Headlines

ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ ತಿರುವು ಯೋಜನೆಗಳನ್ನು ಖಂಡಿಸಿ ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ ತಿರುವು ಯೋಜನೆಗಳನ್ನು ಖಂಡಿಸಿ ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ


ಜ. 11ರಂದು ಬೃಹತ್ ಪ್ರತಿಭಟನೆ

ಕಾರವಾರ, ಜನವರಿ 05: ಉತ್ತರ ಕನ್ನಡ ಜಿಲ್ಲೆ ಬೇಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳನ್ನು ಕೈಬಿಟ್ಟು ಪಶ್ಚಿಮಘಟ್ಟ ಸಂರಕ್ಷಿಸಲು ಬಯಸಿ ಜ. 11ರಂದು ಬೃಹತ್ ಜನ ಸಮಾವೇಶವನ್ನು ಶಿರಸಿಯಲ್ಲಿ ನಡೆಸಲಾಯಿತು. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ, ವಿಶೇಷ ಆಹ್ವಾನಿತರಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಭಾಗವಹಿಸಲಿದ್ದಾರೆ. ಪರಿಸರ ಅರ್ಥ ಪ್ರೋ. ಬಿ.ಎಂ. ಕುಮಾರಸ್ವಾಮಿ ಉಪನ್ಯಾಸ ನೀಡಲಿದ್ದಾರೆ.

ಸಂತರ ಸಾನ್ನಿಧ್ಯ

ಶಿರಸಿಯ ಎಂಐಎಸ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2 ರಿಂದ ಸಮಾವೇಶ ನಡೆಯಲಿದೆ, ಹಲವಾರು ಸಂತರ ದಿವ್ಯ ಉಪಸ್ಥಿತಿ ಈ ವೇಳೆ ಇರಲಿದೆ. ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮನ್ನೆಲೆಮಾವು ಮಾಧವಾನಂದ ಭಾರತೀ ಶ್ರೀಗಳು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸ್ವಾದೀ ದಿಗಂಬರ ಜೈನ ಮಠದ ಭಟ್ಟಾಕಲಂಕಾಚಾರ್ಯ ಭಟ್ಟಾರಕ ಪಟ್ಟವರ್ಯ ಶ್ರೀಗಳು, ಸೊರಬದ ಜಡೆಯ ಡಾ. ಮಹಾಂತ ಮಹಾಸ್ವಾಮಿಗಳು ಮತ್ತು ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?

ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಅಂಕೋಲಾ-ಕಾರವಾರ ಶಾಸಕ ಸತೀಶ್ ಸೈಲ್, ಶಿರಸಿ-ಸಿದ್ದಾಪುರ ಶಾಸಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್ ಮತ್ತು ಶಾಂತಾರಾಮ ಸಿದ್ಧಿ ಭಾಗವಹಿಸಲಿದ್ದಾರೆ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:21 pm, ಸೋಮ, 5 ಜನವರಿ 26



Source link

Leave a Reply

Your email address will not be published. Required fields are marked *