Headlines

ಹಲವು ಯುವತಿಯರಿಗೆ ವಂಚನೆ, ಮಾಜಿ ಸಂಸದನ ಆಪ್ತನೆಂದುಕೊಂಡು ಉಂಡೆ ನಾಮ! ಬಯಲಾಯ್ತು ಮ್ಯಾಟ್ರಿಮೋನಿ ವಂಚಕನ ಕರ್ಮಕಾಂಡ

ಹಲವು ಯುವತಿಯರಿಗೆ ವಂಚನೆ, ಮಾಜಿ ಸಂಸದನ ಆಪ್ತನೆಂದುಕೊಂಡು ಉಂಡೆ ನಾಮ! ಬಯಲಾಯ್ತು ಮ್ಯಾಟ್ರಿಮೋನಿ ವಂಚಕನ ಕರ್ಮಕಾಂಡ


ಬೆಂಗಳೂರು, ಜನವರಿ 23: ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ನಂಬಿಸಿ ಮಿಲಿಯನ್ ರೂಪಾಯಿ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬರು ದೂರಿದ್ದಾರೆ. (ಬೆಂಗಳೂರು) ಕಾಡುಗೋಡಿ ಠಾಣೆಯಲ್ಲಿ ವಿಜಯ್ ರಾಜ್ ಗೌಡ ಎಂಬಾತ ಸೇರಿ ಆತನ ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಆಸಾಮಿ ಮ್ಯಾಟ್ರಿಮೋನಿಯಲ್ಲಿ ಮೋಸ ಮಾಡಿರುವುದು ಮೊದಲೆಲ್ಲ ಗೊತ್ತಾಗಿದೆ. ಕಳೆದ ಏಳೆಂಟು ವರ್ಷಗಳಿಂದ 2019 ರಿಂದಲೂ2026 ರ ವರೆಗೆ ಹಲವಾರು ಯುವತಿಯರಿಗೆ ಮೋಸ ಮಾಡಿದ್ದು, ಕಂಡು ಬಂದಿದೆ.

2019 ರಲ್ಲಿ ಕುಣಿಗಲ್‌ನಲ್ಲಿ, 2022 ರಲ್ಲಿ ಅತ್ತಿಬೆಲೆಯಲ್ಲಿ 2023 ರಲ್ಲಿ ಶಿವಮೊಗ್ಗ, 2025 ರಲ್ಲಿ ಬೆಂಗಳೂರು, 2026 ರಲ್ಲಿ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದ ನಂತರ, ‘ನಾನು ದೊಡ್ಡ ಉದ್ಯಮಿ, ಇಡಿಯಲ್ಲಿ ಕೇಸ್ ಒಂದರ ಸಂಬಂದ ಹಣ ಪ್ರೀಜ್ ಆಗಿದೆ. ಅದನ್ನು ರಿಲೀಸ್ ಮಾಡಲು ಹಣ ಬೇಕು’ ಎಂದು ಹೇಳುತ್ತಿದ್ದರು. ಜೊತೆಗೆ, ಲಕ್ಷ ಲಕ್ಷ ಬ್ಯಾಂಕ್‌ನಲ್ಲಿ ಪ್ರೀಜ್ ಆಗಿರುವುದಕ್ಕೆ ಬೇಕಾದ ನಕಲಿ ದಾಖಲೆಗಳನ್ನು, ಕೋರ್ಟ್ ಪ್ರತಿಗಳನ್ನು ಹಣ ನೀಡಿ ಹಣ ನಂತರ ಪೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗುತ್ತಿದ್ದ.

ಹೀಗೆ ಒಬ್ಬೊಬ್ಬರಿಂದ 10 ಲಕ್ಷ, 30 ಲಕ್ಷ, 13 ಲಕ್ಷ ಪಡೆದಿದ್ದಾನೆ. ಕೆಂಗೇರಿಯಲ್ಲಿ 1.53 ಕೋಟಿ ರೂ. ಹಣ ಪರಿಚಯವು ಹೆಂಡತಿಯನ್ನು ಅಕ್ಕ ಎಂದು ಮಾಡಿಕೊಟ್ಟಿದ್ದ.

ಮಾಜಿ ಸಂಸದ ಡಿಕೆ ಸುರೇಶ್ ಹೆಸರು ದುರ್ಬಳಕೆ

ಈ ಆರೋಪಿ ಟೆಂಡರ್ ಕೊಡಿಸುವ ಡೀಲ್‌ನಲ್ಲಿ ಕುಣಿಗಲ್‌ನಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ. ಡಿಕೆ ಸುರೇಶ್ ನನಗೆ ಆಪ್ತರು ಎಂದು ಹೇಳಿಕೊಂಡು ಟೆಂಡರ್ ಕೊಡಿಸುವುದಾಗಿ ನಂಬಿದ್ದರು. ಟಾಟಾ ಪವರ್ ಡಿಡಿಎಲ್ ಕಂಪನಿಗೆ ವಾಹನದ ಗುತ್ತಿಗೆ ಕೊಡಿಸುವುದಾಗಿಯೂ ಹೇಳಿದ್ದ. 2019 ರಲ್ಲಿ ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಾಜೆಕ್ಟ್ ಕೊಡಿಸುವುದಕ್ಕೆ ನಕಲಿ ಸಹಿ ಸೀಲ್ ರೆಡಿ ಉಪಯೋಗಿಸಿಕೊಂಡು ವಂಚನೆ ಮಾಡಿದೆ.

ಆನೇಕಲ್ ನಲ್ಲಿ ಸಿಮೆಂಟ್ ಫ್ಯಾಕ್ಟರಿಯನ್ನು ಮಾರಾಟ ಮಾಡಿ ಹಣ ಪಾವಸ್ ಕೊಡುತ್ತೇನೆ ಎಂದು ನಂಬಿಸಿ ಯುವತಿಗೆ ಮೋಸ ಮಾಡಿದ್ದ. ಆರೋಪಿ ಶಿವಮೊಗ್ಗ, ಆನೇಕಲ್, ಅತ್ತಿಬೆಲೆ, ಬೆಂಗಳೂರು ಉತ್ತರ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗೆ ಕಳೆದ ಕೆಲವು ವರ್ಷಗಳಿಂದ ಮೋಸ, ವಂಚನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಆರೋಪಿ ಈಗ ಲಾಕ್ ಆಗಿದ್ದಾನೆ.

ಇದನ್ನೂ ಓದಿ: ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ! ಬರೋಬ್ಬರಿ 1.53 ಕೋಟಿ ರೂ. ವಂಚನೆ

ಒಟ್ಟಿನಲ್ಲಿ ತಂದೆಯನ್ನು ನಿವೃತ್ತ ತಹಶೀಲ್ದಾರ್, ಹೆಂಡತಿಯನ್ನು ಅಕ್ಕ, ತಾಯಿಯನ್ನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ವಂಚಕನ ಕುಟುಂಬ ಇವನಿಗೆ ಸಾಥ್ ಕೊಟ್ಟಿರುವುದು ಮಾತ್ರ ದುರಂತ. ಆರೋಪಿ ವಿರುದ್ಧ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿದ್ದು, ವಂಚನೆಗೊಳಗೊಂಡವರು ದೂರು ನೀಡುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *