
ಮಂಗಳೂರು, ಮಾರ್ಚ್ 30: 12ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿರುವಂತಹ (ಸಾವು) ಮಂಗಳೂರು ಕ್ಯಾಸಾಗ್ರಾಂಡ್ ಅಪಾರ್ಟ್‌ಮೆಂಟ್ ಘಟನೆ ನಡೆದಿದೆ. ಸ್ನೇಹಿತರನ್ನು ಭೇಟಿ ಮಾಡಲು ಪರಿಚಯಸ್ಥರ ಫ್ಲಾಟ್‌ಗೆ ಬಂದಿದ್ದ ವೇಳೆ ಅಲ್ಲಿಂದ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯ ಹೆಸರು ಮತ್ತು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ದಾಸವಾಳ ಹೂವು ನುಂಗಿ ಮಗು ಸಾವು
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆ ಹೊಸ್ತಿಲಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವು ನುಂಗಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ
ಸುದರ್ಶನ್, ನವ್ಯಾ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿಗೌಡ ಮೃತ ಮಗು. ಮನೆ ಹೊಸ್ತಿಲಿನಲ್ಲಿ ಪೂಜೆಗೆ ದಾಸವಾಳ ಹೂವು ಇಟ್ಟಿದ್ದರು. ಒಣಗಿದ ಹೂವನ್ನು ನುಂಗಿ ಚಿನ್ಮಯಿಗೌಡ ಅಸ್ವಸ್ಥಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಚಿನ್ಮಯಿಗೌಡ ಕಾಣಿಸಿಕೊಂಡಿದ್ದಾನೆ.
ರಥೋತ್ಸವ ನೋಡಲು ಬಂದಿದ್ದ ವ್ಯಕ್ತಿ ಹೃದಯಘಾತದಿಂದ ಸಾವು
ಪ್ರಕರಣದಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ರಥೋತ್ಸವ ನೋಡಲು ಬಂದಿದ್ದ ಮಾಗಡಿ ಮೂಲದ ನಂಜುಂಡಸ್ವಾಮಿ 56) ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರಥೋತ್ಸವ ನೋಡಲು ಬಂದಿದ್ದ ನಂಜುಂಡಸ್ವಾಮಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಆಟವಾಡುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಬಳಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಆಟವಾಡುವಾಗ ಆಯತಪ್ಪಿ ಬಿದ್ದು ಕೀರ್ತನಾ(10) ಮೃತಪಟ್ಟಿದ್ದಾಳೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.