
‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾದ ಶೀರ್ಷಿಕೆ ಇತ್ತೀಚೆಗೆ ‘ಮಾತೃಭೂಮಿ’ (ಮಾತ್ರಭೂಮಿ) ಎಂದು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಏನು ತಂಡ ರಿವೀಲ್ ಮಾಡಲಿಲ್ಲ. ಹೀಗಿರುವಾಗಲೇ ಇದರ ಹಿಂದಿನ ಅಸಲಿ ವಿಷಯ ರಿವೀಲ್ ಆಗಿದೆ. ಸಲ್ಮಾನ್ ಖಾನ್ ಸಿನಿಮಾ ದುಬಾರಿ ಆಗಿದೆ. ತಂಡದವರು ಸಿನಿಮಾದ ಟೈಟಲ್ ಬದಲಿಸಿದ್ದು, 40 ದಿನಗಳ ರೀ ಶೂಟ್ ಆಗುತ್ತಿದೆ.
ಅಪೂರ್ವ ಲಖಿಯಾ ಅವರು ‘ಮಾತೃಭೂಮಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಸಂಘರ್ಷದ ಬಗ್ಗೆ ಸಿನಿಮಾ ಇದೆ. ದಿವಂಗತ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬುನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. 2205ರ ಸೆಪ್ಟೆಂಬರ್ ಅಲ್ಲಿ ಲಡಾಕ್ ನಲ್ಲಿ ಸಿನಿಮಾ ಶೂಟ್ ಮಾಡುವ ಪ್ಲ್ಯಾನ್ ಇತ್ತು. ಡಿಸೆಂಬರ್ ವೇಳೆಗೆ ಆ ಕಡೆ ಸಿನಿಮಾ ಶೂಟ್ ಕಂಪ್ಲೀಟ್ ಮಾಡುವ ಆಲೋಚನೆ ಇತ್ತು.
ಈಗ ಸಿನಿಮಾ ದುಬಾರಿ ಆಗುತ್ತಿದೆ. ಫೆಬ್ರವರಿಯಿಂದಲೇ ಸಿನಿಮಾದ ರೀಶೂಟ್ ಮುಂಬೈನಲ್ಲಿ ನಡೆದಿದೆ. ಸಿನಿಮಾದ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿರುವ ಕಾರಣದಿಂದ ರೀ ಶೂಟಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ.
ಚೈನೀಸ್ ಹಾಡನ್ನು ಸಿನಿಮಾದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುತ್ತಿದೆ. ಹಿಮೇಶ್ ರೇಶ್ಮಿಯಾ ಅವರು ಈ ಹಾಡನ್ನು ಕಂಪೋಸ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಕೂಡ ಈ ಹಾಡಿನಲ್ಲಿ ಇರಲಿದ್ದಾರೆ. ರೆಕಾರ್ಡ್ ಮುಗಿದ ಬಳಿಕ ಹಾಡಿನ ಶೂಟ್.
ಇದನ್ನೂ ಓದಿ: ‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಶೀರ್ಷಿಕೆ
ಸದ್ಯದ ರಾಜಕೀಯ ಸನ್ನಿವೇಶಗಳ ಕಾರಣದಿಂದ ಈ ಬದಲಾವಣೆಯನ್ನು ಮಾಡಲಾಗಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ಬದಲಿಸಲಾಗಿದೆ. ಗಲ್ವಾನ್ ಸಂಘರ್ಷದ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು ಶಾಂತಿ, ಸಾಮರಸ್ಯ ಮತ್ತು ಯುದ್ಧ ಮಾಡುವುದರಿಂದ ಹೋಗುವ ಜೀವಗಳ ವಿಷಯದ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.