ಮೆಗಾಸ್ಟಾರ್ ಚಿರಂಜೀವಿ (ಚಿರಂಜೀವಿ) ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸಂಘ ಸಂಸ್ಥೆಗಳಲ್ಲಿ ಸ್ಥಾನ ಪಡೆದಿಲ್ಲ. ಹಾಗಿದ್ದರೂ ಸಹ ಚಿತ್ರರಂಗದ ಪರವಾಗಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಜಗನ್ ಸರ್ಕಾರದ ಅವಧಿಯಲ್ಲಿ ಜಗನ್ ತಂದ ಕೆಲವು ನಿಯಮಗಳಿಂದ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ನಟರು, ನಿರ್ಮಾಪಕರು ಬಹಿರಂಗವಾಗಿ ಸರ್ಕಾರದ ವಿರುದ್ಧ ನಿಂದನೆ, ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು. ಆದರೆ ಚಿರಂಜೀವಿ, ತಮ್ಮ ಸ್ಟಾರ್ ಗಿರಿಯನ್ನು ಪಕ್ಕಕ್ಕಿಟ್ಟು ಜಗನ್ ಮನೆಗೆ ಹೋಗಿ ಅವರಲ್ಲಿ ಮನವಿ ಮಾಡಿಕೊಳ್ಳಲು ಚಿತ್ರರಂಗಕ್ಕೆ ಅನುಕೂಲವಾಗುವಂತೆ ಅವಕಾಶಗಳನ್ನು ತಿದ್ದುವಲ್ಲಿ ಯಶಸ್ವಿ ಆಗಿದ್ದರು. ಅವರು ಸಹ ಅವರು ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಸೈದರಾಬಾದ್ ಪೊಲೀಸರನ್ನು ಭೇಟಿಯಾಗಿದ್ದರು.
ಅಸಲಿಗೆ ಕೆಲ ತಿಂಗಳ ಹಿಂದೆಯೇ ನಟ ಚಿರಂಜೀವಿ ಅವರು ಗೆಳೆಯ ನಾಗಾರ್ಜುನ ಸೇರಿದಂತೆ ಇನ್ನೂ ಕೆಲವು ನಿರ್ಮಾಪಕರುಗಳಿಗೆ ಸೈಬರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಪೈರಸಿ ತಡೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಅದಾದ ಬಳಿಕ ಚಿರಂಜೀವಿ ಮನವಿಗೆ ಹಾಜರಾಗಿದ್ದ ಕೆಲ ಪೈರಸಿಕೋರರನ್ನು ಬಂಧಿಸಿದ್ದರು. ಆದರೂ ಸಹ ಕೆಲ ಪ್ರಮುಖ ಪೈರಸಿಕೋರರನ್ನು ಬಂಧಿಸುವುದು ಬಾಕಿ ಇತ್ತು. ಇತ್ತೀಚೆಗಷ್ಟೇ ತೆಲುಗಿನ ಕುಖ್ಯಾತ ಪೈರಸಿ ವೆಬ್ ಸೈಟ್ ಸ್ಥಾಪಕ ರವಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲುಗು ಸಿನಿಮಾ ನಿರ್ಮಾಪಕರು ವರ್ಷಗಳಿಂದಲೂ ಕಾಡಿದ್ದ, ನೂರಾರು ಕೋಟಿ ಹಣ ನಷ್ಟಕ್ಕೆ ಕಾರಣವಾದ ಐಬೊಮ್ಮ ಪೈರಸಿ ವೆಬ್ ಸೈಟ್ ನ ಸ್ಥಾಪಕ ರವಿ ಅವರನ್ನು ಇತ್ತೀಚೆಗಷ್ಟೇ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ ಹಾಗೂ ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗರು ಆಗಿರುವ ಸಜ್ಜನರ್ ಅವರನ್ನು ಭೇಟಿಯಾಗಿ ಖುದ್ದಾಗಿ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ:ಸಂಕಷ್ಟದಲ್ಲಿ ರಿಷಬ್ ಶೆಟ್ಟಿಯ ತೆಲುಗು ಸಿನಿಮಾ, ನಿರ್ದೇಶಕನ ವಿರುದ್ಧ ದೂರು
ತನ್ನ ಲಾಭಕ್ಕಾಗಿ ಸಿನಿಮಾ ಉದ್ಯಮವನ್ನು ಕೊಲ್ಲುತ್ತಿರುವ ಅಪಾಯಕಾರಿ ವ್ಯಕ್ತಿಗಳ ಜಾಲವನ್ನು ಅಂತ್ಯಗೊಳಿಸಿದ್ದಾರೆ. ಈ ಕಾರ್ಯದಲ್ಲಿ ಪೊಲೀಸರ ಚಾಣಾಕ್ಷತನ ನೋಡಿ ಹೆಮ್ಮೆಯಾಗಿದೆ. ಎಂದು ಚಿರಂಜೀವಿ ಹೇಳಿದರು. ಇಂತಹ ಕೆಲವು ದುರುಳರ ಅನೇಕ ಜನರು ಪೈರಸಿಯಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಮತ್ತು ಇಂದು ಅದು ಕೊನೆಗೊಳ್ಳಬೇಕು ಎಂದು ಅವರು ಹೇಳಿದರು.
ನಟ ನಾಗಾರ್ಜುನ ಸಹ ಮಾತನಾಡಿ, ‘ಈ ವಿಷಯದಲ್ಲಿ ವೈದ್ಯರು ಬಲು ಶೀಘ್ರವಾಗಿ ಪ್ರತಿಕ್ರಿಯಿಸಿ ದುಷ್ಟರನ್ನು ಹೆಡೆಮುರಿ ಕಟ್ಟಿರುವುದು ಅಭಿನಂದನಾರ್ಹ. ಈ ಆಪರೇಷನ್‌ನಲ್ಲಿ ತೊಡಗಿಸಿಕೊಂಡಿದ್ದ ಎಲ್ಲ ಪೊಲೀಸರಿಗೆ ತೆಲುಗು ಸಿನಿಮಾ ರಂಗದ ಕಡೆಯಿಂದ ಧನ್ಯವಾದ ಹೇಳುತ್ತೇನೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ