2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಹೀನಾಯ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಪಾಕ್‌ನ ನತಾಲಿಯಾ ಪರ್ವೇಜ್ ತಮ್ಮ ಬ್ಯೂಟಿಫುಲ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.

ನತಾಲಿಯಾ ಪರ್ವೇಜ್ ಡಿಸೆಂಬರ್ 25, 1995 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (POK) ಬಂದಾಲಾದಲ್ಲಿ ಜನಿಸಿದರು. 30 ವರ್ಷದ ನತಾಲಿಯಾ ಬಲಗೈ ಬ್ಯಾಟರ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್.

ನತಾಲಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಹೊರತುಪಡಿಸಿ, ಹೈಯರ್ ಎಜುಕೇಶನ್ ಕಮಿಷನ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಮತ್ತು ಸೂಪರ್ ವುಮೆನ್‌ಗಾಗಿ ದೇಶೀಯ ಕ್ರಿಕೆಟ್ ಆಡುತ್ತಾರೆ.

ನತಾಲಿಯಾ ಮಾರ್ಚ್ 20, 2018 ರಂದು ಶ್ರೀಲಂಕಾ ವಿರುದ್ಧ ದಾಂಬುಲಾದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಅವರು ಅಜೇಯ 21 ರನ್ ಗಳಿಸಿದ್ದರು.

T20I ಪಂದ್ಯಗಳ ಬಗ್ಗೆ ಹೇಳುವುದಾದರೆ, ನತಾಲಿಯಾ ಪರ್ವೇಜ್ ನವೆಂಬರ್ 9, 2017 ರಂದು ನ್ಯೂಜಿಲೆಂಡ್ ವಿರುದ್ಧ ಶಾರ್ಜಾದಲ್ಲಿ ತಮ್ಮ ಮೊದಲ T20 ಪಂದ್ಯವನ್ನು ಆಡಿದ್ದರು. ಇದರಲ್ಲಿ ಅವರು ಕೇವಲ 1 ರನ್ ಗಳಿಸಿದ್ದರು.

ನತಾಲಿಯಾ ಪರ್ವೇಜ್ 12 ಏಕದಿನ ಪಂದ್ಯಗಳಲ್ಲಿ 80.72 ಸ್ಟ್ರೈಕ್ ರೇಟ್‌ನಲ್ಲಿ 222 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 73 ರನ್. ಬೌಲಿಂಗ್‌ನಲ್ಲಿ ಅವರು ಕೇವಲ 1 ವಿಕೆಟ್ ಪಡೆದಿದ್ದಾರೆ.

T20I ಪಂದ್ಯಗಳ ಬಗ್ಗೆ ಹೇಳುವುದಾದರೆ, ನತಾಲಿಯಾ ಪರ್ವೇಜ್ 24 ಪಂದ್ಯಗಳಲ್ಲಿ 15 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 119 ರನ್ ಗಳಿಸಿದ್ದಾರೆ. ಹಾಗೆಯೇ 6 ವಿಕೆಟ್‌ಗಳನ್ನು ಪಡೆದಿದ್ದಾರೆ.

Source link
ಇವರೇ ನೋಡಿ ಪಾಕಿಸ್ತಾನದ ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್! ಈಕೆಯ ಮೂಲ ಕಾಶ್ಮೀರ