ಲಕ್ನೋ, ನವೆಂಬರ್ 25: ಪ್ರಿಯಕರನಿಗಾಗಿ ಗಂಡನನ್ನು ಕೊಂಡು ಡ್ರಮ್ ನಲ್ಲಿರಿಸಿ ಸಿಮೆಂಟ್ ನಿಂದ ಸೀಲ್ ಮಾಡಿ ಸಿಕ್ಕಿ ಬಿದ್ದಿದ್ದ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಮೀರತ್ನಲ್ಲಿ ಗಂಡನನ್ನು ಕೊಲೆ(ಕೊಲೆ) ಆತನ ದೇಹವನ್ನು ತುಂಡು ಮಾಡಿ ಡ್ರಮ್‌ನಲ್ಲಿ ತುಂಬಿಸಿ ಜೈಲು ಪಾಲಾಗಿದ್ದ ಆರೋಪಿ ಮುಸ್ಕಾನ್ ರಸ್ತೋಗಿ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. 27 ವರ್ಷದ ಯುವಕನನ್ನು ಆತನ ಪತ್ನಿ ಮುಸ್ಕನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಂದಿದ್ದರು. ಬಳಿಕ ದೇಹವನ್ನು ಕತ್ತರಿಸಿ ಡ್ರಮ್ ನೊಳಗಿಟ್ಟು ಸಿಮೆಂಟ್ ನಿಂದ ಸೀಲ್ ಮಾಡಲಾಗಿತ್ತು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸ್ವಲ್ಪ ಸಮಯದಲ್ಲೇ ಮುಸ್ಕನ್ ಗರ್ಭಿಣಿ ಎಂಬುದು ತಿಳಿದುಬಂದಿತ್ತು. ಇದೀಗ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯನ್ನು ಬಂಧಿಸಿದ ಎರಡು ದಿನಗಳ ಬಳಿಕ ಜೈಲಿನಲ್ಲಿರುವ ಮುಸ್ಕನ್ ಆರೋಗ್ಯ ಹದಗೆಟ್ಟಿತ್ತು. ಅಸ್ವಸ್ಥಳಾಗಿದ್ದ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಆಕೆ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಆಕೆಯ ಹೊಟ್ಟೆಯಲ್ಲಿರುವ ಮಗು ಗಂಡನದ್ದಾ ಅಥವಾ ಪ್ರಿಯಕರನದ್ದಾ ಎಂಬುದು ತಿಳಿದಿರಲಿಲ್ಲ.
ಮಾರ್ಚ್ 3 ರಂದು ಪತಿ ಸೌರಭ್ ರಾಜಪೂತ್ನನ್ನು ಕೊಂದು ನಂತರ ಪ್ರಿಯಕರ ಸಾಹಿಲ್ ಜತೆ 11 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಸುತ್ತಾಡಿದ್ದಳು. ಭಾನುವಾರ ರಾತ್ರಿ 11.30 ರ ಸುಮಾರಿಗೆ ಮುಸ್ಕಾನ್ ಅವರ ಹೆರಿಗೆ ಹೆಚ್ಚಾದ ನಂತರ ಅವರನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ಕರೆತರಲಾಯಿತು ಎಂದು ಹಿರಿಯ ಜೈಲು ಸೂಪರಿಂಟೆಂಡೆಂಟ್ ಡಾ. ವಿರೇಶ್ ರಾಜ್ ಶರ್ಮಾ ಪಿಟಿಐಗೆ.
ಮತ್ತಷ್ಟು ಓದಿ: ಕೊಲೆ ಪ್ರಕರಣ: ಮುಸ್ಕನ್, ಪತಿ ಸೌರಭ್‌ನನ್ನು ತುಂಡು ತುಂಡಾಗಿ ಕತ್ತರಿಸಿದ್ದೇಕೆ?
ನವಜಾತ ಶಿಶುವಿನ ತೂಕ 2.4 ಕೆಜಿ ಇದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಜೈಲು ವೈದ್ಯರು ಸೂಚಿಸಿದ್ದಾರೆ. ಮುಸ್ಕನ್ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು ಎಂದು ಹಿರಿಯ ಜೈಲು ಅಧೀಕ್ಷಕರು ಅವರು. ಆದರೆ, ಕುಟುಂಬದಿಂದ ಯಾರೂ ಮುಸ್ಕನ್ ಅವರನ್ನು ಆಸ್ಪತ್ರೆಗೆ ಭೇಟಿ ನೀಡಲಿಲ್ಲ.
ಭದ್ರತಾ ವ್ಯವಸ್ಥೆಗಳ ಕುರಿತು ವಿಶೇಷ ಸೂಚನೆಗಳನ್ನು ನೀಡಲಾಗುತ್ತದೆ ಮತ್ತು ಕಾಲಕಾಲಕ್ಕೆ ವೈದ್ಯಕೀಯ ದಾಖಲೆಗಳನ್ನು ಸಹ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು. ಮೊದಲ ಯೋಜನೆ ಪ್ರಕಾರ, ಇಬ್ಬರು ಆರೋಪಿಗಳು ಶವವನ್ನು ಸೂಟ್ ಕೇಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಲು ಬಯಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೂಟ್ಕೇಸ್‌ನಲ್ಲಿ ಮೂಳೆಯ ತುಂಡು ಕೂಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:58 am, ಮಂಗಳವಾರ, 25 ನವೆಂಬರ್ 25