‘ಅವರು ಕೆಟ್ಟವರಲ್ಲ, ದೇವರೇ ಇದನ್ನು ಮಾಡಿಸಿದ್ದು’; ಕಷ್ಟದ ದಿನ ನೆನೆದ ಮಯೂರಿ

‘ಅವರು ಕೆಟ್ಟವರಲ್ಲ, ದೇವರೇ ಇದನ್ನು ಮಾಡಿಸಿದ್ದು’; ಕಷ್ಟದ ದಿನ ನೆನೆದ ಮಯೂರಿ


ಮಯೂರಿ (ಮಯೂರಿ) ಅವರು ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದವರು.ನಂತರ ಹಿರಿತೆರೆಯಲ್ಲಿ ಮಿಂಚಿದರು. ಅವರು ಈಗ ಕುಟುಂಬದ ಕಡೆ ಗಮನ ಹರಿಸುತ್ತಾ ಇದ್ದಾರೆ. ಮಗ ಆರವ್ಗೆ ಐದು ವರ್ಷ. ಅವರು ನಟನಾ ಕ್ಷೇತ್ರದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ, ಆದರೆ, ಅವರಿಗೆ ನಟನೆಗೆ ಮರಳಬೇಕು ಎಂಬ ಆಸೆ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವಾಗ ತಾವು ನಡೆದು ಬಂದ ಕಷ್ಟದ ಹಾದಿಯನ್ನು ಅವರು ನೆನಪಿಸಿಕೊಂಡರು. ತಮಗೆ ಕೆಟ್ಟದ್ದನ್ನು ಮಾಡಿದವರು ಯಾರೂ ಕೆಟ್ಟವರಲ್ಲ.

ಮಯೂರಿ ಆಗತಾನೇ ಬಣ್ಣದ ಲೋಕಕ್ಕೆ ಬಂದಿದ್ದರು. ಆಗ ಅವರು ಸಾಕಷ್ಟು ತೊಂದರೆ ಅನುಭವಿಸಿದರಂತೆ. ಕಿರುತೆರೆ ನಟಿ ಏನು ಮಾಡಲು ಸಾಧ್ಯ ಎಂಬ ರೀತಿಯಲ್ಲಿ ಎಲ್ಲರೂ ಪ್ರಶ್ನೆ ಮಾಡಿದರು. ಆ ಪ್ರಶ್ನೆ ಮಯೂರಿ ಅವರಿಗೆ ಬಹುವಾಗಿ ಚುಚ್ಚಿತ್ತು. ಸಿನಿಮಾ ಮಾಡಲು ಇದುವೇ ಅವರಿಗೆ ಸ್ಫೂರ್ತಿಯಾಯಿತು.ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಗೊತ್ತಿದ್ದು ಗೊತ್ತಿಲ್ಲದೆ ತಪ್ಪು ಸರಿ ಮಾಡಿರುತ್ತೇವೆ. ನಾನು ಆಗತಾನೇ ನಟನೆಗೆ ಬಂದಿದ್ದೆ. ಆಗ ಕೆಲವು ಕೆಟ್ಟ ಕಮೆಂಟ್ ಪಾಸ್ ಮಾಡುವಂತೆ. ಅವರು ಕೆಟ್ಟವರಲ್ಲ. ನಾನು ಏನೋ ಮಾಡಿ ತೋರ್ತೀನಿ ಎಂಬ ಛಲ ಬಂದಿದ್ದು ಅವರಿಂದ. ದೇವರೇ ಅವರಿಗೆ ಟಾಸ್ಕ್ ಕೊಟ್ಟಿದ್ದರು ಅನಿಸುತ್ತದೆ. ನನಗೆ ಯಾರಾದರೂ ಏನಾದರೂ ಹೇಳಿದರೆ ಅದು ನನಗೆ ಮ್ಯಾಟರ್ ಆಗುತ್ತದೆಯೋ ಇಲ್ಲವೋ ಎಂದು ನೋಡುತ್ತೇನೆ. ಮ್ಯಾಟರ್ ಆದರೆ ಮಾತ್ರ ಯೋಚಿಸುವೆ’ ಎಂಬುದು ಮಯೂರಿ ಮಾತು.

‘ಮೂರನೇ ವ್ಯಕ್ತಿಯ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋದು ಸಹಜಗುಣ. ಈ ರೀತಿಯ ಗುಣ ಬೆಳೆಸಿಕೊಂಡರೆ ಎಲ್ಲಿಯೂ ಹೋಗೋಕೆ ಆಗಲ್ಲ. ಇದ್ದಲ್ಲಿಯೇ ಇರಲಾಗುತ್ತಿತ್ತು. ಹಾಗೆ ಮಾಡಬಾರದು. ಆ ಎಲ್ಲವೂ ಚೆನ್ನಾಗಿರುತ್ತದೆ. ಎಲ್ಲರ ಲೈಫ್ ಗೂ ಕ್ಲ್ಯಾರಿಟಿ ಬರುತ್ತದೆ’ ಎಂದು ಅವರು ಹೇಳಿದ್ದಾರೆ. ನೋಡೋ ದೃಷ್ಟಿ ಚೆನ್ನಾಗಿದ್ದರೆ ಚೆನ್ನಾಗಿ ಕಾಣುತ್ತದೆ’ ಎಂದು ಮಯೂರಿ.

ಇದನ್ನೂ ಓದಿ: ‘ಮಗನಿಗೆ ಒಳ್ಳೆಯ ಅಪ್ಪ ಇದ್ದಾನೆ’; ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ಮಯೂರಿ

‘ಹಾಡು ಕೇಳುವಾಗ, ಸುತ್ತಾಡುವಾಗ ನನಗೆ ನೆನಪು ಕಾಡುತ್ತದೆ. ಹಾಗೆ ಮಾಡದೆ, ಹೀಗೆ ಮಾಡದೆ ಎಂದೆಲ್ಲ ನೆನಪಿಸಿಕೊಳ್ಳುತ್ತೇವೆ. ನಾವು ನಮ್ಮನ್ನು ಮೊದಲು ಕ್ಷಮಿಸಿ. ಆಗ ಎಲ್ಲವೂ ಸುಂದರ ಇದೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *