Headlines

ದೇವನಹಳ್ಳಿ: ಸಿಗರೇಟ್ ಸೇದಲು ಮ್ಯಾಚ್ ಬಾಕ್ಸ್ ಕೊಡದ್ದಕ್ಕೆ ಜೀವವೇ ಹೋಯ್ತು!

ದೇವನಹಳ್ಳಿ: ಸಿಗರೇಟ್ ಸೇದಲು ಮ್ಯಾಚ್ ಬಾಕ್ಸ್ ಕೊಡದ್ದಕ್ಕೆ ಜೀವವೇ ಹೋಯ್ತು!


ದೇವನಹಳ್ಳಿ, ಜನವರಿ 27: ಇಬ್ಬರ ನಡುವಿನ ಹಳೆಯ ದ್ವೇಷ, ಅಸೂಯೆಗೆಲ್ಲಾ ರಕ್ತಪಾತವಾಗುವುದನ್ನು ನಾವು ಕಾಣುತ್ತೇವೆ. ಆದರೆ ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನನ್ನೇ ಕೊಲೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ (ಬೆಂಗಳೂರು ಗ್ರಾಮಾಂತರ) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ವಿನಾಯಕ ಈ ದುರಂತ ನಡೆದಿದ್ದು, ಹಲವು ದಿನಗಳಿಂದ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆಯ ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

ಹೊಸವರ್ಷದ ಸಂದರ್ಭದಲ್ಲಿ ಆರೋಪಿಗಳು ಸುಶಾಂತ್ ಎಂಬ ಯುವಕನ ಬಳಿ ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ಕೇಳಿದ್ದರು. ಆದರೆ ಸುಶಾಂತ್ ನಿರಾಕರಿಸಿದ್ದ. ಈ ವೇಳೆ ಮ್ಯಾಚ್ ಬಾಕ್ಸ್ ತಂದುಕೊಡು ಎಂದು ಒತ್ತಾಯಿಸಿದರೂ ಸುಶಾಂತ್ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಉಜ್ವಲ್ ಪ್ರಸಾದ್, ಪ್ರಿನ್ಸ್ ಮತ್ತು ಸೂರಜ್ ರಾಮ್, ರಾತ್ರಿ ಅಪ್ರಾಪ್ತ ಸೇರಿ ನಾಲ್ವರು ಸುಶಾಂತ್ ಅವರನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದರು.

ಸುಶಾಂತನನ್ನು ಹಿಡಿದು 2ನೇ ಮಹಡಿಯಿಂದ ಕೆಳಕೆ ತಳ್ಳಿದ್ದರು. ಈ ಘಟನೆಯು ಸ್ಥಳೀರನ್ನು ಬೆಚ್ಚಿ ಬೀಳಿಸಿತ್ತು. ಕೃತ್ಯ ಎಸಗಿದ ನಾಲ್ವರಲ್ಲಿ ಉಳಿದ ಅಪ್ರಾಪ್ತನಾಗಿದ್ದರೆ, ನಂತರ ಮೂವರೊಟ್ಟಿಗೆ ಈತನೂ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತನಿಖೆ ಆರಂಭಿಸಿದ್ದರು. ಸಿಸಿಟಿವಿ ಮತ್ತು ಸ್ಥಳೀಯರಿಂದ ಸಿಕ್ಕ ಮಾಹಿತಿ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹುಡುಕಿ ಬಂಧನಕ್ಕೊಳಪಡಿಸಲಾಗಿದೆ, ವಿಚಾರಣೆ ನಡೆಸಲಾಗುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:30 pm, ಮಂಗಳವಾರ, 27 ಜನವರಿ 26



Source link

Leave a Reply

Your email address will not be published. Required fields are marked *