ಡ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗಳು ಆಕಾಶವನ್ನೇ ಮುಟ್ಟುವಂತೆ ಎತ್ತರಕ್ಕೆ ಜಿಗಿಯತೊಡಗಿದವು. ದಟ್ಟವಾದ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿದ್ದರಿಂದ ಸ್ಥಳೀಯರು ಉಸಿರುಗಟ್ಟಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

ತ್ಯಾಜ್ಯ ಘಟಕದಲ್ಲಿ ಟನ್‌ಗಟ್ಟಲೆ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯವು ಬೆಂಕಿಗೆ ತುಪ್ಪ ಸುರಿದಂತಾಯಿತು. ಪ್ಲಾಸ್ಟಿಕ್ ರಾಶಿಗೆ ಬೆಂಕಿ ತಗುಲಿದ್ದರಿಂದ ದಟ್ಟವಾದ ವಿಷಕಾರಿ ಹೊಗೆ ಕಿಲೋಮೀಟರ್‌ಗಳವರೆಗೆ ಹಬ್ಬಿತ್ತು. ಡಂಪಿಂಗ್ ಯಾರ್ಡ್‌ನ ಸುತ್ತಮುತ್ತ ಹಲವಾರು ವಸತಿ ಮನೆಗಳಿದ್ದು, ಒಂದು ವೇಳೆ ಬೆಂಕಿ ಮನೆಗಳಿಗೆ ಹಬ್ಬಿದ್ದರೆ ಭಾರೀ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು.

ಘಟನಾ ಸ್ಥಳಕ್ಕೆ ಮೊದಲು ಆಗಮಿಸಿದ ಕಾರವಾರದ ಅಗ್ನಿಶಾಮಕ ದಳಕ್ಕೆ ಬೆಂಕಿಯ ತೀವ್ರತೆ ಕಂಡು ಕಂಗಾಲಾಗುವಂತಾಯಿತು. ಪರಿಸ್ಥಿತಿ ಹತೋಟಿ ಮೀರುತ್ತಿದ್ದನ್ನು ಗಮನಿಸಿ ತಕ್ಷಣವೇ ಅಂಕೋಲಾ ಹಾಗೂ ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್‌ನ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು. ಮೂರು ತಂಡಗಳ ಅಗ್ನಿಶಾಮಕ ಸಿಬ್ಬಂದಿ ಗಂಟೆಗಳ ಕಾಲ ಹರಸಾಹಸ ಪಟ್ಟು, ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ನಂತರ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಬೆಂಕಿ ನಂದಿದರೂ ಪ್ಲಾಸ್ಟಿಕ್ ಸುಟ್ಟಿದ್ದರಿಂದ ಉಂಟಾದ ವಿಷಕಾರಿ ಹೊಗೆಯ ಪರಿಣಾಮ ಶಿರವಾಡ ಭಾಗದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಜನವಸತಿ ಪ್ರದೇಶದ ಸಮೀಪವೇ ಇಷ್ಟೊಂದು ಪ್ರಮಾಣದ ತ್ಯಾಜ್ಯ ರಾಶಿ ಹಾಕಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source link

Leave a Reply

Your email address will not be published. Required fields are marked *